ಕೊಟ್ಟಾರ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ತಪ್ಪಿದ ಅಪಾಯ

4:12 PM, Tuesday, January 22nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Fire in car near kottaraಮಂಗಳೂರು : ನಗರದ ಕೊಟ್ಟಾರ ಜಂಕ್ಷನ್ ಬಳಿ ಸೋಮವಾರ ರಾತ್ರಿ ಮುನಾಫ್ ಶೇಖ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕಾಸರಗೋಡಿನಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭ ಕಾರಿನ ಮುಂಭಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರ ಹಾಗೂ ಅಗ್ನಿಶಾಮಕ ಇಲಾಖೆಯವರ ಸಕಾಲಿಕ ಕಾರ್ಯಾಚಣೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಮುನಾಫ್ ಶೇಖ್ ತಮ್ಮ ಕಾರನ್ನು ರಸ್ತಯ ಬದಿ ನಿಲ್ಲಿಸಿ ಕಾರಿನ ಮುಂಭಾಗದ ಕವಚವನ್ನು ತೆರೆಯಲು ಪ್ರಯತ್ನಿಸಿದಾಗ ಅದು ತೆರೆಯಲು ಸಾಧ್ಯವಾಗದ ಸಂದರ್ಭ ಕೂಡಲೇ ಕಾರ್ಯ ಪ್ರವೃತ್ತರಾದ ಅವರು ಕಾರಿನಲ್ಲಿದ್ದ ಅಗ್ನಿನಂದಕಗಳನ್ನು ಉಪಯೋಗಿಸಿ ಬೆಂಕಿಯನ್ನು ನಡಿಸಲು ಪ್ರಯತ್ನಿಸಿದರೂ ಬೆಂಕಿ ನಂದದ ಕಾರಣ ಆ ಕೂಡಲೆ ಅಗ್ನಿಶಾಮಕ ದಳಕ್ಕೆ ಸುದ್ದಿಮುಟ್ಟಿಸಿದರು. ಆ ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.

ಬೆಂಕಿ ಅವಘಡದಿಂದಾಗಿ ಕಾರಿನ ಇಂಜಿನ್ ಭಾಗ ಸುಟ್ಟುಹೋಗಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಅಥವಾ ಫ್ಯಾನ್ ಬೆಲ್ಟ್ ಸವೆತದಿಂದ ಉಂಟಾದ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಊಹಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English