ಸ್ವ ಸಹಾಯ ಸಂಘದ ಹೆಸರಿನಲ್ಲಿ ಗ್ರಾಮೀಣ ಮಹಿಳೆಯರಿಗೆ ವಂಚಿಸಿದ ಮಹಿಳೆಯ ಬಂಧನ

1:41 PM, Saturday, February 23rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Nandikeshwak' self help groupಕುಂದಾಪುರ : ನಕಲಿ ಬ್ಯಾಂಕ್  ಪಾಸ್ ಪುಸ್ತಕಗಳನ್ನು ಸೃಷ್ಟಿಸಿ ಬಡ ಮಹಿಳೆಯರಿಗೆ ಸಾವಿರಾರು ರೂಪಾಯಿಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಬಾಬಿ ಶೆಡ್ತಿ ಎಂಬಾಕೆಯನ್ನು ಕುಂದಾಪುರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ.

ಕೊರ್ಗಿ ದೊಡ್ಡೇರಿ ನಂದಿಕೇಶ್ವರ ನಿಲಯದ ಸುಧಾಕರ ಶೆಟ್ಟಿ ಎಂಬವರ ಪತ್ನಿ ಬಾಬಿ ಶೆಡ್ತಿ ಎಂಬುವವರು  ನಂದಿಕೇಶ್ವರ ಸ್ವ-ಸಹಾಯ ಸಂಘ ಎಂಬ ಹೆಸರಿನಲ್ಲಿ ಸಂಘವನ್ನು ಹುಟ್ಟುಹಾಕಿ ಹೊಂಬಾಡಿ-ಮಂಡಾಡಿ, ದೊಡ್ಡೇರಿ, ಹೆಸ್ಕತ್ತೂರು ಮುಂತಾದ ಗ್ರಾಮಗಳ ಮಹಿಳೆಯರು ಈ ಸಂಘಕ್ಕೆ ಸೇರುವಂತೆ ಮಾಡಿ ಅವರಿಂದ ಆರಂಭಿಕ ಠೇವಣಿಯಾಗಿ 5085 ರೂ.ಗಳನ್ನು ಪಡೆದು ಪ್ರತಿ ತಿಂಗಳು ನೂರು ರೂಪಾಯಿಗಳನ್ನು ಪಿಗ್ಮಿಯಂತೆ ಸಂಗ್ರಹಿಸಿ ಮೂರು ವರ್ಷಗಳ ನಂತರ 32 ಸಾವಿರ ಹಿಂದಿರುಗಿಸುವಂತೆ ಆಸೆ ಹುಟ್ಟಿಸಿ ನೂರಾರು ಬಡ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾಳೆ ಮತ್ತು ಇವರಿಗೆ ನಂಬಿಕೆ ಬರಲು ಆಗಾಗ ಸಭೆಯನ್ನು ನಡೆಸುತ್ತಿದ್ದುದಾಗಿ ತಿಳಿದುಬಂದಿದೆ.

ಆದರೆ ಸಂಘದ ಸದಸ್ಯರೊಬ್ಬರು ಡಿಸೆಂಬರ್ ನಲ್ಲಿ ತೆಕ್ಕಟ್ಟೆ ಬ್ಯಾಂಕ್ ಶಾಖೆಗೆ ಹೋಗಿ ತಾವು ಕಟ್ಟಿದ ಹಣದ ಬಗ್ಗೆ ವಿಚಾರಿಸಿದಾಗ ಬಾಬಿ ಶೆಡ್ತಿಯ ವಂಚನೆ ಬಗ್ಗೆ ಬಯಲಿಗೆ ಬಂದಿದೆ. ಇದೀಗ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾರ್ಚ್ 6ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣವು ಕುಂದಾಪುರ ಠಾಣೆಯಲ್ಲಿ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English