ಬಾರ ಗೆಳತಿ, ಯಾಕ ಅಳತಿ
ತಡವಾಯ್ತು ಶಾಲೆಗೆ
ಹೋಗೋಣ ಬಾ
ನಾವು ಹೋಗೋಣ ಬಾ.
ನಾವು ಹೋಗೋಣ ಬಾ…..
ಗುರುವಿಗೆ ನಮಿಸುತ್ತ
ಪಾಠವನು ಕಲಿಯುತ್ತಾ
ಗೆಳೆಯರ ಜೊತೆಗೂಡಿ
ಆಡೋಣ ಬಾ
ನಾವು ಆಡೋಣ ಬಾ…..
ನಾಡಿನ ವೀರರ
ಚೆರಿತ್ರೆಯ ಓದಿ
ಅವರೆಂತೆ ನಾವು
ಆಗೋಣ ಬಾ
ನಾವು ಆಗೋಣ ಬಾ…..
ಶಾಲೆಯ ಸ್ವಚ್ಛತೆ
ನಮ್ಮಯಾ ಹೊಣೆ,
ಗಿಡ, ಸಸಿಗಳಿಗೆ
ನೀರುಣಿಸೋಣ ಬಾ
ನಾವು ನೀರುಣಿಸೋಣ ಬಾ…..
ಶಾಲೆಯಲಿ ಕಲಿತ
ನೀತಿ ಪಾಠಗಳ
ಮನದಲ್ಲಿರಿಸಿ,
ಮನೆ ಮಂದಿಗೆಲ್ಲ
ತಿಳಿಸೋಣ ಬಾ
ನಾವು ತಿಳಿಸೋಣ ಬಾ…..
✍ ಮಂಜುನಾಥ ಗುತ್ತೇದಾರ.
ಸುಂಕೇಶ್ವರಹಾಳ, (ದೇವಸೂಗೂರು)
ಶಕ್ತಿನಗರ. – 584170.
ತಾ//ಜಿ// ರಾಯಚೂರು.
Click this button or press Ctrl+G to toggle between Kannada and English