ಬೆಂಗಳೂರು : ಕಾಲ್ಗೆಜ್ಜೆ ದ್ವನಿ ಸುರುಳಿ ಜನರನ್ನು ಮೋಡಿ ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದು ಇದರ ಗುಟ್ಟು.
ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ. ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ . ಚಿತ್ರದ ಹಾಡನ್ನು ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಸಂಗೀತ ನಿರ್ದೇಶಕ ಗಂಧರ್ವ ಹಾಗೂ ಚಿತ್ರದ ನಿರ್ದೇಶಕ ಎ. ಬಂಗಾರು ವೀಕ್ಷಿಸಿ ಸೈ ಎಂದಿದ್ದಾರೆ.
Click this button or press Ctrl+G to toggle between Kannada and English