ದಲಿತ ವಿರೋಧಿ ವಿನಯ್ ಗಾಂವ್ಕರ್ ರನ್ನು ಅಮಾನತುಗೊಳಿಸಲು ದಸಂಸ ಮನವಿ.

3:26 PM, Monday, October 11th, 2010
Share
1 Star2 Stars3 Stars4 Stars5 Stars
(No Ratings Yet)
Loading...

ದಸಂಸದಿಂದ ಪ್ರತಿಭಟನೆ ಮಂಗಳೂರು: ಬಿಲ್ಲವ ಕುಟುಂಬದ ಬಡ ಮಹಿಳೆಯೊಬ್ಬರು ಮೋಸ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ದೂರು ಕೊಡಲು ಹೋದಾಗ ಬಂದರು ಠಾಣೆಯ ಇನ್ಸ್ ಪೆಕ್ಟರ್ ವಿನಯ್ ಗಾಂವ್ಕರ್ ಅಮಾನವೀಯವಾಗಿ ನಡೆಸಿಕೊಂಡದನ್ನು ವಿರೋದಿಸಿ ದಲಿತ ಸಂಘರ್ಷ ಸಮಿತಿಯಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಯಿತು.

ದಸಂಸದಿಂದ ಪ್ರತಿಭಟನೆ
ಕಳೆದ ಸಪ್ಟೆಂಬರ್ ನಲ್ಲಿ ರಮೇಶ ಎಂಬುವವರು ನೀರುಮಾರ್ಗದ ಗಾಯತ್ರಿ ಎಂಬ ಮಹಿಳೆಗೆ ತನ್ನ ಪರಿಚಯ ಮಾಡಿಸಿಕೊಂಡು ಹಂಪನ್ ಕಟ್ಟದಲ್ಲಿರುವ ಭಾರತ್ ಫೈನಾನ್ಸ್ ನ ಮಾಲಕರ ಮೂಲಕ ಸೊಸೈಟಿಯಲ್ಲಿರುವ 181 ಗ್ರಾಂ ಚಿನ್ನವನ್ನು ತೆಗೆಸಿ, ಅದನ್ನು ಮಹಿಳೆಗೆ ಕೊಡುವ ಬದಲು ಎಗರಿಸಿ ಮೋಸ ಮಾಡಿ ರಮೇಶ ಪರಾರಿಯಾಗಿದ್ದನು. ಈ ಬಗ್ಗೆ ದೂರು ನೀಡಲು ಹೋದ ಮಹಿಳೆ ಹಾಗೂ ದಾಖಲೆ ಪತ್ರವನ್ನು ತೋರಿಸಿದ ದಸಂಸ ಸಂಚಾಲಕ ಎಸ್.ಪಿ ಆನಂದರವರನ್ನು ಅವಮಾನಿಸಿದ್ದರು ಎಂದು ಆರೋಪಿ ಇಂದು ಪ್ರತಿಭಟನೆ ನಡೆಯಿತು.

ದಸಂಸದಿಂದ ಪ್ರತಿಭಟನೆ
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ದಸಂಸ ರಾಜ್ಯ ಸಂಚಾಲಕ ಪ್ರಕಾಶ್ ಬೇಡರ ಹಳ್ಳಿ ಮಾತನಾಡಿ ದಲಿತ ವಿರೋಧಿತನ ತೋರಿಸುವ ಇನ್ಸ್ಪೆಕ್ಟರ್ ವಿನಯ್ ಗಾಂವ್ಕರ್ ನ್ನು ಕೂಡಲೇ ಅಮಾನತುಗೊಳಿಸಬೇಕು, ಬಿಲ್ಲವ ಮಹಿಳೆಗೆ ಮೋಸ ಮಾಡಿದ ರಮೇಶ್ ನ ವಿರುದ್ಧ ಕೋಡಲೇ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ರೋಹಿತಾಕ್ಷ ವಿ.ವಿ ಘಟಕದ ವಿಶೇಷ ಅಧಿಕಾರಿ ಕೆ, ಉಮೇಶ್, ದಸಂಸ ಸದಸ್ಯ ಕೃಷ್ಣಪ್ಪ ಬಾನು ಉಪಸ್ಥಿತರಿದ್ದರು.

ದಸಂಸದಿಂದ ಪ್ರತಿಭಟನೆ

ದಸಂಸದಿಂದ ಪ್ರತಿಭಟನೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English