ಮಂಜನಾಡಿ ಗ್ಯಾಸ್ ದುರಂತ : ತನ್ನ ಶಾಲೆಯ ವಿಧ್ಯಾರ್ಥಿಗಳಿಗಾಗಿ 21 ದಿನ ಕಂಬನಿ ಮಿಡಿದ ಶಿಕ್ಷಕ

8:25 PM, Thursday, January 2nd, 2025
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು ಅಂತ ಹೇಳ್ತಿವಿ. ಅಂತಹ ಮಾನವೀಯತೆಯ ಪ್ರತೀಕ, ಹೃದಯವಂತ ಶಿಕ್ಷಕ ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಅವರಿಗೆ ಪ್ರಶಂಶೆಗಳು ವ್ಯಕ್ತವಾಗಿದೆ.

ಮಂಜನಾಡಿ ಗ್ಯಾಸ್ ದುರಂತದಲ್ಲಿ ಮರಣ ಹೊಂದಿದ ಇಬ್ಬರು ಮಕ್ಕಳು, ಮತ್ತು ಚೇತರಿಸಿಕೊಳ್ಳುತ್ತಿರುವ ಒಂದು ಮಗು ಇವರ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದದ್ದು .ಮೂವರೂ 14, 12, 9 ವರ್ಷದ ಹೆಣ್ಣು ಮಕ್ಕಳು. ಇವರು ಗ್ಯಾಸ್ ದುರಂತ ಸಂಭವಿಸಿದ ದಿನದಿಂದ ಹಿಡಿದು 21 ದಿನಗಳವರೆಗೆ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನ ವರೆಗೆ ಇದ್ದು ಮಕ್ಕಳ ಆರೋಗ್ಯ ವಿಚಾರಿಸಿ ಮತ್ತೆ ಮನೆಗೆ ಹೋಗುತ್ತಿದ್ದರು. ಐಸಿಯು ಒಳಗಡೆ ಹೋಗಿ ಮಕ್ಕಳ ಜತೆ ಮಾತನಾಡುತ್ತಾ ಆ ಮಕ್ಕಳಿಗೆ ಧೈರ್ಯ ಕೊಡುತ್ತಿದ್ದರು. ತೀರ ಸುಟ್ಟ ಗಾಯಗಳೊಂದಿಗೆ ನೋವಲ್ಲಿ ಚೀರಾಡುತ್ತಿದ್ದ ಆ ಮೂರು ಮಕ್ಕಳು ತನ್ನ ಅಧ್ಯಾಪಕನನ್ನು ಗುರುತು ಹಿಡಿದು ನಾವಿನ್ನು ಪಾಸಾಗಲ್ಲ, ಹೋಮ್ ವರ್ಕ್ ಬಾಕಿ ಇದೆ, ಫೈಲ್ ಆಗ್ತಿವಿ, ನಮ್ಮ ಭವಿಷ್ಯ ಹೋಯಿತಲ್ಲ ಎಂದಲ್ಲ ಹೇಳಿ ಅಳುತ್ತಿದ್ದಾಗ, ಇಲ್ಲ ನಿಮ್ಮನ್ನ ಪಾಸ್ ಮಾಡ್ತಿದ್ದೀವಿ, ಏನೂ ಟೆನ್ಶನ್ ಮಾಡಬೇಡಿ ಎಂದು ಮಾನಸಿಕವಾಗಿ ಧೈರ್ಯ, ಆತ್ಮ ವಿಶ್ವಾಸ ತುಂಬುತ್ತಿದ್ದರು. ಅವರ ಧೈರ್ಯದ ಮಾತುಗಳಿಂದ ಮಕ್ಕಳು ಒಂದಿಷ್ಟು ದಿನ ಚೇತರಿಸಿಕೊಳ್ಳುವಂತಾಗಿತ್ತು.

ಡಾಕ್ಟರ್ ಬಂದು ಮಕ್ಕಳ ಚರ್ಮಕ್ಕೆ, ವೈದ್ಯಕೀಯ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣಬೇಕಾಗಬಹುದು ಎಂದಾಗ, ಸಂತೋಷ್ ಅವರು ನನ್ನ ವಿದ್ಯಾರ್ಥಿಗಳು, ನನ್ನಿಂದ ಸಾಧ್ಯವಾಗುವಷ್ಟು ನಾನು ಕೂಡಾ ಏನಾದ್ರು ಮಾಡ್ತೀನಿ ಎಂದು ಹೇಳಿ ಶಾಲಾ ಆಡಳಿತ ಮಂಡಳಿಗೆ ವಿಷ್ಯ ತಿಳಿಸಿ, ಅಲ್ಲಿ ಶಿಕ್ಷಕ ವೃoದದವರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಮಾನವೀಯತೆ ಮೆರೆದು ಒಟ್ಟುಗೂಡಿಸಿ ಕೊಟ್ಟ ಒಂದು ಲಕ್ಷಕ್ಕಿಂತಲೂ ಹಣವನ್ನ ಆಸ್ಪತ್ರೆಗೆ ತಂದು ಕೊಡ್ತಾರೆ. ಗ್ಯಾಸ್ ಸ್ಫೋಟದಿಂದ ಮನೆಯಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ತಿಳಿದ ಅದೇ ಶಾಲೆಯ ಪ್ರೈಮರಿ ಶಾಲೆಯ ಎಚ್. ಎಂ ಪ್ರಮೀಳಾ ಮತ್ತು ಆಶಾ ಟೀಚರ್ ಮಕ್ಕಳ ಎಲ್ಲಾ ಡಾಕ್ಯೂಮೆಂಟ್ಸ್ ಅನ್ನು ಯಾವುದಕ್ಕಾದ್ರೂ ಬೇಕಾಗಬಹುದೆಂದು ಶಾಲೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಶಾಲೆಗೆ ಅಲೆದಾಡಿದ್ದರು.

ಸಂತೋಷ್ ಶಿಕ್ಷಣ ಇಲಾಖೆಯ ಡಿಡಿಪಿಐ ವೆಂಕಟೇಶ್ ಪಟಗಾರ್ ನ್ನು ಆಸ್ಪತ್ರೆಗೆ ಕರೆತಂದು ಮಕ್ಕಳ ಚಿಕಿತ್ಸೆಗಾಗಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಪರಿಹಾರಕ್ಕಾಗಿ ಬೇಡಿಕೆ ಇಡ್ತಾರೆ. ಅದರ ಪರಿಹಾರ ಸಿಗಲೆಂದು ಪ್ರಮೀಳಾ ಮೇಡಂ ಜೊತೆ ಶ್ರಮ ವಹಿಸುತ್ತಿದ್ದಾರೆ. ಅದಲ್ಲದೆ, ದುರಂತ ಸಂಭವಿಸಿ ನಾಲ್ಕು ದಿನವಾದಾಗ ಮಕ್ಕಳ ತಾಯಿ ಮರಣ ಹೊಂದಿದಾಗ ಆ ತಾಯಿಯ ದಫನ ಕಾರ್ಯ ಮುಗಿಯುವವರೆಗೂ ಭಾವುಕರಾಗಿ ನಿಂತು ಕಂಬನಿ ಮಿಡಿಯುತ್ತಿದ್ದರು. ತಾಯಿ ತೀರಿ 14 ದಿವಸ ಆಗುವಾಗ ದೊಡ್ಡವಳು ಮಹದಿಯ ತೀವ್ರ ಇನ್ಫೆಕ್ಷನ್ ನಿಂದ ಮರಣ ಹೊಂದುತ್ತಾಳೆ. ವಿದ್ಯಾರ್ಥಿನಿ ಇವರ ಬೆಸ್ಟ್ ಕೂಡಾ ಹೌದು. ಮುಗ್ದೆ, ಸೌಮ್ಯ ಸ್ವಭಾವದ ಹುಡುಗಿಯಾದ್ರೂ ಕಲಿಕೆಯಲ್ಲಿ ಬಹಳಷ್ಟು ಮುಂದೆ ಇದ್ದಳು, ಕ್ಲಾಸಲ್ಲಿ ಅವಳ ಸ್ನೇಹಿತೆಯರು ಈಗ್ಲೂ ಅಳುತ್ತಿರುವುದು ನೋಡೋಕೆ ಆಗ್ತಿಲ್ಲ ಎನ್ನುತ್ತಿದ್ದರು. ಇವಳ ಮರಣದ ವಿಷಯ ತಿಳಿದ ಕೂಡಲೇ ಸಂತೊಷ್ , ಕಂಬನಿ ಮಿಡಿಯುತ್ತಲೇ ಆಸ್ಪತ್ರೆಗೆ ಬರ್ತಾರೆ. ಅಲ್ಲಿಂದ ಮೃತದೇಹವನ್ನ ಮನೆಗೆ ಕೊಂಡೊಯ್ಯುವಾಗಲೂ ನನ್ನ ಪ್ರಿಯ ವಿದ್ಯಾರ್ಥಿನಿಯ ಮೃತದೇಹಕ್ಕೆ ಹೆಗಲು ಕೊಡ್ಲಿಕ್ಕಾದ್ರು ಒಂದು ಅವಕಾಶ ನೀಡುತ್ತೀರಾ? ಎಂದು ಕಣ್ಣoಚಲ್ಲಿ ನೀರು ತುಂಬಿ ಭಾವುಕರಾಗಿ ವಿನಂತಿಸಿದ್ದರು. ಸೇರಿದ ಜನಸ್ತೋಮದ ಮಧ್ಯೆ ಮುಖ ದರ್ಶನಕ್ಕೆ ಎಲ್ಲರೂ ಅವರಿಗೆ ಅವಕಾಶ ಮಾಡಿ ಕೊಟ್ಟಿದ್ದರು. ದಫನ ಕಾರ್ಯ ಮುಗಿಯೋ ತನಕ ಇದ್ದು, ರಾತ್ರಿ 1 ಗಂಟೆ ಹೊತ್ತಿಗೆ ಮಂಜನಾಡಿಯಿಂದ ತನ್ನ ಮನೆ ವಾಮಂಜೂರು ಗೆ ಹೊರಟು ಹೋಗುತ್ತಾರೆ . ಅಷ್ಟಕ್ಕೆ ವಿಧಿ ತನ್ನ ಕ್ರೂರ ಆಟವನ್ನ ಇನ್ನೂ ನಿಲ್ಲಿಸಲ್ಲ. ಎರಡನೇ ಆಘಾತದಿಂದ ಇನ್ನೂ ಚೇತರೀಸಿಕೊಳ್ಳದ ಮನೆಯವರಿಗೆ ದೊಡ್ಡವಳ ಮರಣವಾಗಿ ಒಂದು ದಿವಸ ಕಳೆದಿರಲಿಲ್ಲ, ಇನ್ನೊಂದು 9 ವರ್ಷದ ಮಾಝಿಯಾ ಮಗು ಮರಣ ಹೊಂದಿದೆ. ಈ ಸುದ್ದಿ ತಿಳಿದು ಸಂತೋಷ್ ಕೂಡಾ ಆಸ್ಪತ್ರೆಗೆ ಓಡೋಡಿ ಬರ್ತಾರೆ. ಪ್ರೈಮರಿ ಶಾಲೆಯ ಎಚ್ ಎಂ ಪ್ರಮೀಳಾ ಜತೆ ಇತರೆ ಶಿಕ್ಷಕರೂ ಶಾಲೆಯಿಂದ ಆಸ್ಪತ್ರೆಗೆ ಬಂದು ಕಣ್ಣೀರಿನೊಂದಿಗೆ ಮಗುವಿನ ಮುಖ ದರ್ಶನ ಪಡೀತಾರೆ. ಆ ಕ್ಷಣದಲ್ಲಿ ಅಲ್ಲಿದ್ದ ಪೊಲೀಸರ, ಡಾಕ್ಟರ್ ಗಳ ಕಣ್ಣುಗಳೂ ಒದ್ದೆಯಾಗಿತ್ತು. ಸಂತೋಷ್ , ಇವಳ ದಫನ ಕಾರ್ಯ ಕೂಡಾ ಮುಗಿಯೋವರೆಗೂ ನಿಂತು, ಮೂರು ಖಬರ್ ಬಳಿ ತುಂಬಿದ ಕಣ್ಣೀರಿನೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲಿದ್ದ ಮುಸ್ಲಿಂ ಧರ್ಮಗುರುಗಳು ಕೂಡಾ ಇಂತಹ ಅಧ್ಯಾಪಕನನ್ನ ಪಡೆದ ಈ ವಿದ್ಯಾರ್ಥಿಗಳು ಧನ್ಯರು ಎಂದು ಅವರನ್ನ ಅಲ್ಲೇ ಶ್ಲಾಘಿಸಿದರು. ಅಲ್ಲಿದ್ದ ಕುಟುಂಬಿಕರು,ಊರ ಜನರು ಕೂಡಾ ಸಂತೋಷ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡ್ತಿದ್ರು ಶಿಕ್ಷಕರೆಂದರೆ ಹೀಗಿರಬೇಕೆಂದು. ಅವತ್ತು ಕೂಡ ರಾತ್ರಿ 12 ಗಂಟೆ ಹೊತ್ತಿಗೆ ಸ್ವಾoತನ ಪಡಿಸಿ, ಮಕ್ಕಳ ತಂದೆಯೊಂದಿಗೆ ಇದ್ದು ಸಮಾಧಾನ ಹೇಳಿ, ಧೈರ್ಯ ಕೊಟ್ಟು ನಿರ್ಗಮಿಸ್ತಾರೆ.

ಶಾಲೆಯಲ್ಲಿ ಶ್ರದಾಂಜಲಿ, ಪ್ರಾರ್ಥನೆ ಎಲ್ಲಾನೂ ನಡೆಸ್ತಾ ಇದ್ರೂ ಒಂದೇ ಒಂದು ವಿಡಿಯೋ ತೆಗೆದಿಲ್ಲ. ಫೋಟೋ ತೆಗೆದಿಲ್ಲ.ಒಟ್ಟು ಮಾಡಿದ ಹಣ ಕೊಡುವಾಗಲೂ ಫೋಟೋ ತೆಗೆಯೋಕೆ ನಿರಾಕರಿಸ್ತಾರೆ. ಆ ಶಾಲೆಯ ಎಲ್ಲಾ ಶಿಕ್ಷಕರಿಗೆ ಕುಟುಂಬದ ಸದಸ್ಯರು ಶೋಕದ ನಡುವೆ ಧನ್ಯವಾದವನ್ನು ಸಮರ್ಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English