ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ

Friday, October 6th, 2023
Rajyotsava 2023

ಮಂಗಳೂರು : 2023-24ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು ಸಮಾಜ ಸೇವೆ, ಜನಪದ, ಪರಿಸರ-ವಿಜ್ಞಾನ, ವೈದ್ಯಕೀಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ತಮ್ಮ ಸೇವೆ ಅಥವಾ ಸಾಧನೆಯ ಕ್ಷೇತ್ರ ಹಾಗೂ ಸಂಕ್ಷಿಪ್ತ ದಾಖಲೆ ವಿವರಣೆಗಳೊಂದಿಗೆ ಇದೇ ಅ.25ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ‘ಬೆಸ್ಟ್ ಇಂಜಿನಿಯರ್‌’ ಪ್ರಶಸ್ತಿ ಪ್ರದಾನ

Saturday, July 17th, 2021
mpmla-news

ಮಂಗಳೂರು : ಎಂಪಿಎಂಎಲ್ಎ ನ್ಯೂಸ್ ಪತ್ರಿಕೆಯ 12ನೇ ವರ್ಷದ ಸೌಹಾರ್ದ ಸಂಗಮ ಕಾರ್ಯಕ್ರಮದ ಅಂಗವಾಗಿ ನೀಡಲಾಗುವ “ಬೆಸ್ಟ್ ಇಂಜಿನಿಯರ್’ ಅವಾರ್ಡ್” ಪ್ರಶಸ್ತಿಯನ್ನು ಮಂಗಳೂರಿನ ಲೋಕೋಪಯೋಗಿ ಇಲಾಖೆಯ ನಂ. 1 ಉಪವಿಭಾಗದ ಸಹಾಯಕ ಕಾರ‍್ಯ ಪಾಲಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|  ಪಿ.ಎಸ್‌. ಯಡಪಡಿತ್ತಾಯರವರು ಪ್ರದಾನ ಮಾಡಿದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|  ಪಿ.ಎಸ್‌. ಯಡಪಡಿತ್ತಾಯರವರು ಮಾತನಾಡುತ್ತಾ, MPMLAS NEWS ಪತ್ರಿಕೆ ಕಳೆದ ಹಲವಾರು ವರ್ಷಗಳಿಂದ ಸೌಹಾರ್ದ ಸಂಗಮ ಕಾರ್ಯಕ್ರಮಗಳನ್ನು […]

ಬೆಳೆ ಸ್ಪರ್ಧೆ : ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ

Sunday, August 30th, 2020
Agriculture

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020-21ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಲು ಕಾರಣವಾದ ಶ್ರಮಿಕ ರೈತರನ್ನು ಗುರುತಿಸಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಕೃಷಿ ಪ್ರಶಸ್ತಿ ಬಹುಮಾನಗಳನ್ನು ನೀಡಿ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆ […]

’ಕಲ್ಕೂರ ಸಾಂಸ್ಕೃತಿಕ ಸಿರಿ – ಯಕ್ಷಸಿರಿ ಪ್ರಶಸ್ತಿ’ ಪ್ರದಾನ

Wednesday, April 24th, 2019
Kalkura

ಮಂಗಳೂರು :  ಮಹಾರಾಷ್ಟ್ರದ ಸಾಂಗ್ಲಿ-ಮೀರಾಜ್ ತುಳುಭವನ ನಿರ್ಮಾಣದ ರೂವಾರಿಗಳಲ್ಲೋರ್ವರಾಗಿ ತುಳು- ಕನ್ನಡ ಸಂಸ್ಕೃತಿಯನ್ನು ಹೊರರಾಜ್ಯಗಳಲ್ಲಿ ಪಸರಿಸಿದ ಹಿರಿಯ ಸಂಘಟಕ ಶ್ರೀನಿವಾಸ ಮಂಕುಡೆಯವರಿಗೆ ’ಕಲ್ಕೂರ ಸಾಂಸ್ಕೃತಿಕ ಸಿರಿ’ ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನಕಲಾವಿದಉಡುಪಿ ತಾಲೂಕಿನ ಸಾಂತೂರುಜಗನ್ನಾಥ ಶೆಟ್ಟಿಯವರಿಗೆ’ ಕಲ್ಕೂರಯಕ್ಷ ಸಿರಿ’ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಲಾಯಿತು. ಇತ್ತೀಚೆಗೆ ನಗರದಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿಕಲ್ಕೂರ ಪ್ರತಿಷ್ಠಾನದ ವತಿಯಿಂದಏರ್ಪಡಿಸಲಾಗಿದ್ದ ವಿಷುಕಣಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಸನ್ಮಾನಿತರನ್ನು ಅಭಿನಂದಿಸಿದರು. ಕರ್ಣಾಟಕ ಬ್ಯಾಂಕಿನಅಧ್ಯಕ್ಷರಾದ ಶ್ರೀ ಜಯರಾಮ ಭಟ್, ಶಾರದಾ ಸಮೂಹ […]

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಆಳ್ವಾಸ್‍ಗೆ ಅವಳಿ ಪ್ರಶಸ್ತಿ

Saturday, September 29th, 2018
ko-ko-alwas

ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಖೋ ಖೋ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಆಳ್ವಾಸ್ ಬಾಲಕರ ತಂಡ ಶ್ರೀ ದುರ್ಗಾಪರಮೇಶ್ವರಿ ಪಿ.ಯು. ಕಾಲೇಜು, ಕಟೀಲು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಆಳ್ವಾಸ್ ಬಾಲಕಿಯರ ತಂಡ ಪರಿಜ್ಞಾನ ಪಿ.ಯು. ಕಾಲೇಜು, ಸೋಮೇಶ್ವರ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

2015ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ

Thursday, January 28th, 2016
Kodagu Gauramma Award

ಕುಂಬಳೆ: ಬೆಂಗಳೂರಿನ ಗಿರಿನಗರದಲ್ಲಿರುವ ರಾಮಾಶ್ರಮದಲ್ಲಿ 2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ,ಹಾಗೂ ಹತ್ತೆಸಳು ಪುಸ್ತಕ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತೆ ಪ್ರಸನ್ನ ವಿ.ಚೆಕ್ಕೆಮನೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಕೊಡಗಿನ ಗೌರಮ್ಮ ಪ್ರಶಸ್ತಿ ಸ್ವೀಕರಿಸಿದರು.ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯ ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ನಿವೃತ್ತ ಮುಖ್ಯೋಪಾಧ್ಯಾಯ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಕೊಡಗಿನ ಗೌರಮ್ಮನ ಬಗ್ಗೆ ಹಾಗೂ ಹತ್ತೆಸಳು ಕೃತಿಯ ಬಗ್ಗೆ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಡಗಿನ ಗೌರಮ್ಮನ ಮರಿಮೊಮ್ಮಗಳು ಭುವನೇಶ್ವರಿ […]

ಪತ್ರಕರ್ತರು ಮನುಷ್ಯ ಪಂಥಿಯನಾಗಿರಬೇಕು : ವಿ.ಗ. ನಾಯಕ್

Tuesday, April 7th, 2015
Pago15

ಮಂಗಳೂರು : ಕಳೆದ (2015 ನೇ) ಸಾಲಿನ ಪ.ಗೋ. (ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆಗಾಗಿ ) ಪ್ರಶಸ್ತಿಯನ್ನು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿಜಯಕರ್ನಾಟಕ ದ ಉಡುಪಿ ವರದಿಗಾರ ಬಾಲಕೃಷ್ಣ ಶಿಬಾರ್ಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಕನ್ನಡದ ಹಿರಿಯ ಸಾಹಿತಿ, ವಿ.ಗ. ನಾಯಕ್, ಪತ್ರಕರ್ತರು ಎಲ್ಲವೂ ಸುಧಾರಣೆಯಾಗಬೇಕು ಎನ್ನುವ ಕಾಳಜಿ ಇರುವವರು. ಸಾಹಿತಿಗಳಂತೆ ಪತ್ರಕರ್ತರು ಧಿಮಾಕು ಹೊಂದಿದವರಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಯಾವುದೇ ತತ್ವ ಸಿದ್ಧಾಂತಗಳಿಗೆ […]