ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

5:48 PM, Sunday, October 10th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆಮಂಗಳೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ದಲಿತರಿಗೆ ಆಗುವ ತೊಂದರೆಗಳು, ಪೊಲೀಸ್ ಇಲಾಖೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ಕಿರುಕುಳ ಮೊದಲಾದ ದೂರುಗಳನ್ನು ಇಂದು ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತಮ್ಮ ಕಛೇರಿಯಲ್ಲಿ ಆಲಿಸಿದರು. ಪೊಲೀಸ್ ನಿರೀಕ್ಷಕರಾದ ಬಿ.ಜೆ.ಭಂಡಾರಿ, ಬಂಟ್ವಾಳ ಪೊಲೀಸ್ ನಿರೀಕ್ಷಕರಾದ ನಜುಂಡೇ ಗೌಡ, ಸುಳ್ಯ ಪೊಲೀಸ್ ನಿರೀಕ್ಷಕರಾದ ಮಂಜಯ್ಯ ಹಾಗೂ ಜಿಲ್ಲೆಯ ಇನ್ನಿತರ ಠಾಣೆಗಳ ಉಪ ನಿರೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ
ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಗೋಪಾಲ ಕಾಡು ಮಠ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಡ್ಲ ಮುನ್ನೂರು ಗ್ರಾಮದ ಹೇಮಾಜೆ ಎಂಬಲ್ಲಿ ಎರಡು ದಲಿತ ಕುಟುಂಬದ ಕಲಹದಲ್ಲಿ ನೀಲಯ್ಯ ಎಂಬವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ನೀಲಯ್ಯ  ಅವರಿಗೆ ಪೊಲೀಸ್ ಇಲಾಖೆಯಿಂದ ಅನ್ಯಾಯವಾಗಿದೆ ಎಂದು ದೂರಿದರು. ಈ ಘಟನೆಯ ಪೂರ್ತಿವಿವರಗಳನ್ನು ಪಡೆದು ವಿಚಾರಣೆ ನಡೆಸುವುದಾಗಿ ಜಿಲ್ಲಾ ಎಸ್ಪಿ ಭರವಸೆ ನೀಡಿದರು.

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ
ಮಾಜಿ ಸಚಿವ ನಾಗರಾಜ ಶೆಟ್ಟಿಯವರ ತೋಟದ ಕೆಲಸದ ರಾಜಪ್ಪ ಗೌಡ ಕೊಲೆ ಪ್ರಕರಣದ ಸಮರ್ಪಕ ತನಿಖೆಗೆ ಎಸ್ಪಿ ಯವರಿಗೆ ದೂರು ನೀಡಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English