ಮಂಗಳೂರು : ಹದಿನಾಲ್ಕು ವರ್ಷಗಳ ಹಿಂದೆ ತನ್ನ ಕುಟುಂಬದಿಂದ ದೂರವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಮನೆಸೇರಿದ ಘಟನೆ ವೈಟ್‌ಡೌಸ್ ಸಂಸ್ಥೆಯಿಂದ ನಡೆದಿದೆ.
2010ರಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುವ ವೈಟ್‌ಡೌಸ್ ಸಂಸ್ಥೆ ಈತನನ್ನು ಇದುವರೆಗೆ ನೋಡಿಕೊಂಡಿದೆ. ಮಂಗಳೂರಿನ ಎಸ್ಪಿ ಕಚೇರಿ ಬಳಿಯಿದ್ದ ಈತನಿಗೆ ವೈಟ್‌ಡೌಸ್ ಸಂಸ್ಥಾಪಕಿ ಕೊರಿನ್ ರಸ್ಕಿನಾ ಆಸರೆ ನೀಡಿದ್ದರು. ಮಾನಸಿಕ ಸ್ವಾಸ್ಥ್ಯವಿಲ್ಲ, ಮಾತು ಕಡಿಮೆ, ಒಮ್ಮೊಮ್ಮೆ ಏಕಾಏಕಿ ಬೊಬ್ಬೆ ಹೊಡೆಯುವುದು ಬಿಟ್ಟರೆ ಬೇರೇನೂ ಇಲ್ಲ. ಆದ್ದರಿಂದ ಈತನ ಹಿನ್ನೆಲೆ ತಿಳಿಯಲು ವೈಟ್‌ಡೌಸ್ ಸಂಸ್ಥೆಗೆ ಸಾಧ್ಯವಾಗಿರಲ್ಲ.
ನಿರಂತರ ಚಿಕಿತ್ಸೆ, ಔಷಧೋಪಚಾರದಿಂದ ಸ್ವಲ್ಪ ಚೇತರಿಸಿಕೊಂಡಿದ್ದ. ಇತ್ತೀಚಿಗೆ ತನ್ನ ಹೆಸರು ಶಿವಕುಮಾರ್, ಊರು ಛತ್ತಿಸ್‌ಗಡ, ತನ್ನ ಕುಟುಂಬದ ಇಬ್ಬರು ಸದಸ್ಯರ ಹೆಸರನ್ನು ಹೇಳಿದ್ದಾನೆ. ಇದರ ಫಲವಾಗಿ ಹದಿನಾಲ್ಕು ವರ್ಷಗಳ ಬಳಿಕ ಶಿವಕುಮಾರ್ ವಾಪಸ್ಸು ತನ್ನ ಮನೆಯವರನ್ನು ಸೇರುವಂತಾಗಿದೆ.
ಸಣ್ಣ ವಯಸ್ಸಿನಿಂದಲೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶಿವಕುಮಾರ್‌ಗೆ ಕುಟುಂಬಸ್ಥರು ಮದುವೆ ಮಾಡಿದ್ದರು. ಆದರೆ ಪತ್ನಿ ಒಂದೇ ತಿಂಗಳಲ್ಲಿ ತೊರೆದು ಹೋಗಿದ್ದರು. ಕುಟುಂಬ ಕಟ್ಟಡ ಕೆಲಸಕ್ಕೆಂದು ದೆಹಲಿಗೆ ಹೋದಾಗ ತಾಯಿ ಕಟ್ಟಡದ ಮೇಲಿನಿಂದ ಬಿದ್ದು, ಸೊಂಟ ಮುರಿದುಕೊಂಡಿದ್ದರು. ಮತ್ತೆ ಕುಟುಂಬ ಛತ್ತಿಸ್‌ಗಡಕ್ಕೆ ಹೊರಟು ನಿಂತಾಗ, ತಾನು ದೆಹಲಿಯಲ್ಲೇ ಇರುತ್ತೇನೆಂದು ಶಿವಕುಮಾರ್ ರೈಲು ನಿಲ್ದಾಣವನ್ನೇ ಆಶ್ರಯಿಸಿಕೊಂಡ. ಆದರೆ ಮತ್ತೆ ಬಂದು ನೋಡಿದಾಗ ಆತ ಅಲ್ಲಿರಲಿಲ್ಲ. ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ.
ಆದಾದ ಬಳಿಕ ಆತ ಬಂದು ಸೇರಿದ್ದು ಮಂಗಳೂರಿನ ವೈಟ್ ಡೌಸ್ ಸಂಸ್ಥೆಯನ್ನು. ಇಲ್ಲಿ ಬಂದ ಬಳಿಕ ಶಿವಕುಮಾರ್ ವರ್ಷ ಕಳೆದಂತೆ ಮಾನಸಿಕವಾಗಿ ಸದೃಢನಾಗದಿದ್ದರೂ ದೈಹಿಕವಾಗಿ ಬಲನಾಗಿದ್ದ. ವೈಟ್‌ಡೌಸ್ ಸಂಸ್ಥೆಯಲ್ಲಿ ಹಾಸಿಗೆ ಹಿಡಿದವರನ್ನು ಬಹಳ ಚೆನ್ನಾಗಿ ಶುಶ್ರೂಷೆ ಮಾಡುತ್ತಿದ್ದ. ಇತ್ತೀಚೆಗೆ ಏಕಾಏಕಿ ತನ್ನ ಪೂರ್ವಾಪರ, ಕುಟುಂಬಿಕರ ಮಾಹಿತಿಯನ್ನು ನೀಡಿದ್ದಾನೆ. ಅದರಿಂದ ವೈಟ್‌ಡೌಸ್ ಸಂಸ್ಥೆಗೆ ಆತನ ಕುಟುಂಬಸ್ಥರು ಸಿಕ್ಕರು. ಈತನ ಇರುವು ತಿಳಿಯುತ್ತಿದ್ದಂತೆ ಆತನ ಚಿಕ್ಕಪ್ಪ, ಭಾವ ಮಂಗಳೂರಿಗೆ ಆಗಮಿಸಿದ್ದಾರೆ. ಶಿವಕುಮಾರ್‌ಗೆ ಆಶ್ರಯ ಕಲ್ಪಿಸಿದ ವೈಟ್‌ಡೌಸ್ ಸಂಸ್ಥೆಯಿಂದ ಮರಳಿ ಮನೆಗೆ ಹೋಗಿದ್ದಾನೆ.
Click this button or press Ctrl+G to toggle between Kannada and English