ಕಾಸರಗೋಡು : ವಿದ್ಯಾರ್ಥಿನಿಯೋರ್ವಳ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕದಲ್ಲಿ ಗುರುವಾರ ಸಂಜೆ ನಡೆದಿದೆ.
ಬೇಡಡ್ಕದ ಅಶ್ವತಿ ( 17) ಮೃತಪಟ್ಟವಳು.
ಮನೆ ಸಮೀಪದ ಬಾವಿಯಲ್ಲಿ ಗುರುವಾರ ಸಂಜೆ ಮೃತದೇಹ ಪತ್ತೆಯಾಗಿದೆ. ಈಕೆ ಕುಂಡಂಗುಳಿ ಸರಕಾರಿ ಹಯರ್ ಸೆಕಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದಳು. ಗುರುವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದ ಈಕೆ ನಾಪತ್ತೆಯಾಗಿದ್ದಳು . ಸಂಜೆ ಯಾದರೂ ಮನೆಗೆ ಬರದೆ ಇದ್ದುದರಿಂದ ಮನೆಯವರು ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಮನೆಯವರು ಶೋಧ ನಡೆಸಿದಾಗ ಮನೆ ಸಮೀಪದ ಜನವಾಸ ಇಲ್ಲದ ಮನೆಯ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತದೇಹ ಕಸರಗೋಡಿ ಜನರಲ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದ್ದು , ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.
Click this button or press Ctrl+G to toggle between Kannada and English