ಮಂಗಳಾದೇವಿ ನವರಾತ್ರಿ ಉತ್ಸವದ ಉದ್ಘಾಟನೆ – ವಿಡಿಯೋ

1:49 PM, Monday, October 16th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅ. 15ರಿಂದ 25ರ ವರೆಗೆ ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು ಅಕ್ಟೊಬರ್ 15ರಂದು ಬೆಳಗ್ಗೆ 9 ಗಂಟೆಗೆ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಮಂಗಳಾದೇವಿ ದೇವಸ್ಥಾನದ ಮಹತ್ವವನ್ನು ವಿವರಿಸಿದರು.

ಬೆಳಿಗ್ಗೆ ಭಜನಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ನೆರವೇರಿಸಿದರು.

ನವರಾತ್ರಿ ಮಹೋತ್ಸವದ ವೈದಿಕ ವಿಧಿ ವಿಧಾನಗಳು ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಜರುಗಲಿದೆ.

ನವರಾತ್ರಿ ದಿನಗಳಲ್ಲಿ ಮುಖ್ಯವಾಗಿ ಅಕ್ಟೊಬರ್ 19ರಂದು ಶ್ರೀ ಲಲಿತಾ ಪಂಚಮಿ, ಅಕ್ಟೊಬರ್ 20ರಂದು ರಾತ್ರಿ ಬಲಿ ಉತ್ಸವಾರಂಭ, ಅಕ್ಟೊಬರ್ 23ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡರಂಗಪೂಜೆ, ಸಣ್ಣ ರಥೋತ್ಸವ ನಡೆಯಲಿದೆ

ಅಕ್ಟೊಬರ್ 24ರ ವಿಜಯ ದಶಮಿಯ ಬೆಳಗ್ಗೆ 9.30ರಿಂದ ವಿದ್ಯಾರಂಭ ಹಾಗೂ ತುಲಾಭಾರ ಸೇವೆ ನಡೆಯಲಿದೆ. ಬೆಳಗ್ಗೆ 8 ಗ್ರಾಮಗಳ ಭಕ್ತರಿಗೆ ತೆನೆ ನೀಡಲಾಗುತ್ತದೆ. ಮಧ್ಯಾಹ್ನ 12.30ಕ್ಕೆ ರಥಾರೋಹಣ ಹಾಗೂ ಸಂಜೆ 7 ಗಂಟೆಗೆ ರಥೋತ್ಸವ, ಹಾಗೂ ಅಕ್ಟೊಬರ್ 25ರಂದು ಅವಬೃತ ಮಂಗಳ ಸ್ನಾನ, ಅಕ್ಟೊಬರ್ 26ರಂದು ಸಾರ್ವ ಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ನವರಾತ್ರಿ ಸಂದರ್ಭ ಶ್ರೀದೇವಿಗೆ 10 ದಿನಗಳಲ್ಲಿ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷ ಮರ್ದಿನಿ, ಚಂಡಿಕೆ, ಸರಸ್ವತಿ, ಮಂಗಳಾದೇವಿಯ ಅಲಂಕಾರ ಮಾಡಲಾಗುತ್ತದೆ.

ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ ಆನುವಂಶಿಕ ಮೊಕ್ತೇಸರ ಜಿ. ರಘುರಾಮ ಉಪಾಧ್ಯಾಯ, ಪರ್ಯಾಯ ಪ್ರಧಾನ ಅರ್ಚಕರಾದ ಎನ್. ವಾಸುದೇವ ಐತಾಳ, ಎಸ್. ಹರೀಶ್ ಐತಾಳ, ಬೋರ್ಡ್ ಟ್ರಸ್ಟಿಗಳಾದ ಬಿ., ರಾಮ ನಾಯ್ಕ ಕೋಟೆಕಾರು, ಪ್ರೇಮಲತಾ ಎಸ್. ಕುಮಾರ್ ಮಾರ್ಗದರ್ಶನದಲ್ಲಿ ನವರಾತ್ರಿ ಮಹೋತ್ಸವ ಜರುಗಲಿದೆ.

ಪ್ರತಿದಿನ ಸಂಜೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಬಾರಿ ದೇವಾಲಯದ ರಥಬೀದಿಯಲ್ಲಿಸುಮಾರು 82 ಸ್ಟಾಲ್‌ಗಳನ್ನು ದೇವಾಲಯವು ಮೊದಲ ಬಾರಿಗೆ ಹರಾಜು ಮಾಡಿದೆ. ದೇವಸ್ಥಾನ

ಈ ಬಾರಿ ದೇವಾಲಯದ ರಥಬೀದಿಯಲ್ಲಿಸುಮಾರು 82 ಸ್ಟಾಲ್‌ಗಳನ್ನು ದೇವಾಲಯವು ಮೊದಲ ಬಾರಿಗೆ ಹರಾಜು ಮಾಡಿದೆ. ದೇವಸ್ಥಾನದ ಸುಮಾರು ಒಂದು ಕಿಲೋಮೀಟಗಳಷ್ಟು ರಸ್ತೆ ವಿದ್ಯುತ್ ದೀಪಗಳಿಂದ ಅಲಂಕಾರಗೊಡಿದೆ.

ಸುಮಾರು ಒಂದು ಕಿಲೋಮೀಟಗಳಷ್ಟು ರಸ್ತೆ ವಿದ್ಯುತ್ ದೀಪಗಳಿಂದ ಅಲಂಕಾರಗೊಡಿದೆ.

ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ಪೂಜೆ, ಬಲಿ ಉತ್ಸವಗಳು ಪ್ರತಿದಿನ ಸಂಜೆ 4 ರಿಂದ ಮೆಗಾ ಮೀಡಿಯಾ ನ್ಯೂಸ್ ನ ಯೌಟ್ಯೂಬ್ ಹಾಗೂ ಫೇಸ್ ಬುಕ್ ಪೇಜ್ ಗಳಲ್ಲಿ ಪ್ರಸಾರ ಆಗಲಿದೆ

ವಿಡಿಯೋ – ನೇರಪ್ರಸಾರ ಮೆಗಾ ಮೀಡಿಯಾ ನ್ಯೂಸ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English