ಬೆಂಗಳೂರಿನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ

3:18 PM, Thursday, January 23rd, 2014
Share
1 Star2 Stars3 Stars4 Stars5 Stars
(No Ratings Yet)
Loading...

National-Flagಬೆಂಗಳೂರು: ಬೆಂಗಳೂರಿನಲ್ಲಿ ಇಂದು ಅತೀ ದೊಡ್ಡ ರಾಷ್ಟ್ರಧ್ವಜ ಉದ್ಘಾಟನೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಸ್ಟೀಲ್ ನಿಂದ ನಿರ್ಮಿತವಾದ 210 ಅಡಿಗಳ ಎತ್ತರದ ಅತೀ ದೊಡ್ಡ ದ್ವಜ ಸ್ತಂಭ. ಆ ಧ್ವಜ ಸ್ತಂಭದಲ್ಲಿ 48 ಅಡಿ ಉದ್ದ, 72 ಅಡಿ ಅಗಲದ, 35 ಕೆಜಿ ತೂಕದ ರಾಷ್ಟ್ರಧ್ವಜವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇಂದು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ ಬಹುದೊಡ್ಡ ರಾಷ್ಟ್ರಧ್ವಜ ರಾರಾಜಿಸಿದೆ. ಈ ಸಮಾರಂಭದಲ್ಲಿ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹಾಜರಿದ್ದು,ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಾಜ್ಯಪಾಲರು ರಿಮೋಟ್ ಕಂಟ್ರೋಲ್ ಮೂಲಕ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರೀಯ ಸೈನಿಕ ಸ್ಮಾರಕ ನಿರ್ವಹಣಾ ಟ್ರಸ್ಟ್ ವತಿಯಿಂದ ಇದು ನೆರವೇರಿದೆ. ಬಾನಿನಲ್ಲಿ ಬೃಹತ್ ಬಾವುಟ ರಾರಾಜಿಸಿತು. ಈ ಧ್ವಜ ಬೆಂಗಳೂರಿನ ಮೂಲೆ ಮೂಲೆಗೆ ಕಾಣಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English