ಮಂಗಳೂರು : ನಾನು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಅನೇಕ ಸಚಿವರ ಮೇಲೆ ಪ್ರತಿ ದಿನ ಅನೇಕ ದೂರುಗಳು ಬರುತ್ತಿವೆ. ರಾಜ್ಯದ ಬಹುಮಂದಿ ಸಚಿವರು ಜನಸೆವೆಗಿಂತ ವಿವಿಧ ವ್ಯವಹಾರಗಳಲ್ಲಿ ನಿರತರಾಗಿದ್ದಾರೆ, ಪ್ರಗತಿಶೀಲವಾದ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ವಿಷಾದದ ಸಂಗತಿ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಖಾಸಗಿ ಸಮಾರಂಭದ ಮೇಲೆ ಮಂಗಳೂರಿಗೆ ಆಗಮಿಸಿದ ಅವರು ಸರ್ಕಿಟ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯಕ್ಕೆ ಲೋಕಾಯುಕ್ತರನ್ನು ನೇಮಿಸುವಂತೆ ಈಗಾಗಲೇ ಸೂಚಿಸಲಾಗಿದೆ ಆದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟ್ ಲೋಕಾಯುಕ್ತರನ್ನು ನೇಮಿಸುವಂತೆ ಆದೇಶ ಹೊರಡಿಸಿದೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ ಸ್ವಾಗತಾರ್ಹ ವಿಷಯವಾಗಿದೆ ಆದರೆ ಇವುಗಳ ನಿರ್ವಹಣೆ ಶ್ರೇಷ್ಠ ಗುಣಮಟ್ಟದಿಂದ ಕೂಡಿರಬೇಕು. ಅಲ್ಪಸಂಖ್ಯಾತರಿಗಾಗಿ ಕೇಂದ್ರ ರಾಜ್ಯದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಸ್ವಾಗತಾರ್ಹ. ಈ ವಿಶ್ವವಿದ್ಯಾಲಯಗಳಿಗೆ ಟಿಪ್ಪು ಸುಲ್ತಾನ್ ಹೆಸರು ಇಡುವುದು ಉತ್ತಮ ವಿಚಾರ ಟಿಪ್ಪು ಸುಲ್ತಾನ್ ಈ ರಾಷ್ಟ್ರ ನಾಯಕ ಎಂದರು.
Click this button or press Ctrl+G to toggle between Kannada and English