ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಚಂಡಿಕಾಯಾಗ

6:10 PM, Thursday, February 28th, 2013
Share
1 Star2 Stars3 Stars4 Stars5 Stars
(No Ratings Yet)
Loading...

Chandika yagaಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು, ಉಪ್ಪಳ ಇಲ್ಲಿ ಫೆಬ್ರವರಿ 27 ರಿಂದ ಮಾರ್ಚ್  6 ರ ವರೆಗೆ ಸಹಸ್ರ ಮಹಾಯಾಗವೂ ನಡೆದಿದೆ.

Chandika yagaಫೆಬ್ರವರಿ 28 ರಂದು ಬೆಳಿಗ್ಗೆ 5 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಉಷಕಾಲ ಪೂಜೆ, ನಾಂಧೀ ಸಮಾರಾಧನೆ, ದುರ್ಗಾ ಸಪ್ತಶತೀ ಪಾರಾಯಣ ಆರಂಭವಾಯಿತು.

ಬೆಳಿಗ್ಗೆ ಅಥರ್ವ ಶೀರ್ಘ ಗಣಯಾಗವು ನವಾಕ್ಷರೀ ಜಪಹೋಮದೊಂದಿಗೆ ನಡೆಯಿತು. ದೇವಿ ಭಾಗವತ ಪ್ರವಚನ, ಸಾರ್ವಜನಿಕ ಅನ್ನಸಂತರ್ಪನಣೆಯು ನಡೆಯಿತು.

ಸಂಜೆ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

Chandika yagaರಾತ್ರಿ  ಗಂಟೆ 7 ರಿಂದ ಧಾಮರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ, ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು, ಮುಕ್ತಾನಂದ ಸ್ವಾಮೀಜಿ, ಕರಿಂಜೆ ಮೂಡಬಿದ್ರೆ ಇವರು  ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ, ಆನಂತ ಪದ್ಮನಾಭ ಅಸ್ರಣ್ಣ ದಿವ್ಯ ಉಪಸ್ಥಿತಿಯಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಸಭಾಧ್ಯಕ್ಷತೆ ವಹಿಸಲಿರುವರು ರಾತ್ರಿ 9 ರಿಂದ  ನಾಟ್ಯ ವೈಭವಂ. ನಾಟ್ಯ ಕಾರ್ಯಕ್ರಮ ನಡೆಯಲಿದೆ.

Chandika yaga

Chandika yaga

Chandika yaga

Chandika yaga

Chandika yaga

Chandika yaga

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English