ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಬಾದಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವುದನ್ನು ಗಮನಿಸಿ ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಡೆಂಗ್ಯೂ ನಿಮೂ೯ಲನೆ ಸಮಿತಿಯ ಸಭೆ ಜರಗಿತು.
ಸಭೆಯಲ್ಲಿ ಮಾತನಾಡಿದ ಮೇಯರ್ ರವರು ಡೆಂಗ್ಯೂಯನ್ನು ತಡೆಗಟ್ಟಲು ಮೊತ್ತ ಮೊದಲನೇಯದಾಗಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು. ಪಾಲಿಕೆಯ ಎಂ.ಪಿ.ಡಬ್ಲ್ಯೂ ಕಾಯ೯ಕತ೯ರು ಮನೆ ಮನೆ ಭೇಟಿ ನೀಡಿ ಮನೆಯ ಸುತ್ತ ಮುತ್ತಲುನಲ್ಲಿರುವ ತ್ಯಾಜ್ಯ ಮತ್ತು ಯಾವುದೇ ಬಿಸಾಡುವಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎನ್ನುವ ಮಾಹಿತಿಯನ್ನು ಒದಗಿಸಿದರು. ಇದನ್ನು ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸಾವ೯ಜನಿಕರು ತಮ್ಮ ತಮ್ಮ ಮನೆಯ ಸುತ್ತ ಮುತ್ತ ಸ್ವಚ್ಚವಾಗಿ ಇರಿಸಲು ಆಸಕ್ತಿ ವಹಿಸಿದರೆ ಉತ್ತಮ ಎಂದು ಸಲಹೆ ನೀಡಿದರು. ಇದರಿಂದ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದಾಗಿದೆ ಎನ್ನುವ ಮಾಹಿತಿ ತಿಳಿಸಿದರು. ಪಾಲಿಕೆಯಲ್ಲಿ ಹಾಲಿ 22 ಜನ ಸ್ಪ್ರೇಯರ್ಸ್ ಗಳು ಕಾಯ೯ ನಿವ೯ಹಿಸುತ್ತಿದ್ದು, ಇನ್ನು ಹೆಚ್ಚುವರಿಯಾಗಿ 38 ಮಂದಿಯನ್ನು ಹೊರಗುತ್ತಿಗೆಯಲ್ಲಿ ಪಡೆದು ವಾಡಿ೯ಗೆ ಪ್ರತಿ 60 ವಾಡಿ೯ಗೆ ಒಬ್ಬರು ಸ್ಪ್ರೇಯರ್ಸ್ ರವರು ಕತ೯ವ್ಯ ನಿವ೯ಹಿಸಲು ಕ್ರಮ ವಹಿಸುವಂತೆ ನಿಣ೯ಯಿಸಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಖಾಸಗಿ ಆಸ್ಪತ್ರೆಗಳಾದ ಕೆ.ಎಂ.ಸಿ, ಎ.ಜೆ., ಶ್ರೀನಿವಾಸ್, ಫಾದರ್ ಮುಲ್ಲರ್, ಯೆನೆಪೋಯ, ಕೆ.ಎಸ್ ಹೆಗ್ಡೆ ಯವರು ಪಾಲಿಕೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾದ ಮಲೇರಿಯ, ಡೆಂಗ್ಯೂ ರಕ್ತ ಪರೀಕ್ಷಾ ಸಾಮಾಗ್ರಿ, ನೀಮ್ ಎಣ್ಣೆ, ಮುಂತಾದ ಸಾಮಾಗ್ರಿಗಳನ್ನು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಸಂಪಕಿ೯ಸಿ ಈ ಎಲ್ಲಾ ಸಾಮಾಗ್ರಿಗಳನ್ನು ಪಾಲಿಕೆಗೆ ಪೊರೈಸುವಂತೆ ಎಲ್ಲಾ ಆಸ್ಪತ್ರೆಗಳಿಗೆ ಈ ಮೂಲಕ ಕೋರಲಾಗಿದೆ. ಪಾಲಿಕೆಯಿಂದ ನೋಡಲ್ ಅಧಿಕಾರಿಯಾಗಿ ಡಾ| ಮಂಜಯ್ಯ ಶೆಟ್ಟಿಯವರನ್ನು ನಿಯೋಜಿಸಲಾಯಿತು.
ಮುಖ್ಯವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಖಾಸಗಿಯವರ ಮಾಲಿಕತ್ವದಡಿಯಲ್ಲಿ ಖಾಲಿ ಜಾಗಗಳು ಪಾಳು ಬಿದ್ದಿದ್ದು, ಸದ್ರಿ ಜಾಗಗಳಲ್ಲಿ ಸರಿಯಾದ ನಿವ೯ಹಣೆವಿಲ್ಲದೆ ಹುಲ್ಲುಗಳು ಬೆಳೆದಿದ್ದು ಕಟಾವು ಮಾಡದೆ ಸದ್ರಿ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿತ್ತಿದ್ದು ಸದ್ರಿ ಜಾಗದ ಮಾಲಿಕರು ಈ ಕುರಿತು ತುತಾ೯ಗಿ ಕ್ರಮ ಕೈಗೊಳ್ಳದಿದ್ದಲ್ಲಿ ಪಾಲಿಕೆ ವ್ಯಾಪ್ತಿಯಿಂದ ಸದ್ರಿ ಸ್ಥಳಗಳ ಮಾಲಿಕರಿಗೆ ದಂಡ ವಿಧಿಸಲು ನಿಧ೯ರಿಸಲಾಯಿತು. ಈ ಕುರಿತು ಸಂಬಂಧ ಪಟ್ಟ ಮಾಲಿಕರು ಎಚ್ಚೆತ್ತುಕೊಂಡು ತಮ್ಮ ತಮ್ಮ ಜಾಗಗಳನ್ನು ಸ್ವಚ್ಚವಾಗಿಡಲು ಕ್ರಮವಹಿಸುವಂತೆ ಈ ಮೂಲಕ ಕೋರಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿಯವರು ಪ್ರಕಟಣೆ ನೀಡಿದರು.
ಸಭೆಯಲ್ಲಿ ಉಪಮೇಯರ್ ಸುನೀತ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಭರತ್ ಕುಮಾರ್ ಎಸ್, ತಾಲೂಕು ವೈದ್ಯಾಧಿಕಾರಿ ಡಾ| ನವೀನ್ ಕುಲಾಲ್, ಪಾಲಿಕೆಯ ಆರೋಗ್ಯ ಅಧಿಕಾರಿ ಡಾ| ಮಂಜಯ್ಯ ಶೆಟ್ಟಿ, ಪಾಲಿಕೆಯ ಸದಸ್ಯರಾದ ನವೀನ್ ಆರ್ ಡಿ ಸೋಜ, ಶಶಿಧರ್ ಹೆಗ್ಡೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು, ಪ್ರತಿನಿಧಿಗಳು, ಪಾಲಿಕೆಯ ಆರೋಗ್ಯ ನಿರೀಕ್ಷಕರುಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English