ಭಾರತವು ಥಾಯ್ಲೆಂಡ್ ಗೆ ಉತ್ತಮ ಮಾರುಕಟ್ಟೆಯಾಗಿದೆ :ಸೆಥಫನ್ ಬುದ್ದಾನಿ

6:04 PM, Saturday, January 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

tourism in Thailandಮಂಗಳೂರು : ಭಾರತದಿಂದ ಥಾಯ್ಲ್ಯಾಂಡ್ ಗೆ  ಹೆಚ್ಚಿನ ಪ್ರವಾಸಿಗರು ಪ್ರವಾಸ ಹೋಗುತ್ತಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ  ಟೂರಿಸಂ ಅಥಾರಿಟಿ ಆಫ್ ಥಾಯ್ಲೆಂಡ್(ಟಿಎಟಿ) ವತಿಯಿಂದ ನಗರದಲ್ಲಿ ಜನವರಿ 11 ಶುಕ್ರವಾರದಂದು ಹೋಟೆಲ್ ಗೇಟ್ ವೇ ನಲ್ಲಿ ಥಾಯ್ಲೆಂಡ್ ಸಂಸ್ಕೃತಿ, ಪರಂಪರೆಯನ್ನು ಸಾರುವ ನೃತ್ಯ ಕಾರ್ಯಕ್ರಮ ಹಾಗೂ ಕಲೆಗಳನ್ನು ಪ್ರದರ್ಶಿಸಲಾಯಿತು.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ (ಟಿಎಟಿ) ಮುಂಬಯಿ ಕಚೇರಿಯ ನಿರ್ದೇಶಕ ಸೆಥಫನ್ ಬುದ್ದಾನಿ ಮಾತನಾಡಿ ಮಂಗಳೂರು ಸೇರಿದಂತೆ ದಕ್ಷಿಣ ಭಾರತವನ್ನು ನಮ್ಮ ದೇಶದ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು, ಈಗಾಗಲೆ ಭಾರತದ ಸಣ್ಣ ಸಣ್ಣ ನಗರಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ ಹಾಗೂ ನಮ್ಮಲ್ಲಿರುವ ಪ್ರವಾಸಿ ಸ್ಥಳಗಳು, ಸೌಲಭ್ಯಗಳು ಹಾಗೂ ಕೊಡುಗೆಗಳನ್ನು ಇಲ್ಲಿಯವರಿಗೆ ತಿಳಿಯಪಡಿಸುವ ದೃಷ್ಟಿಯಿಂದ ನಾವು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಮತ್ತು 2012 ಉತ್ತಮ ವರ್ಷವಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಸರಿಸುಮಾರು ಒಂದು ಮಿಲಿಯನ್ ದಾಟಿರಬಹುದು ಎಂದರು. ಭಾರತದಿಂದ ಥಾಯ್ಲೆಂಡ್ ಗೆ ಆಗಮಿಸುವ ಪ್ರವಾಸಿಗರು ಹೆಚ್ಚಾಗಿದ್ದು ಭಾರತವು ಥಾಯ್ಲೆಂಡ್ ಗೆ ಉತ್ತಮ ಮಾರುಕಟ್ಟೆಯಾಗಿದೆ ಎಂದವರು ಹೇಳಿದರು.

ಟಿಎಟಿಯು ವೈದ್ಯಕೀಯ ಪ್ರವಾಸೋದ್ಯಮ, ವಿವಾಹ, ಗಾಲ್ಫ್, ಬೈಕಿಂಗ್ ಹಾಗೂ ಪರಿಸರ ಪ್ರವಾಸೋದ್ಯಮ ಕುರಿತು ಪ್ರವಾಸಗಳನ್ನು ಆಯೋಜಿಸುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಭಾರತೀಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಟಿಎಟಿ ಬ್ಯಾಂಗ್ ಕಾಕ್ ನ ದಕ್ಷಿಣ ಏಷ್ಯಾ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶ ಹಾಗೂ ಆಸಿಯಾನ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಫನೊಮ್ ಕರಿಬುತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English