ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನ

8:04 PM, Wednesday, October 6th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನಮಂಗಳೂರು : ಬಹುಮುಖ ಪ್ರತಿಭೆಯ ಹಿರಿಯ ರಂಗ ಕಲಾವಿದ, ಖ್ಯಾತ ರಂಗಕರ್ಮಿ ಎಂ.ಎಸ್. ಇಬ್ರಾಹಿಂ (78) ಇಂದು ಮುಂಜಾನೆ ಮಂಗಳೂರಿನ ಅವರ ನಿವಾಸದಲ್ಲಿ ನಿಧನರಾದರು. ಹಾಸ್ಯನಟರೂ, ತುಳು ಕನ್ನಡ, ಕೊಂಕಣಿ, ಇಂಗ್ಲಿಷ್ನಲ್ಲಿ 100 ಕ್ಕೂ ಅಧಿಕ ನಾಟಕಗಳನ್ನು ರಚಿಸಿರುವ ಶ್ರೀಯುತರು, ವರ್ಣಾಲಂಕಾರ ಪ್ರವೀಣರಾಗಿದ್ದರು. ಮಣ್ಣಗುಡ್ಡೆಯ ಎಂ.ಎಸ್. ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿರುವ ಎಂ.ಎಸ್.ಇಬ್ರಾಹಿಂ ಪತ್ನಿ ಮತ್ತು ಐವರು ಮಕ್ಕಳು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದ, ನಿರ್ದೇಶಿಸಿದ್ದ ಎಂ.ಎಸ್. ಇಬ್ರಾಹಿಂ ಅವರು ಕಲಾಭೂಷಣ, ವಿಶ್ವ ತುಳು ಕಲಾ ಪ್ರಶಸ್ತಿ, ಐತಾಳ ರೈ ಯಕ್ಷಗಾನದಲ್ಲಿ ಹಾಸ್ಯಗಾರ ಪ್ರಶಸ್ತಿ, ತುಳು ಕಲಾ ಕೇಸರಿ, ತುಳುನಾಡ ಕಲಾ ಕೇಸರಿ, ಕಲಾ ಭೀಷ್ಮ ಮತ್ತು ತುಳುಬಾನದ ಬೊಳ್ಳಿ ಹಾಗು ದ.ಕ.ಜಿಲ್ಲಾ ರಾಜ್ತೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English