ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನ

Wednesday, October 6th, 2010
ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನ

ಮಂಗಳೂರು : ಬಹುಮುಖ ಪ್ರತಿಭೆಯ ಹಿರಿಯ ರಂಗ ಕಲಾವಿದ, ಖ್ಯಾತ ರಂಗಕರ್ಮಿ ಎಂ.ಎಸ್. ಇಬ್ರಾಹಿಂ (78) ಇಂದು ಮುಂಜಾನೆ ಮಂಗಳೂರಿನ ಅವರ ನಿವಾಸದಲ್ಲಿ ನಿಧನರಾದರು. ಹಾಸ್ಯನಟರೂ, ತುಳು ಕನ್ನಡ, ಕೊಂಕಣಿ, ಇಂಗ್ಲಿಷ್ನಲ್ಲಿ 100 ಕ್ಕೂ ಅಧಿಕ ನಾಟಕಗಳನ್ನು ರಚಿಸಿರುವ ಶ್ರೀಯುತರು, ವರ್ಣಾಲಂಕಾರ ಪ್ರವೀಣರಾಗಿದ್ದರು. ಮಣ್ಣಗುಡ್ಡೆಯ ಎಂ.ಎಸ್. ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿರುವ ಎಂ.ಎಸ್.ಇಬ್ರಾಹಿಂ ಪತ್ನಿ ಮತ್ತು ಐವರು ಮಕ್ಕಳು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದ, ನಿರ್ದೇಶಿಸಿದ್ದ ಎಂ.ಎಸ್. ಇಬ್ರಾಹಿಂ ಅವರು […]

ಹಾಸ್ಯನಟ ಕೆ ಎಂ ರತ್ನಾಕರ್ ನಿಧನ

Tuesday, September 21st, 2010
ಹಿರಿಯ ಕಲಾವಿದ ಕೆ ಎಂ ರತ್ನಾಕರ್

ಮೈಸೂರು : ಹಾಸ್ಯನಟನಾಗಿ 350ಕ್ಕೂ ಹೆಚ್ಚು  ಚಿತ್ರಗಳಲ್ಲಿ ಅಭಿನಯಿಸಿದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಕೆ ಎಂ ರತ್ನಾಕರ್  ಇಂದು ಮಧ್ಯಾಹ್ನ ಮೈಸೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.  ಅವರು ಮೂತ್ರ ಜನಕಾಂಗದ ವೈಫಲ್ಯದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ  ದಾಖಲಾಗಿದ್ದರು. ಇನ್ನು ಅಭಿಮಾನಿಗಳಿಗೆ ಅವರು ಬರಿ ನೆನಪಷ್ಟೆ. ಹಾಸ್ಯನಟನಾಗಿ ಅವರದೇ ಆದ ಪ್ರೇಕ್ಷಕ ವರ್ಗವನ್ನು ನಿರ್ಮಿಸಿದ್ದಾರೆ.  ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ ಸಾಹಸ ಸಿಂಹ ವಿಷ್ಣುವರ್ಧನ್  […]