ಕರ್ತವ್ಯ ಲೋಪ : ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ಅಮಾನತು

6:21 PM, Friday, January 25th, 2013
Share
1 Star2 Stars3 Stars4 Stars5 Stars
(No Ratings Yet)
Loading...

Konaje SI shivaprakashಮಂಗಳೂರು: ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ವಿರುದ್ಧ ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಮಂಗಳೂರು ಕಮೀಷನರ್ ಮನೀಷ್ ಖರ್ಬೀಕರ್ ಅಮಾನತು ಆದೇಶ ಹೊರಡಿಸಿದ್ದಾರೆ. ಕೊಲೆ ಪ್ರಕರಣವವೊಂದನ್ನು ಅಪಘಾತ ಎಂದು ಕೇಸು ದಾಖಲಿಸಿಕೊಂಡಿದ್ದಕ್ಕಾಗಿ ಕೊಣಾಜೆ ಶಿವಪ್ರಕಾಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ದೇರಳಕಟ್ಟೆ ನಿವಾಸಿ ರಝಾಕ್ ಎಂಬವರ ಪತ್ನಿ ಸೌದಾ(35) ಎಂಬವರನ್ನು ಡಿ. 6 ರಂದು ಅಬ್ದುಲ್ ರೆಹಮಾನ್ ಎಂಬಾತ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು.

ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ತನಿಖೆಗೆ ಮುಂದಾಗದೇ ಪ್ರಕರಣವನ್ನು ಆರೋಪಿ ರಝಾಕ್ ನೀಡಿದ ದೂರಿನಂತೆ ಅಪಘಾತವೆಂದೇ ದಾಖಲಿಸಿ ಕೊಂಡಿದ್ದರು.

ವಿದೇಶದಲ್ಲಿದ್ದ ಸೌದಾರ ಪತಿ ರಝಾಕ್ ಊರಿಗೆ ಹಿಂತಿರುಗಿ ಪತ್ನಿ ಅಪಘಾತದಿಂದ ಮೃತಪಟ್ಟಿಲ್ಲ, ಅದೊಂದು ವ್ಯವಸ್ಥಿತ ಕೊಲೆ ಅಬ್ದುಲ್ ರೆಹಮಾನ್ ಎಂಬಾತನೇ ಕೊಲೆ ನಡೆಸಿರುವುದಾಗಿ ನೇರವಾಗಿ ಕಮೀಷನರ್ ಅವರಿಗೆ ದೂರು ನೀಡಿದ್ದರು.

ಕಮೀಷನರ್ ಅವರ ಆದೇಶದಂತೆ ಅಪಘಾತ ಕಡತಕ್ಕೆ ಸಹಿ ಹಾಕಿದ್ದ ಠಾಣಾಧಿಕಾರಿ ಶಿವಪ್ರಕಾಶ್ ಅವರನ್ನು ಉಳ್ಳಾಲ ಇನ್ಸ್ಪೆಕ್ಟರ್ ಮದನ್ ಗಾಂವ್ಕರ್ ತನಿಖೆಗೆ ಒಳಪಡಿಸಿದ್ದರು. ಆರೋಪಿತ ರೆಹಮಾನ್ನನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಪ್ರಕರಣದಲ್ಲಿ ಆರೋಪಿ ರೆಹಮಾನನ ಸಂಬಂಧಿಯೇ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ಅಲ್ಲದೆ ಸಾಕ್ಷಿಯಾಗಿಯೂ ಆತನನ್ನೇ ಪರಿಗಣಿಸಲಾಗಿತ್ತು. ಕರ್ತವ್ಯ ಲೋಪವೆಸಗಿರುವ ಆರೋಪ ಕೊಣಾಜೆ ಎಸ್.ಐ ಶಿವಪ್ರಕಾಶ್ ಮೇಲಿತ್ತು. ವಿಚಾರಣೆ ಕೈಗೆತ್ತಿಕೊಂಡಿದ್ದ ಕಮೀಷನರ್ ಮನೀಷ್ ಖರ್ಬೀಕರ್ ಶಿವಪ್ರಕಾಶ್ ಅವರನ್ನು ನಿನ್ನೆ ಸಂಜೆ ವೇಳೆ ಕರ್ತವ್ಯದಿಂದ ವಜಾಗೊಳಿಸಿದ ಆದೇಶ ಹೊರಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English