ಸಿದ್ಧಕಟ್ಟೆ: ಕೊಡಂಗೆ ವೀರವಿಕ್ರಮ ಜೋಡುಕರೆ ‘ಕಂಬಳಕ್ಕೆ ಅಂತರರಾಷ್ಟ್ರೀಯ ಮನ್ನಣೆ’: ಎಂ ಜೆ ಪ್ರವೀಣ್ ಭಟ್

11:53 PM, Monday, November 25th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬಂಟ್ವಾಳ: ಕೃಷಿಕರು ಮನರಂಜನೆಗಾಗಿ ಆರಂಭಿಸಿದ ಕಂಬಳ ಕ್ರೀಡೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ ಎಂದು ಮುಂಬಯಿ ಪ್ರಸಿದ್ಧ ಜ್ಯೋತಿಷ್ಯ ಡಾ. ಎನ್ ಜೆ ಪ್ರವೀಣ್ ಭಟ್ ಹೇಳಿದರು.

ಬಂಟ್ವಾಳದ ಸಿದ್ಧಕಟ್ಟೆ ಸಮೀಪದ ಕೊಡಂಗೆಯಲ್ಲಿ ಶನಿವಾರ 23 ರಂದು 2ನೇ ವರ್ಷದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಕಾರ್ಯಕ್ರಮದಲ್ಲಿ ಉಪಸ್ತರಿದ್ದು ಮಾತನಾಡಿದರು.

ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಆಶೀರ್ವಚನ ನೀಡಿದರು. ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಉದ್ಘಾಟಿಸಿದರು. ಕುಡುಂಬೂರುಗುತ್ತು ಕ್ಷೇತ್ರದ ಆಡಳಿತ ಮೊಕ್ತಸರ ಗುತ್ತಿನಾರ್ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ರಾಜೇಶ ನಾಯ್ಕ ಉಳಿಪಾಡಿಗುತ್ತು, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ವಿಸ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾ‌ರ್ ಚೌಟ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಹಿರಿಯ ವೈದ್ಯ ಡಾ.ಪ್ರಭಾಚಂದ್ರ ಜೈನ್, ಡಾ.ಸುದೀಪ್ ಕುಮಾರ್ ಜೈನ್, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಸಂಗಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಮೈಸೂರು ಎಲೆಕ್ನಿಕಲ್ಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಜಗದೀಶ್ ಅಧಿಕಾರಿ ಮಾತನಾಡಿದರು.

ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪಿ.ಆ‌ರ್.ಶೆಟ್ಟಿ ಕುಳೂರು, ಉದ್ಯಮಿಗಳಾದ ಎಲ್ಲೂರು ಅನಿಲ್ ಶೆಟ್ಟಿ ಓಡಿಪರಗುತ್ತು, ನಿತ್ಯಾನಂದ ಪೂಜಾರಿ ಕೆಂತಲೆ, ಹರೀಶ್ ಶೆಟ್ಟಿ ಕಾಪು, ಚಂದ್ರಹಾಸ ಶೆಟ್ಟಿ, ಭಾಸ್ಕರ ಶೆಟ್ಟಿ, ವಿಜಯ ಶೆಟ್ಟಿ, ಶೇಖರ ಶೆಟ್ಟಿ, ಪದ್ಮರಾಜ್ ಬಲ್ಲಾಳ್ ಮಾವಂತೂರು, ವಿಜಯ ಫರ್ನಾಂಡಿಸ್‌,ಚಂದ್ರಹಾಸ ಸಾಧು ಸನಿಲ್, ರಾಜೇಶ್ ಶೆಟ್ಟಿ ಸೀತಾಳ, ನರಿಂಗಾನ ಕಂಬಳಸಮಿತಿ ಅಧ್ಯಕ್ಷ ಪ್ರಶಾಂತ್ ಕಾಜವ,ವೇಣೂರು ಕಂಬಳ ಸಮಿತಿ ಅಧ್ಯಕ್ಷ ನಿತಿನ್ ಕೋಟ್ಯಾನ್, ಸ್ಥಳದಾನಿಗಳಾದ ಓಬಯ್ಯ ಪೂಜಾರಿ, ಕೊರಗಪ್ಪ ಪೂಜಾರಿ, ಸಮಿತಿಪದಾಧಿಕಾರಿಗಳಾದ ರಾಘವೇಂದ್ರ ಭಟ್‌ ಹೊಕ್ಕಾಡಿಗೋಳಿ, ಶಶಿಧರ ಶೆಟ್ಟಿ ಕಲ್ಲಾಪು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ಶೆಟ್ಟಿ ಕುತುಲೋಡಿ,ಸಂದೇಶ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಿಲ, ಚಂದ್ರಶೇಖರ ಕೊಡಂಗೆ, ವಸಂತ ಶೆಟ್ಟಿ ಕೇದಗೆ,ಉಮೇಶ್ ಶೆಟ್ಟಿ ಕೊನೆರೊಟ್ಟುಗುತ್ತು, ಬಾಬು ರಾಜೇಂದ್ರ ಶೆಟ್ಟಿ ಆಲದಪದವು,ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸುಧಾಕರ ತ ಚೌಟ, ಜನಾರ್ದನ ಬಂಗೇರ ತಿಮ್ಮರಡ್ಕ, – ಉಮೇಶ್ ಹಿಂಗಾಣಿ, ಬಿ.ಶಿವಾನಂದ ರೈ, ಈ ಹಿರಿಯ ತೀರ್ಪುಗಾರರಾದ ಎತ್ತೂರು ರಾಜೀವ್ ಶೆಟ್ಟಿ, ವಿಜಯ್ ಕುಮಾರ್ . ಕಂಗಿನ ಮನೆ ಭಾಗವಹಿಸಿದ್ದರು.

ಕಂಬಳ ಸಮಿತಿ ಅಧ್ಯಕ್ಷ ಪೊಡುಂಬ ಸಂದೀಪ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ವಂದಿಸಿದರು. ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಈ ಹೊಸ ಕರೆಯಲ್ಲಿ ಒಂದೇ ವರ್ಷದೊಳಗೆ 3ನೇ ಕಂಬಳ ಮತ್ತು ಪ್ರಸಕ್ತ ಸಾಲಿನ ಪ್ರಥಮ ಕಂಬಳಕ್ಕೆ ವೀರ – ವಿಕ್ರಮ ಜೋಡುಕರೆ ಸಾಕ್ಷಿಯಾಯಿತು.

ವರದಿ : ಈಶ್ವರ ಎಂ. ಐಲ್
ಚಿತ್ರ : ನಿತಿನ್ ವೈ ಎಸ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English