ಬೆಂಗಳೂರಿನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ

Thursday, January 23rd, 2014
National-Flag

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಸ್ಟೀಲ್ ನಿಂದ ನಿರ್ಮಿತವಾದ 210 ಅಡಿಗಳ ಎತ್ತರದ ಅತೀ ದೊಡ್ಡ ದ್ವಜ ಸ್ತಂಭ. ಆ ಧ್ವಜ ಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 35 ಕೆಜಿ ತೂಕದ ರಾಷ್ಟ್ರಧ್ವಜವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇಂದು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಬಹುದೊಡ್ಡ ರಾಷ್ಟ್ರಧ್ವಜ ರಾರಾಜಿಸಿದೆ. ಈ ಸಮಾರಂಭದಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹಾಜರಿದ್ದು,ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. […]

ಟಿಪ್ಪು ಒಬ್ಬ ರಾಷ್ಟ್ರ ನಾಯಕ ; ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌

Thursday, January 17th, 2013
HR Bharadwaj visit mangalore

ಮಂಗಳೂರು : ನಾನು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಅನೇಕ ಸಚಿವರ ಮೇಲೆ ಪ್ರತಿ ದಿನ ಅನೇಕ ದೂರುಗಳು ಬರುತ್ತಿವೆ. ರಾಜ್ಯದ ಬಹುಮಂದಿ ಸಚಿವರು ಜನಸೆವೆಗಿಂತ ವಿವಿಧ ವ್ಯವಹಾರಗಳಲ್ಲಿ ನಿರತರಾಗಿದ್ದಾರೆ, ಪ್ರಗತಿಶೀಲವಾದ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ವಿಷಾದದ ಸಂಗತಿ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಖಾಸಗಿ ಸಮಾರಂಭದ ಮೇಲೆ ಮಂಗಳೂರಿಗೆ ಆಗಮಿಸಿದ ಅವರು ಸರ್ಕಿಟ್‌ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯಕ್ಕೆ […]

26ನೇ ಮುಖ್ಯಮಂತ್ರಿಯಾಗಿ ಡಿ.ವಿ ಸದಾನಂದ ಗೌಡ ಪ್ರಮಾಣವಚನ

Thursday, August 4th, 2011
Sadananda Gowda sworn in/ ಸದಾನಂದ ಗೌಡ ಪ್ರಮಾಣ ವಚನ

ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಬಣದ ದೇವರಗುಂಡ ವೆಂಕಪ್ಪಗೌಡ ಸದಾನಂದ ಗೌಡ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸುಬ್ರಮಣ್ಯನಗರದ ತಮ್ಮ ನಿವಾಸದಿಂದ ರಾಜಭವನಕ್ಕೆ ಬೆಂಬಲಿಗರೊಂದಿಗೆ ಕ್ರೀಂ ಕಲರ್ ಪ್ಯಾಂಟ್, ಬಿಳಿ ಬಣ್ಣದ ಅಂಗಿ, ಬ್ಲ್ಯಾಕ್ ಕಲರ್ ಶೂ ಧರಿಸಿ ಆಗಮಿಸಿದರು. ನಂತರ ಬಿ.ಎಸ್.ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಪಕ್ಷದ ಹಿರಿಯ ಮುಖಂಡರು, ಆಪ್ತರಿಗೆ ಕೈಕುಲುಕುವ ಮೂಲಕ ಅಭಿನಂದನೆ ಸ್ವೀಕರಿಸಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ರಾಗ, ದ್ವೇಷ ಇಲ್ಲದೆ, […]

ಬಿಜೆಪಿ ಸರಕಾರ ಇಕ್ಕಟ್ಟಿನಲ್ಲಿ 20 ಮಂದಿ ಬಿಜೆಪಿ ಶಾಸಕರ ಬೆಂಬಲ ವಾಪಸ್

Wednesday, October 6th, 2010
yeddyurappa

ಬೆಂಗಳೂರು : ಬಂಡಾಯದ ಬಾವುಟ ಹಾರಿಸಿರುವ  20 ಮಂದಿ ಬಿಜೆಪಿ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ಗೆ ಸಲ್ಲಿಸಿದ್ದಾರೆ. ಆರು ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 20 ಮಂದಿ  ಬಿಜೆಪಿ ಶಾಸಕರು ಪಕ್ಷೇತರ ಸಚಿವ ನರೇಂದ್ರ ಸ್ವಾಮಿ ಮೂಲಕ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಕಮಲದ  ಭಿನ್ನಮತ ಉಂಟು ಮಾಡಲು ಸಫಲರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ  ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ […]