ಉರ್ವ ಶ್ರೀ ಮಾರಿಯಮ್ಮ ದೇವರ ಪುನರ್ ಪ್ರತಿಷ್ಟೆ ಸಂಭ್ರಮ, ಸೊಬಗು – ವಿಡಿಯೋ

10:26 PM, Tuesday, February 13th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಸುಮಾರು 600 ವರ್ಷಗಳ ಇತಿಹಾಸವಿರುವ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಬ್ರಹ್ಮಕಲಶದ ಸಂಭ್ರಮ ಆರಂಭಗೊಂಡಿದೆ.

ಫೆಬ್ರವರಿ 13ರ ಮಂಗಳವಾರ ಬಾಲಾಲಯದಲ್ಲಿದ್ದ ಶ್ರೀ ಮಾರಿಯಮ್ಮ ದೇವರನ್ನು ಗರ್ಭಗುಡಿಗೆ ವಾದ್ಯಘೋಷಗಳೊಂದಿಗೆ ತಂದು ವಿಜೃಂಭಣೆಯಿಂದ ಪುನರ್ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ಪ್ರತಿಷ್ಠಾಕಲಶ, ಪಂಚಬ್ರಹ್ಮ ಮಹಾಮಂತ್ರ ಹೋಮ ನಡೆಯಿತು.

ಬ್ರಹ್ಮಕಲಶದ ವಿಧಿ ವಿಧಾನಗಳು ಫೆಬ್ರವರಿ 11 ರಿಂದ 15 ರ ವರೆಗೆ ನಡೆದು ಫೆಬ್ರವರಿ 15 ರಂದು ಬೆಳಗ್ಗೆ 8.12 ರ ಸುಮೂಹೂರ್ತದಲ್ಲಿ ಶ್ರೀ ಮಾರಿಯಮ್ಮ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರತಿ ದಿನ ವೈದಿಕ ವಿಧಿ ವಿಧಾನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ನಡೆಯುತ್ತಿದೆ.

ಸುಮಾರು 600 ವರ್ಷಗಳ ಹಿಂದೆ ಮೊಗವೀರರ ಹಳ್ಳಿಯಲ್ಲಿ ವಾಸಿಸುತ್ತಿದ್ದ ‘ಚುಲ್ಲಿ ಗುರಿಕಾರ’ ಕುಟುಂಬದ ವ್ಯಕ್ತಿಯೊಬ್ಬರು ವ್ಯಾಪಾರ ಭೇಟಿಗಾಗಿ ಘಟ್ಟ ಪ್ರದೇಶಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ, ಯಾವುದೋ ದೈವಿಕ ಶಕ್ತಿಯು ತನ್ನನ್ನು ಹಿಂಬಾಲಿಸುತ್ತಿದೆ ಎಂದು ಅವರು ಭಾವಿಸಿದರು ಮತ್ತು ಅವರ ದೇಹವು ಅಲುಗಾಡಲು ಮತ್ತು ನಡುಗಲು ಪ್ರಾರಂಭಿಸಿದೆ ಎಂದು ಅವರಿಗೆ ಭಾಸವಾಯಿತು, ಅಂದರೆ ದೇವಿಯು ಮಾನವ ದೇಹವನ್ನು ಪ್ರವೇಶಿಸಿ ಅವರ ಮೂಲಕ ಮಾತನಾಡುತ್ತಾಳೆ. ತನ್ನೊಂದಿಗೆ ತಾನು ವಾಸಿಸುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ದೇವರು ಅವರಿಗೆ ಹೇಳಿದಂತೆ ಬಾಸವಾಗುತ್ತದೆ. ನಂತರ ಅವರು ಉರ್ವಾವನ್ನು ತಲುಪಿದರು ಮತ್ತು ಅಲ್ಲಿ ದೇವಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು ಎಂದು ಕಥೆಗಳಲ್ಲಿ ಹೇಳಲಾಗಿದೆ.

ಮೊಗವೀರ ಸಮಾಜದ ಏಳು ಪಟ್ಟಣಗಳ ಸದಸ್ಯರು ಕುದ್ರೋಳಿಯಿಂದ ಹೊಸಬೆಟ್ಟುವರೆಗೆ ಸಭೆ ನಡೆಸಿ ಉರ್ವಾದಲ್ಲಿ ದೇವಾಲಯ ನಿರ್ಮಿಸಲು ಸಹಕಾರ ನೀಡಿದರು ಎಂಬ ಐತಿಹ್ಯವಿದೆ.

ಇಂದಿಗೂ ಮೊಗವೀರರು ತಮ್ಮ ಕುಲ ಕಸುಬು ಮೀನು ಹಿಡಿಯಲು ಹೊರಡುವ ಮುನ್ನ ಮಾರಿಯಮ್ಮ ದೇವರನ್ನು ಪ್ರಾರ್ಥಿಸುತ್ತಾರೆ. ಹರಕೆ ರೂಪದಲ್ಲಿ ಚಿನ್ನದ ಮೀನಿನ ಸರ, ಚಿನ್ನದ ನಾಣ್ಯಗಳನ್ನು ಸಮರ್ಪಿಸುತ್ತಾರೆ.

ಉರ್ವ ಶ್ರೀ ಮಾರಿಯಮ್ಮ ದೇವರಿಗೆ ಸುಮಾರು 19 ವರ್ಷಗಳ ಬಳಿಕ ನಡೆಯುವ ಬ್ರಹ್ಮಕಲಶದ ಸಂಭ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಇತರೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕರು ಭಾಗವಹಿಸಿ ಪುನೀತರಾಗುತ್ತಿದ್ದಾರೆ.

ವಿಡಿಯೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English