56 ಸಾಧಕರಿಗೆ ಮತ್ತು 20 ಸಂಸ್ಥೆಗಳಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

10:42 PM, Thursday, October 31st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಈ ಬಾರಿ 56 ಸಾಧಕರಿಗೆ ಮತ್ತು 20 ಸಂಸ್ಥೆಗಳಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು. ನವಂಬರ್ 1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಈ ಪ್ರಶಸ್ತಿಯನ್ನು ಪ್ರಧಾನಮಾಡಲಿದ್ದಾರೆ.

ಮರ್ಸಿ ವೀಣಾ ಡಿಸೋಜ ಕದ್ರಿ (ಸಮಾಜ ಸೇವೆ), ಪಾಣಿಲ ಸತೀಶ್ಚಂದ್ರ ಸಾಲ್ಯಾನ್ (ಕಂಬಳ), ಡಾ. ಬಿ.ಎಸ್. ಸಚ್ಚಿದಾನಂದ ರೈ ಲೇಡಿಹಿಲ್ (ವೈದ್ಯಕೀಯ), ಪದ್ಮರಾಜ್ ಕೋಟ್ಯಾನ್ ಪಡುಬೊಂಡಂತಿಲ (ಕೃಷಿ), ಮುಹಮ್ಮದ್ ಹನೀಫ್ ಕೂಳೂರು (ಕ್ರೀಡೆ), ಡಾ. ಆನಂದ ವೇಣುಗೋಪಾಲ್ ಮಣಿಪಾಲ (ವೈದ್ಯಕೀಯ), ಕೃಷ್ಣ ಹೆಗ್ಡೆ ಕೋಡಿಯಾಲ್‌ ಬೈಲ್ (ಸಮಾಜ ಸೇವೆ), ಜೆ. ಆನಂದ ಸೋನ್ಸ್ ಮಿಶನ್ ಕಾಂಪೌಂಡ್ (ಸಮಾಜ ಸೇವೆ), ಸುಹೈಲ್ ಕಂದಕ್ (ಸಾಮಾಜಿಕ/ಕ್ರೀಡೆ), ದಯಾನಂದ ಕೋಟ್ಯಾನ್ (ಸಮಾಜ ಸೇವೆ) ಹರ್ಬಟ್ ಡಿಸೋಜ ಕಡೆಕಾರ್ (ಸಮಾಜ ಸೇವೆ), ಆರೂರು ಲಕ್ಷ್ಮಿರಾವ್ ಪಳ್ನೀರ್ (ಸಮಾಜ ಸೇವೆ), ನಾಗೇಂದ್ರ ಕುಡುಪು (ವಿಶೇಷ ಪಂಚವಾದ್ಯ, ಚೆಂಡೆ, ಅತಿಥಿ ಕಲಾವಿದ), ವಿಲಿಯಂ ಆ್ಯಂಟನಿ ಡಿಸೋಜ ಕದ್ರಿ (ಪ್ರವಾಸೋದ್ಯಮ), ಪ್ರಭಾಕರ ಶ್ರೀಯಾನ್ ಕಂಕನಾಡಿ ಗುತ್ತು (ಸಮಾಜ ಸೇವೆ), ಜಯರಾಮ್ ಎಕ್ಕೂರು (ಕಲೆ), ಮುನಿತಾ ವೇಗಸ್ ರೋವ್ ಬೆಂದೂರು (ಸಂಗೀತ), ಲೀಲಾಧರ ಚಿತ್ರಾಪುರ (ಕಲೆ), ಅಬ್ದುಲ್ಲಾ ಮೋನು ಮೊಯ್ದಿನ್ ಖತರ್ (ಸಮಾಜ ಸೇವೆ), ಗಂಗಾಧರ ದೇವಾಡಿಗ ಕದ್ರಿ (ಕಲೆ), ಪುಷ್ಪರಾಜ್ ಬಿ.ಎನ್. (ಸುದ್ದಿ ಮಾಧ್ಯಮ), ಸುಖ್‌ಪಾಲ್ ಪೊಳಲಿ (ದೃಶ್ಯಮಾಧ್ಯಮ), ರೊನಾಲ್ಡ್ ಮಾರ್ಟಿನ್ ಕುಲಶೇಖರ (ಸಮಾಜ ಸೇವೆ), ರಾಜೇಂದ್ರ ಶೇರಿಗಾರ್ ಪಾವೂರು (ಕಲೆ), ಬಾಬು ಪಿಲಾರ್ (ಸಮಾಜ ಸೇವೆ), ಚಂದ್ರಹಾಸ ಶೆಟ್ಟಿ ಮೋರ್ಲ (ಕೃಷಿ/ಸಾಮಾಜಿಕ), ಕೆ. ಹುಸೈನ್ ಉಳ್ಳಾಲ (ಸಮಾಜ ಸೇವೆ), ರೊನಾಲ್ಡ್ ಫೆರ್ನಾಂಡೀಸ್ ಪೆರ್ಮುದೆ (ಕೃಷಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಯಕ್ಷಗಾನ), ನಾರಾಯಣ ಪರವ ಮಾಂಟ್ರಾಡಿ (ಕಲೆ), ಪ್ರಕಾಶ್ ಆಚಾರ್ಯ ಉಲ್ಲಂಜೆ (ಸಂಗೀತ), ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ (ಯಕ್ಷಗಾನ), ಉದಯ ಕುಮಾರ್ ಲಾಯಿಲ (ಸುಗಮ ಸಂಗೀತ//ಜಾನಪದ/ಕಲೆ), ವಸಂತಿ ಟಿ.ನಿಡ್ಲೆ (ಲೇಖಕಿ/ಯಕ್ಷಗಾನ), ಜಯಾನಂದ ಲಾಯಿಲ (ಸಮಾಜ ಸೇವೆ), ಲಕ್ಷ್ಮಣ ಗೌಡ ಪುಳಿತ್ತಡಿ (ಸಮಾಜ ಸೇವೆ), ಮುಹಮ್ಮದ್ ಹಾಜಿ ಕುಕ್ಕುವಳ್ಳಿ (ಸಮಾಜ ಸೇವೆ), ಜ್ಞಾನ ರೈ ಕುರಿಯ (ಬಹುಮುಖ ಪ್ರತಿಭೆ), ಎಂ.ಮಹಮ್ಮದ್ ಬಡಗನ್ನೂರು (ಸಮಾಜ ಸೇವೆ), ಎಂ.ವೇಣುಗೋಪಾಲ ಪುತ್ತೂರು (ಕಲೆ), ಕೇಶವ ಮುಚ್ಚಮಲೆ (ಕಲೆ), ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಮುಂಡೂರು (ಸಮಾಜ ಸೇವೆ), ಬಿ.ಶೇಖರ ಭಂಡಾರಿ ಬನ್ನೂರು (ಕಲೆ), ದಯಾನಂದ ರೈ ಕೊರ್ಮಂಡ (ಕಲೆ), ಜೋನ್ ಸಿರಿಲ್ ಡಿಸೋಜ ಸರಪಾಡಿ (ಕಂಬಳ), ಶೇಖರ ಪರವ ವಿಟ್ಲಪಡ್ನೂರು (ದೈವರಾದನೆ), ಸಂಜೀವ ಪೂಜಾರಿ ಸಜಿಪಮೂಡ (ಸಹಕಾರಿ/ಸಮಾಜ ಸೇವೆ), ಕೆ.ಎನ್. ಗಂಗಾಧರ ಆಳ್ವ(ಶಿಕ್ಷಣ), ಮುಹಮ್ಮದ್ ಯಾಸೀರ್ ಕಲ್ಲಡ್ಕ (ಪುರಾತನ ವಸ್ತು ಸಂಗ್ರಹಾಲಯ), ಗೋಪಾಲ ಜೋಗಿ ಕೊಡಂಗಾಯಿ (ನಾಗಸ್ವರ ವಾದಕ), ಮುಹಮ್ಮದ್ ಹನೀಫ್ ಗೋಳ್ತಮಜಲು (ಸಾಮಾಜಿಕ/ಕ್ರೀಡೆ), ಸದಾಶಿವ ಡಿ. ತುಂಬೆ (ಸಾಂಸ್ಕೃತಿಕ/ಕಲಾ ಸೇವೆ), ಕಡಬ ಶ್ರೀನಿವಾಸ ರೈ (ಕಲೆ), ಕುತ್ತಿಕಾರು ಕಿಂಞಿಣ್ಣ ಶೆಟ್ಟಿ (ಸಮಾಜ ಸೇವೆ), ರಶ್ಮಿತಾ ಜೈನ್ ಕಲ್ಲಬೆಟ್ಟು (ಶಿಕ್ಷಣ).

ಸಂಘ ಸಂಸ್ಥೆಗಳ ವಿವರ: ಬಂಟರ ಸಂಘ (ರಿ) ಬಜ್ಪೆ ವಲಯ, ಒಲವಿನ ಹಳ್ಳಿ ಪುನರ್ವಸತಿ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರ, ಯುನೈಟೆಡ್ ಫ್ರೆಂಡ್ಸ್ ಬಿಜೈ (ರಿ) ಸಂಸ್ಥೆ, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ ಮಂಗಳೂರು, ಫೈವ್ ಸ್ಟಾರ್ ಯಂಗ್ಸ್ ಬಾಯ್ಸ್ ಅಡ್ಡೂರು (ರಿ), ಶ್ರೀ ಜಯಲಕ್ಷ್ಮಿಫ್ರೆಂಡ್ಸ್ ಸರ್ಕಲ್ ಬೋಳೂರು (ರಿ), ಕರ್ನಾಟಕ ಸೇವಾ ವೃಂದ (ರಿ) ಸುರತ್ಕಲ್, ಬಿಲ್ಲವ ಸಂಘ(ರಿ) ಉರ್ವ ಅಶೋಕ್ ನಗರ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ(ರಿ), ನವೋದಯ ಫ್ರೆಂಡ್ಸ್ ಸರ್ಕಲ್ ಉಳ್ಳಾಲ ಬೈಲು (ರಿ), ಸಫರ್ ಸ್ಫೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ (ರಿ) ಮಂಚಿಲ, ಮುನ್ನೂರು ಯುವಕ ಮಂಡಲ(ರಿ), ಮಂಗಳ ಗ್ರಾಮೀಣ ಯುವಕ ಸಂಘ(ರಿ) ಕೊಣಾಜೆ, ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ತೊಕ್ಕೊಟ್ಟು (ರಿ), ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯೂರು ಕ್ರಾಸ್ ಬೆಳ್ತಂಗಡಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಮಿತಿ (ರಿ)ಬಳಂಜ, ಯುವಕ ಮಂಡಲ (ರಿ) ನರಿಂಗಾನ ತೌಡುಗೋಳಿ, ಶ್ರೀರಕ್ತೇಶ್ವರಿ ಯುವಕ ಸಂಘ (ರಿ) ನೇರಂಬೋಳು, ಶ್ರೀ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಆರ್ಲಪದವು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English