ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಿಂದ ಬಂಟ್ವಾಳ ಪುರಸಭೆಗೆ ರೂ.39.95 ಲಕ್ಷ ಠೇವಣೆ ಹಣ ಸಂದಾಯವಾಗದೇ ಬಾಕಿಯಾಗಿರುವ ವಿಚಾರವೊಂದು ಮಾಹಿತಿ ಹಕ್ಕು ಕಾಯಿದೆಯಡಿ ಬಯಲುಗೊಂಡಿದೆ.
ಕಚೇರಿ ಮುಖ್ಯಸ್ಥರು ಮೂರು ಸಲ ನೋಟೀಸ್ ಜಾರಿ ಮಾಡಿದ್ದರೂ, ಸೆಝ್ ಅಧಿಕಾರಿಗಳು ಮಾತ್ರ ಠೇವಣಿ ಇಟ್ಟಿರಲಿಲ್ಲ. ಕಂಪೆನಿಯವರ ನಿರ್ಲಕ್ಷ್ಯಕ್ಕೆ ರೋಸಿ ಹೋದ ಅಧಿಕಾರಿಗಳು ಇದೀಗ ಪೊಲೀಸ್ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಮಂಗಳೂರು “ಶೇಷ ಆರ್ಥಿಕ ವಲಯ ಯೋಜನೆಗೆ ಸರಪಾಡಿ ಎಂಬಲ್ಲಿ ನೇತ್ರಾವತಿ ನದಿಯಿಂದ ನೀರಿನ ಪೈಪುಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಈ ಪೈಪುಲೈನ್ ಕಾಮಗಾರಿ ಸರಪಾಡಿ ಮೂಲಕ ಬಂಟ್ವಾಳ, ಸೊರ್ನಾಡು, ಎಡಪದವು ಮತ್ತು ಬಜ್ಪೆಯಾಗಿ ಮಂಗಳೂರಿಗೆ ಸಾಗುತ್ತಿದೆ.
ಈ ಸಂಬಂಧ ಪುರಸಭೆ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಭದ್ರಕಾಳಿ, ಮುಗ್ಡಾಲ್ ಗುಡ್ಡೆ, ಅರ್ಬಿಗುಡ್ಡೆ, ನಿತ್ಯಾನಂದ ನಗರ ರಸ್ತೆಯಲ್ಲಿ ಪೈಪುಲೈನ್ ಅಳವಡಿಸಲು ಎಸ್ಇಝಡ್ ತಾಂತ್ರಿಕ ಮುಖ್ಯಸ್ಥ “.ಹನುಮಾನುಲು, 2011ರ ನ.28ರಂದು ಪುರಸಭಾ ಮುಖ್ಯಾಧಿಕಾರಿ ಆರ್.”.ಜತ್ತನ ಅವರಿಗೆ ಪತ್ರ ಸಲ್ಲಿಸಿದ್ದರು. ಪುರಸಭಾ ವ್ಯಾಪ್ತಿಯ 1.42 ವ್ಯಾಸ, 2.5 “ಲೀಟರ್ ಆಳದಲ್ಲಿ ಪೈಪುಲೈನ್ ಅಳವಡಿಸಲಾಗುತ್ತಿದ್ದು, ಈ ಸಂದರ್ಭ ಕುಡಿಯುವ ನೀರು, ಚರಂಡಿ ಹಾಗೂ ಹಾನಿ ಉಂಟಾಗುವ ಇತರ ಸೇವೆಯನ್ನು ಪುನರ್ ನಿರ್ಮಿಸುವುದಾಗಿ ಸೆಝ್ ಅಧಿಕಾರಿಗಳು ಎಂ.ಎಸ್.ಇ.ಝಡ್.ಎಲ್ 847/2011-12ರಂತೆ ಬರೆಯಲಾದ ಪತ್ರದಲ್ಲಿ “ನಂತಿಸಿಕೊಂಡಿದ್ದರು.
2012ರ ಜ.30ಕ್ಕೆ ಮುಖ್ಯಾಧಿಕಾರಿ ಆರ್.”.ಜತ್ತನ ರಸ್ತೆಯ ಸುಸ್ಥಿತಿಗೆ ತಗಲಬಹುದಾದ ಸುಮಾರು 65 ಲಕ್ಷ ರೂ.ಗಳನ್ನು ಪುರಸಭೆ ಮುಖ್ಯಾಧಿಕಾರಿ ಖಾತೆಗೆ ಠೇವಣಿ ಇಡುವಂತೆ ಸೂಚಿಸಿ ಸೆಝ್ ತಾಂತ್ರಿಕ ಮುಖ್ಯಸ್ಥರಿಗೆ ನೋಟೀಸ್ ಕಳು”ಸಿದ್ದರು. ಆದರೂ ಠೇವಣಿ ಇಡದ ಕಂಪೆನಿಗೆ 2012ರ ಫೆ.29ರಂದು ಎರಡನೇ ನೋಟೀಸ್ ಕಳು”ಸಿದ ಮುಖ್ಯಾಧಿಕಾರಿ ಠೇವಣಿ ಮೊತ್ತವನ್ನು ಇಳಿಮುಖಗೊಳಿಸಿ 39.95 ಲಕ್ಷ ರೂ. ಠೇವಣಿ ಇಡುವಂತೆ ಸೂಚಿಸಿದ್ದು, ಆ ಬಳಿಕ ಕಾಮಗಾರಿಗೆ ಅನುಮತಿ ನೀಡುವುದಾಗಿಯೂ ಹೇಳಿದ್ದರು. ಇದೀಗ ಪುರಸಭಾಧಿಕಾರಿ ಮೂರನೇ ನೋಟೀಸ್ ಜಾರಿಗೊಳಿಸಿ ಠೇವಣಿ ಇಡುವಂತೆ ತಾಕೀತು ಮಾಡಿದ್ದಾರೆ. ಸೆಝ್ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಟಿ.ಕರ್ಕೇರ ಅವರೊಂದಿಗೆ ನಡೆಸಲಾದ ಪತ್ರ ವ್ಯವಹಾರಗಳಿಗೆ ಅವರು ಯಾವುದೇ ಹಿಂಬರೆಹ ನೀಡಿಲ್ಲ.
ಪುರಸಭೆ ಅನುಮತಿ ನೀಡುವ ವಿಚಾರ ಚರ್ಚಿತವಾಗಿದ್ದರೂ, ಪೈಪುಲೈನ್ ಅಳವಡಿಸುವ ಕೆಲಸ ಭರದಿಂದ ಸಾಗುತ್ತಿದೆ. ಕೃ ಚಟುವಟಿಕೆ ಉದ್ದೇಶಿತ “ಜಮೀನನ್ನೂ ಅಗೆಯಲಾಗಿದ್ದು, ಕೆಲವೊಂದು ಮರಗಳನ್ನು ಕೆಡ” ಹಾಕಲಾಗಿದೆ. ಪೈಪುಲೈನ್ ಕಾಮಗಾರಿುಂದಾಗಿ ಈ ಭಾಗದ ರಸ್ತೆ ಭಾಗಶಃ ಹಾನಿಗೀಡಾಗಿದೆ. ಕುಡಿಯುವ ನೀರಿನ ಪೈಪು, ಟೆಲಿಫೋನ್ ತಂತಿ, “ದ್ಯುತ್ ತಂತಿ ಇತ್ಯಾದಿ ಅಗತ್ಯ ಸೇವೆಗಳಿಗೆ ತಾಂತ್ರಿಕ ತೊಡಕುಂಟಾಗುತ್ತಿದೆ. ಇನ್ನೊಂದೆಡೆ ಕಾಂಕ್ರೀಟೀಕರಣ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ ಇಲ್ಲಿನ ಜನ ಜೀವನ ಈಗ ಅಸ್ತವ್ಯಸ್ತವಾಗುತ್ತಿದೆ.
ಷರತ್ತುಗಳು ಹೀಗಿವೆ :
ಪೈಪುಲೈನ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿ ಸರ್ಕಾರ ಸೆಝ್ ಗೆ ಕೆಲವೊಂದು ಷರತ್ತುಗಳನ್ನು ಸಾರ್ವಜನಿಕ “ತಾಸಕ್ತಿಗಳಡಿ “ಧಿಸಿದ್ದು, ಷರತ್ತುಗಳನ್ನು ಪಾಲಿಸುವಂತೆ ಪುರಸಭೆ ಮುನಿಸಿ(3)ಜೆಇ1: ರಸ್ತೆ ಅಗೆತ ಅನುಮತಿ/ 2012-13ರಂತೆ ನಿರ್ದೇಶನ ನೀಡಿತ್ತು. ರಸ್ತೆ ಅಗೆತ ಕಾಮಗಾರಿಯನ್ನು ಅಕ್ಟೋಬರ್ 15, 2012ರಿಂದ ಮೇ 31, 2013ರ ಒಳಗಾಗಿ ನಿರ್ವ”ಸಬೇಕು, 500 “ಮೀಟರ್ ಗೆ ಸೀಮಿತಗೊಳಿಸಿ, ಪೂರ್ಣಗೊಂಡ ಮೇಲೆ ಮುಂದಿನ ಗುರಿ ಕೈಗೊಳ್ಳುವುದು, ಕಾಮಗಾರಿ ಸಂದರ್ಭ ಸಾರ್ವಜನಿಕ, ವಾಹನ ಸಂಚಾರಗಳಿಗೆ ಯಾವುದೇ ಅಡೆಚಣೆ ಉಂಟಾಗಬಾರದು, ಕಾಮಗಾರಿ ತರುವಾಯ ರಸ್ತೆಯನ್ನು ಪೂರ್ವ ಸ್ಥಿತಿಗೆ ತರುವುದು, ಸಾರ್ವಜನಿಕ ಸ್ವತ್ತು, ಜಮೀನು ಹಾನಿಯಾಗದಂತೆ ಎಚ್ಚರಿಸುವುದು, ಧೂಳು ಏಳದಂತೆ ನೀರು ಹಾಕುವುದು, ಸಾರ್ವಜನಿಕ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವಂತ್ತಿಲ್ಲ. ದುರಸ್ತಿ, ಬದಲಾವಣೆಯನ್ನು ಕಂಪೆನಿ ಭರಿಸಬೇಕು. ಅಗೆತ ಕಾಮಗಾರಿಯ ಬಳಿಕ ರಸ್ತೆ ಕುಸಿತ, ಸಾರ್ವಜನಿಕ ಸ್ವತ್ತು ನಾಶ ಅಥವಾ ಬೇರಾವ ಹಾನಿಯುಂಟಾದಲ್ಲಿ ಕಂಪೆನಿಯನ್ನು ನೇರ ಹೊಣೆಯನ್ನಾಗಿಸುವುದು ಎಂಬುದು ಷರತ್ತಿನ ಸಾರಾಂಶ.
ಕ್ರಮಬದ್ಧವಾಗಿ ನಡೆಯಲಿ…
ಎಸ್ಇಝಡ್ ಪೈಪುಲೈನ್ ಕಾಮಗಾರಿ ನಿರ್ವಹಣೆಗೆ ಆಕ್ಷೇಪ ಮಾಡುವುದೇ ನಮ್ಮ ಉದ್ದೇಶವಲ್ಲ. ಕಂಪೆನಿ ಕಾರ್ಯವಿಧಾನ ಪಾರದರ್ಶಕವಾಗಿಲ್ಲ. ಕಂಪೆನಿಗೆ ವಿಧಿಸಲಾದ ಷರತ್ತುಗಳು ಪಾಲನೆಯಾಗುತ್ತದೋ ಅಥವಾ ಉಲ್ಲಂಘನೆಯಾಗುತ್ತದೋ ಎನ್ನುವುದನ್ನು ಪುರಸಭೆ ಮೇಲುಸ್ತುವಾರಿ ನೋಡಬೇಕು. ಕಾಂಕ್ರೀಟೀಕರಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆಯೇ? ಕಾಮಗಾರಿ ಗುಣಮಟ್ಟ ನಿಯಂತ್ರಣ ಯಾರು ನೋಡುತ್ತಾರೆ? ಇತ್ಯಾದಿ ಕೆಲವೊಂದು ಪ್ರಶ್ನೆಗಳು ಎದುರಾಗುತ್ತಿದ್ದು, ಎಲ್ಲವೂ ಕ್ರಮಬದ್ಧವಾಗಿಯೇ ನಡೆಯಲಿ ಎಂಬುದು ಸಾರ್ವಜನಿಕ “ಹಿತಾಸಕ್ತಿಯ ಆಶಯ.
Click this button or press Ctrl+G to toggle between Kannada and English