ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯು ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡುಗಳಲ್ಲಿ ಈಗಾಗಲೇ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು ಒಟ್ಟು 369 ನಾಮಪತ್ರಗಳು ಸ್ವೀಕೃತವಾಗಿವೆ. ಈ ನಾಮ ಪತ್ರಗಳಲ್ಲಿ ಬಿಜೆಪಿಯ 120 ನಾಮಪತ್ರಗಳು , ಕಾಂಗ್ರೆಸ್ ನ 83 ನಾಮಪತ್ರಗಳು, ಜೆಡಿಎಸ್ ನ 53 ಅಭ್ಯರ್ಥಿಗಳ ನಾಮಪತ್ರಗಳು ಸಿಪಿಐ 1, ಸಿಪಿಐಎಂ 15, ಪಕ್ಷೇತರರ 50, ಜೆಡಿಯುನ 2, ಕೆಜೆಪಿಯ 16, ಬಿಎಸ್ ಆರ್ ಕಾಂಗ್ರೆಸ್ ನ 10, ಡಬ್ಲ್ಯೂಪಿಐ 4, ಎಸ್ ಡಿಪಿಐನ 15 ನಾಮಪತ್ರಗಳು ಸೇರಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಎಲ್ಲಾ 60 ವಾರ್ಡುಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಬೇರೆ ಪಕ್ಷಗಳ ಕೆಲವು ಪ್ರಬಲ ನಾಯಕರನ್ನು ಹಾಗೂ ಹೆಸರಾಂತ ಉದ್ಯಮಿಗಳನ್ನು ತನ್ನ ಕಡೆ ಸೆಳೆದಿರುವ ಜೆಡಿಎಸ್ ಪ್ರಥಮ ಬಾರಿಗೆ 51 ವಾರ್ಡ್ ಗಳಲ್ಲಿ ಮಾತ್ರ ಸ್ಪರ್ಧೆ ನಡೆಸಲಿದೆ.
ಇನ್ನುಳಿದಂತೆ ಇತರೆ ಪಕ್ಷಗಳಾದ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಡಬ್ಲ್ಯೂಪಿಐ, ಎಸ್ ಡಿಪಿಐ ಮೊದಲಾದ ಪಕ್ಷಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
Click this button or press Ctrl+G to toggle between Kannada and English