ಫೂರೆನ್ಸಿಕ್‌ ಮೆಡಿಕಾನ್‌- 2013 ವಾರ್ಷಿಕ ಸಮ್ಮೇಳನ

5:01 PM, Saturday, February 2nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Forensic Medicon 2013ಮಂಗಳೂರು : ಇಂಡಿಯನ್‌ ಅಕಾಡೆಮಿ ಆಫ್‌ ಫೂರೆನ್ಸಿಕ್‌ ಮೆಡಿಸಿನ್‌ನ 34ನೇ ವಾರ್ಷಿಕ ಸಮ್ಮೇಳನ ಫೂರೆನ್ಸಿಕ್‌ ಮೆಡಿಕಾನ್‌- 2013 ಶುಕ್ರವಾರ ಡಾ. ಟಿ.ಎಂ.ಎ. ಪೈ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯಿತು. ೩ ದಿನಗಳ ನಡೆಯುವ ಈ ಸಮ್ಮೇಳನದ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕದ ಎಡಿಜಿಪಿ ಡಾ. ರಾಜ್‌ವೀರ್‌ ಪಿ. ಶರ್ಮ ನೆರವೇರಿಸಿದರು.

ಅತ್ಯಾಚಾರ ಹಾಗೂ ಇತರ ದೈಹಿಕ ಶೋಷಣೆಯಂತಹ ಪ್ರಕರಣಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಪ್ರಕರಣಕ್ಕೆ ಅವಶ್ಯಕವಾದ ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ಅತೀ ಶೀಘ್ರದಲ್ಲಿ ಸಲ್ಲಿಸಿದಲ್ಲಿ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುವುದು. ಅಪರಾಧ ಪತ್ತೆ ಪ್ರಕರಣ ಮತ್ತು ನ್ಯಾಯ ತೀರ್ಮಾನದಲ್ಲಿ ವಿಧಿ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ವೈದ್ಯಕೀಯ ಪರೀಕ್ಷೆ ಮತ್ತು ವರದಿ ತಯಾರಿಕೆಯಲ್ಲಿ ಪಾರದರ್ಶಕತೆ ಅಗತ್ಯ.  ವಿಧಿ ವಿಜ್ಞಾನ ತಜ್ಞರು ವೈದ್ಯಕೀಯ ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಬಾರದು ಎಂದವರು ಸಲಹೆ ಮಾಡಿದರು.

ಗೌರವ ಅತಿಥಿಯಾಗಿದ್ದ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕಿನ ರೀಜನಲ್‌ ಮ್ಯಾನೇಜರ್‌ ಕೆ. ಅನಿಲ್‌ ಅವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ವಿಧಿ ವಿಜ್ಞಾನ ತಜ್ಞ ಡಾ. ಸಿ. ರಾಮ ಮೋಹನ್‌ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 5 ಮಂದಿಗೆ ಫೆಲೊಶಿಪ್‌ ವಿತರಿಸಲಾಯಿತು.

ಮಂಗಳೂರು ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಫೂರೆನ್ಸಿಕ್‌ ಮೆಡಿಸಿನ್‌ ಅಂಡ್  ಟೊಕ್ಸಿಕೊಲಜಿ ವಿಭಾಗದ ನೇತೃತ್ವದಲ್ಲಿ  3 ದಿನಗಳ ಈ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ದೇಶದ 28 ರಾಜ್ಯಗಳ ಮತ್ತು 5 ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಮತ್ತು 5 ಮಂದಿ ವಿದೇಶಿ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಇಂಡಿಯನ್‌ ಅಕಾಡೆಮಿ ಆಫ್‌ ಫೂರೆನ್ಸಿಕ್‌ ಮೆಡಿಸಿನ್‌ನ ಅಧ್ಯಕ್ಷ ಡಾ.ಡಿ.ಎಸ್‌. ಬಡೂರು, ಮಣಿಪಾಲ ವಿಶ್ವ ವಿದ್ಯಾನಿಲಯದ ಮಂಗಳೂರು ಕ್ಯಾಂಪಸ್‌ನ ಕುಲಪತಿ ಡಾ.ಸುರೇಂದ್ರ ವಿ. ಶೆಟ್ಟಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕೆಎಂಸಿ ಡೀನ್‌ ಡಾ.ಎಂ. ವೆಂಕಟರಾಯ ಪ್ರಭು ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English