ಪುತ್ತೂರು ಹಿಂದೂ ಐಕ್ಯತಾ ಸಮಾವೇಶ, ಮದ್ಯದಂಗಡಿಗಳನ್ನು ಮುಚ್ಚಲು – ಆದೇಶ

Saturday, March 20th, 2021
Hindu-Aikya

ಮಂಗಳೂರು : ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ನಡೆಯುವ ಹಿಂದೂ ಐಕ್ಯತಾ ಸಮಾವೇಶ ಮತ್ತು ಶೋಭಾಯಾತ್ರೆಯು ಮಾರ್ಚ್ 21 ರಂದು ಪುತ್ತೂರು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆಯಲಿದೆ. ಸದರಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆಯನ್ನು ಕಾಪಾಡಲು ಸಾರ್ವಜನಿಕರ ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯಿದೆ 1965 ಸೆಕ್ಷನ್ 21(1)ರ ಅಡಿಯಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಪುತ್ತೂರು ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣಾ ಸರಹದ್ದಿನ ಎಲ್ಲಾ […]

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ: ಸಂಜೀವ ಮಠಂದೂರು

Thursday, January 5th, 2017
BJP

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಕಿ ಹಚ್ಚುವವರಿಗಿಂತ ಬೆಂಕಿ ಹರಡುವವರು ಹಾಗೂ ಆ ಬೆಂಕಿಯಲ್ಲಿ ಬೇಳೆ ಬೇಯಿಸುವವರ ಸಂಖ್ಯೆ ಜಾಸ್ತಿ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು ನೋವಿನಿಂದ ಹೇಳಿದ ಮಾತಿಗೆ ಕಾಂಗ್ರೆಸ್ ನಾಯಕರು ಬಣ್ಣ ಬಳಿಯಲು ಹೋಗುತ್ತಿದ್ದಾರೆ. ಕೇವಲ ಒಂದು ಮತದ ತುಷ್ಟೀಕರಣ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ. ರಿಯಾಝ್ ಭಟ್ಕಳ್ ಸೇರಿದಂತೆ ಜಿಲ್ಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ನಂಟಿದ್ದರೂ ಕಾನೂನೂ ವ್ಯವಸ್ಥೆ ಭದ್ರವಾಗಿಲ್ಲ. ಒಂದೇ ವರ್ಷದಲ್ಲಿ ಜಿಲ್ಲೆಯ […]

ರಾಜ್ಯ ಸರ್ಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ: ಮಾಜಿ ಡಿಸಿಎಂ ಅಶೋಕ್‌‌‌

Tuesday, September 13th, 2016
r-ashok

ಬೆಂಗಳೂರು: ಕರ್ನಾಟಕದ ಪಾಲಿಗೆ ಈ ತೀರ್ಪು ದೊಡ್ದ ನೋವುಂಟು ಮಾಡಿದೆ. ಇದೊಂದು ಮಾರಣಾಂತಿಕ ತೀರ್ಪು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ. ಈ ಹಿಂದೆ ನೀಡಿದ ತೀರ್ಪಿನಲ್ಲಿ 15 ಸಾವಿರ ಕ್ಯೂಸೆಕ್‌‌ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈಗ ಮತ್ತೊಂದು ಅಘಾತ ನೀಡಿದೆ. ಸರ್ಕಾರ ಪ್ರಾರಂಭದಲ್ಲಿ ತಪ್ಪು ಮಾಡಿದೆ. ಇದು ಎರಡನೇ ಮುಖಭಂಗ ಎಂದು ದೂರಿದರು. ಸರ್ಕಾರದ ತಪ್ಪು […]

ಕಾಣದ ಕೈಗಳು ದೇಶಪ್ರೇಮದ ಹೆಸರಿನಲ್ಲಿ ಜಿಲ್ಲೆಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್‌

Tuesday, September 6th, 2016
Hariprasad

ಮಂಗಳೂರು: ಶಾಂತಿ, ಸೌಹಾರ್ದಕ್ಕೆ ಹೆಸರಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಣದ ಕೈಗಳು ದೇಶಪ್ರೇಮದ ಹೆಸರಿನಲ್ಲಿ ಜಿಲ್ಲೆಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು. ರವಿವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆ ರಾಣಿ ಅಬಕ್ಕನಂತಹ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ನಾಡು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಉತ್ತಮ ಹೆಸರಿದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಕೋಮುದ್ವೇಷ ಹೆಚ್ಚಾಗುತ್ತಿದೆ. […]

ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ದ.ಕ. ಕಾನೂನು ಸುವ್ಯವಸ್ಥೆ ಬಲಪಡಿಸುವ ಬಗ್ಗೆ ಚರ್ಚೆ

Friday, October 30th, 2015
DK Police need strengthen in Law and order

ಮಂಗಳೂರು: ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಚಿವ ರಮಾನಾಥ ರೈ ಅವರು ಬೆಂಗಳೂರಿನ ತನ್ನ ಕಚೇರಿಯಲ್ಲಿ ಸಭೆ ನಡೆಸಿ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದರು. ಜಿಲ್ಲೆಯ ಪೊಲೀಸ್‌ ಇಲಾಖೆಯ ಸಮಗ್ರ ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಬಲಪಡಿಸುವುದು, ಭೂಗತ ಚಟುವಟಿಕೆಗಳನ್ನು ಮಟ್ಟಹಾಕುವುದು, ಜಿಲ್ಲೆಯಾದ್ಯಂತ ವಿವಿಧ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಕೆ, ಸೈಬರ್‌ ಪೊಲೀಸ್‌ ಠಾಣೆ ಪ್ರಾರಂಭ, ಜಿಲ್ಲೆಗೆ ಹೆಚ್ಚುವರಿ ಪೊಲೀಸ್‌ ಸಿಬಂದಿ ನೇಮಕ, ಕೋಮುಸೌಹಾರ್ದ ಸಭೆಗಳನ್ನು ಏರ್ಪಡಿಸುವುದು ಹಾಗೂ ಜಿಲ್ಲಾ […]

ದನ ಕಳವು ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ : ಎಮ್. ಎನ್. ರೆಡ್ಡಿ

Thursday, August 8th, 2013
ದನ ಕಳವು ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ : ಎಮ್. ಎನ್. ರೆಡ್ಡಿ

ಮಂಗಳೂರು: ಸಾರ್ವಜನಿಕರು ದನ ಕಳವು ಪ್ರಕರಣದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಸಹಕರಿಸಬೇಕು, ದನ ಕಳವು ಮತ್ತು ಸಾಗಟದ ಪ್ರಕರಣಗಳ ಪತ್ತೆ ಮತ್ತು ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನನ್ನು ಕೈಗೆತ್ತಿಕೊಂಡರೆ ಸೂಕ್ತ ಕ್ರಮ ಕೈಕೊಳ್ಳಲಾಗುವುದು. ದನ ಕಳವು ಪ್ರಕರಣಗಳನ್ನು ಹತ್ತಿಕ್ಕಲು ಗಸ್ತು ಕಾರ್ಯಚರಣೆ ಮತ್ತು ಪೋಲಿಸ್ ಕಾವಲನ್ನು ಬಿಗಿಗೊಳಿಸಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಶಿಸ್ತು ವಿಭಾಗದ ಎಡಿಜಿಪಿ ಎಮ್. ಎನ್. ರೆಡ್ಡಿ ತಿಳಿಸಿದರು. ಎ.ಡಿ.ಜಿ.ಪಿಯಾಗಿ ಅಧಿಕಾರ ಸ್ವಿಕರಿಸಿದ ಮೊದಲ […]

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

Sunday, October 10th, 2010
ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

ಮಂಗಳೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ದಲಿತರಿಗೆ ಆಗುವ ತೊಂದರೆಗಳು, ಪೊಲೀಸ್ ಇಲಾಖೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ಕಿರುಕುಳ ಮೊದಲಾದ ದೂರುಗಳನ್ನು ಇಂದು ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತಮ್ಮ ಕಛೇರಿಯಲ್ಲಿ ಆಲಿಸಿದರು. ಪೊಲೀಸ್ ನಿರೀಕ್ಷಕರಾದ ಬಿ.ಜೆ.ಭಂಡಾರಿ, ಬಂಟ್ವಾಳ ಪೊಲೀಸ್ ನಿರೀಕ್ಷಕರಾದ ನಜುಂಡೇ ಗೌಡ, ಸುಳ್ಯ ಪೊಲೀಸ್ ನಿರೀಕ್ಷಕರಾದ ಮಂಜಯ್ಯ ಹಾಗೂ ಜಿಲ್ಲೆಯ ಇನ್ನಿತರ ಠಾಣೆಗಳ ಉಪ ನಿರೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಗೋಪಾಲ ಕಾಡು […]