ಪತ್ರಿಕೆ ಛಾಯಾಗ್ರಾಹಕನ ಮೇಲೆ ಪತ್ನಿ ಮತ್ತು ಪ್ರಿಯಕರ ಸೇರಿ ಕಾರು ಹತ್ತಿಸಿ ಕೊಲೆಯತ್ನ, ದೂರು ದಾಖಲು

1:50 PM, Saturday, January 27th, 2024
Share
1 Star2 Stars3 Stars4 Stars5 Stars
(7 rating, 2 votes)
Loading...
ಆರೋಪಿ ಶಿವಪ್ರಸಾದ್‌ ಶೆಟ್ಟಿ

ಬಂಟ್ವಾಳ : ಸರಕಾರೀ ಶಾಲೆಯ ಶಿಕ್ಷಕಿಯೊಬ್ಬರು ತನ್ನ ಸಹೋದ್ಯೋಗಿಯ ಜತೆಗೆ ಸೇರಿಕೊಂಡು ಪತಿಯ ಮೇಲೆ ಕಾರು ಹತ್ತಿಸಿ ಕೊಲೆಯತ್ನ ನಡೆಸಿರುವ ಘಟನೆಯು ಬಂಟ್ವಾಳ ಪಾಣೆಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಪತಿ ಕಿಶೋರ್ ಕುಮಾರ್ ಎದೆನೋವಿನಿಂದಾಗಿ ಆಸ್ಪತ್ರೆ ಸೇರಿದ್ದಾರೆ.

ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಮಂಚಿ ಎಂಬವರ ಮೇಲೆ ದೂರು ದಾಖಲಾಗಿದೆ.

ಸರಕಾರೀ ಶಾಲೆಯ ಶಿಕ್ಷಕಿ ಶುಭಾ ಅವರು ಕಿಶೋರ್ ಕುಮಾರ್ ಬೋಳಾರ್ ಅವರನ್ನು 2008 ರಲ್ಲಿ ಮದುವೆಯಾಗಿದ್ದರು. ಅವರಿಗೆ ಈಗ 12 ವರ್ಷದ ಹೆಣ್ಣು ಮಗಳು ಕೂಡ ಇದ್ದಾಳೆ. ಬಳಿಕ ತನ್ನ ಸ್ವಂತ ಹಣದಿಂದ ಮೆಲ್ಕಾರಿನ ಸಾರಾ ಆರ್ಕೆಡ್‌ನಲ್ಲಿ ಕಿಶೋರ್ ವಸತಿ ಗೃಹವೊಂದನ್ನು ಕೂಡ ಖರೀದಿ ಮಾಡಿದ್ದರು. ಪತ್ನಿ ಹಾಗೂ ಮಗಳೊಂದಿಗೆ ಇಲ್ಲೇ ವಾಸವಾಗಿದ್ದರು. ಈ ಮದ್ಯೆ ಶುಭಾ ಅವರ ಸಹೋದ್ಯೋಗಿ ಶಿವಪ್ರಸಾದ್‌ ಶೆಟ್ಟಿ “ಹಾಯ್ ಮುದ್ದು” ಎಂಬ ಸಂದೇಶವನ್ನು ಮೊಬೈಲಿಗೆ ರವಾನಿಸಿ ಸಂಸಾರವನ್ನು ಹಾಳು ಮಾಡಿದ್ದಾನೆ. ಕಿಶೋರ್ ಇದನ್ನು ಆಕ್ಷೇಪಿಸಿದ್ದಾರೆ. ಘಟನೆಯ ಬಳಿಕ ಕೌಟುಂಬಿಕ ಕಲಹ ಆರಂಭವಾಗಿದೆ. ಕಿಶೋರ್ ಅವರ ಪತ್ನಿ ಶುಭಾ ಮೇ 13, 2021ರಂದು ತವರು ಮನೆಗೆ ಹೋಗಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಿಶೋರ್ ಇದಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು. ಇದಕ್ಕೆ ಕಿಶೋರ್ ತಡೆಯಾಜ್ಞೆ ತಂದಿದ್ದರು.

ಇದೇ ವೇಳೆ ಶುಭಾ ಮೆಲ್ಕಾರಿನ ಸಾರಾ ಆರ್ಕೆಡ್‌ನಲ್ಲಿರುವ ಮನೆಯನ್ನು ತೆರವುಗೊಳಿಸಬೇಕೆಂದು ದಾವೆ ಹೂಡಿರುವರು. ಇದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಕಿಶೋರ್ ಕುಮಾರ್ ಜ.23ರಂದು ಮೆಲ್ಕಾರಿನಲ್ಲಿರುವ ತನ್ನ ಮನೆಗೆ ಬಂದ ವೇಳೆ ಆರೋಪಿಗಳಾದ ಶುಭಾ, ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರು ರೌಡಿಗಳೊಂದಿಗೆ ಬಂದು ಮನೆ ಖಾಲಿ ಮಾಡುವಂತೆ ಧಮ್ಮಿ ಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ತಾರೀಕು 23.01.2024 ರಂದು ಸಂಜೆ 6:45 ಗಂಟೆಗೆ ಪಿರ್ಯಾದಿದಾರರು ತನ್ನ ಕೆಲಸದ ನಿಮಿತ್ತ ಹೊರಗಡೆ ಹೋಗಿ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಸಾರಾ ಆರ್ಕೆಡ್ ನಲ್ಲಿರುವ ತನ್ನ ವಸತಿ ಗೃಹ ನಂ 201 ಕ್ಕೆ ವಾಪಾಸು ಬಂದಿದ್ದಾಗ, ಆರೋಪಿ ಶಿವಪ್ರಸಾದ್ ಶೆಟ್ಟಿಯು ತಾನು ಶುಭಾಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಕೂಡ ಹೇಳಿಕೊಂಡಿದ್ದಾನೆ. ಈ ವೇಳೆ ಶುಭಾ ಮನೆಯ ಕೀಲಿಗೈ ತೆಗೆಯುತ್ತಿದ್ದಾಗ ಕಿಶೋರ್ ತಡೆಯಲು ಮುಂದಾದ ವೇಳೆ ಅವರಿಗೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಬಳಿಕ ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ವೇಳೆ ಕಿಶೋರ್ ತಡೆದಾಗ ಶಿವಪ್ರಸಾದ್, ಕಿಶೋರ್ ಅವರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆ ಮತ್ತು ಕಾರು ಢಿಕ್ಕಿಯ ಆಘಾತದಿಂದ ಕಿಶೋರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ಮತ್ತೆ ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English