ಮಂಗಳೂರು : ಮಂಗಳೂರಿನ ವಲ್ಡ್ರ್ ಕ್ಲಾಸ್ ರೋಡ್ ಮ್ಯಾಲೆ ಒಂದು ಅಟೋ ರಿಕ್ಷಾ ಜಮ್ ಜೂಮ್ ನಂತೆ ಓಡಾಡುತ್ತಿದೆ. ಅದರಲ್ಲಿ ಅಂತಹದೇನೂ ವಿಶೇಷ … ಅಟೋ ರಿಕ್ಷಾಗಳು ರಸ್ತೆ ಮ್ಯಾಲೆ ಓಡದೇ ತಲೆಯ ಮೇಲೆ ಓಡುತ್ತಾ.. ಕೇಳ ಬೇಡಿ.
ಇದು ಎಲ್ಲರೂ ನೋಡುವಂತಹ ಮೂರು ಚಕ್ರದ ವಾಹನ ಆಟೋ ರಿಕ್ಷಾನೇ… ಅದರಲ್ಲೂ ಕೊಂಚ ವಿಶೇಷವಿದೆ. ಅಲ್ಲಿ ರಿಕ್ಷಾದಲ್ಲಿ ಕೂತು ಸವಾರಿ ಮಾಡುವ ಪ್ರಯಾಣಿಕರನ್ನು ಥಂಡಾ ಮಾಡುವಂತಹ ಒಂದು ಎಸಿ ಕೂಲರ್ ಇದೆ. ದಣಿವಾದಾಗ ಜಸ್ಟ್ ಕಫ್ ಆಫ್ ಟೀ ಕುಡಿಯೋಣ ಅಂತಾ ಕಾಫಿ ಬಾರ್ ಇದೆ. ಜತೆಯಲ್ಲಿ ಇಂದಿನ ಟಿವಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡೋದು ಅಂತಾ ಹೇಳಿದರೆ ಅಲ್ಲೂ ಸ್ಮಾಲ್ ಸೈಜ್ ನ ಟಿವಿ ಆನ್ ಆಗುತ್ತೆ.. ಇದು ಎಲ್ಲವೂ ವಿಶೇಷ ಅಲ್ವಾ..? ನಿಜಕ್ಕೂ ಇಂತಹ ಆಟೋ ರಿಕ್ಷಾ ಮಂಗಳೂರಿನ ರಸ್ತೆಯ ಮ್ಯಾಲೆ ಓಡುತ್ತಾ..? ಮೊದಲಾದ ಪ್ರಶ್ನೆಗಳಿಗೆ ಒಂದು ಬ್ರೇಕ್ ಹಾಕಿ.
ಕದ್ರಿ ಶಿವಭಾಗ್ ಹತ್ತಿರ ಒಂದು ಮನೆ ಇದೆ. ಅಲ್ಲಿ ಜಾನ್ ವಲೇರಿಯಸ್ ತಾವ್ರೋ ಎಂಬ ವಿಶಿಷ್ಟ ವ್ಯಕ್ತಿ ಇದ್ದಾರೆ. ಅವರ ಮಾಲೀಕತ್ವದ ಈ ರಿಕ್ಷಾ ರಸ್ತೆಯ ಮ್ಯಾಲೆ ಏನೋ ಓಡುತ್ತೆ.. ಆದರೆ ಅವರು ಈ ರಿಕ್ಷಾವನ್ನು ಬಾಡಿಗೆಗಾಗಿ ಬಿಟ್ಟಿಲ್ಲ. ಆದರೆ ಹವ್ಯಾಸಕ್ಕಾಗಿ ಓಡಾಡುವ ಈ ರಿಕ್ಷಾ ಬೇಕಾದರೆ ಯಾರು ಬೇಕಾದರೂ ಕೂತು ಎದ್ದು ಹೋಗಬಹುದು. ಜಾನ್ ವಲೇರಿಯಸ್ ತಾವ್ರೋ ಕಳೆದ 35 ವರ್ಷಗಳಿಂದ ಕುವೈಟ್ ನ ಸಿವಿಲ್ ಆವಿಯೇಷನ್ ನಲ್ಲಿ ಸೀನಿಯರ್ ಸೂಪರ್ವೈಸರ್ ಇನ್ ಏರ್ ಕಂಡೀಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿಕೊಂಡು ಜಸ್ಟ್ ಕಳೆದ ವರ್ಷ(2009)ರಲ್ಲಿ ನಿವೃತ್ತಿಯಾಗಿ ತಮ್ಮ ಕದ್ರಿಯಲ್ಲಿರುವ ಸ್ವಂತ ಮನೆಗೆ ಬಂದಿದ್ದಾರೆ. ಈ ಅವಧಿಯಲ್ಲಿ ವಿಶಿಷ್ಟ ಹವ್ಯಾಸಗಳನ್ನು ಹೊಂದಿದ್ದ ಜಾನ್ ಏನಾದರೂ ವಿಶೇಷ ಮಾಡೋಣ ಅಂತಾ ಈ ರಿಕ್ಷಾದ ಹಿಂದೆ ಬಿದ್ದು ಬಿಟ್ಟರು.
2009ರಲ್ಲಿ ಬಜಾಜ್ ಕಂಪನಿಯಿಂದ ಒಂದು ಆಟೋ ರಿಕ್ಷಾವನ್ನು 1.10 ಸಾವಿರಕ್ಕೆ ಖರೀದಿ ಮಾಡಿದರು. ನೇರವಾಗಿ ಬಜಾಜ್ ಕಂಪನಿ ಇವರಿಗೆ ಅಟೋವನ್ನು ನೀಡಿತು. ಅಲ್ಲಿಂದ ಈ ಆಟೋ ಪಂಪ್ ವೆಲ್ ನ ಗ್ಯಾರೇಜುವೊಂದರಲ್ಲಿ ಮೋಡಿಫೈಡ್ ಮಾಡಿಕೊಳ್ಳಲು ಭರ್ತಿಯಾಯಿತು. ನಂತರ ಗ್ಯಾರೇಜಿನಿಂದ ಹೊರಬಂತು ನೋಡಿ ಹೈಫೈವ್ ವಿಶಿಷ್ಟ ಆಟೋ… ಅದರಲ್ಲಿ ಎಲ್ಲವೂ ಇದೆ. ವಿಮಾನದೊಳಗೆ ಇರುವ ವಿಶಿಷ್ಟವಾದ ವಿನ್ಯಾಸ, ಎಸಿ, ಕಾಫಿ ಬಾರ್, ಸೆಟಲೈಟ್ ರೇಡಿಯೋ, ಫ್ಯಾನ್ ಎಲ್ಲವೂ ಹೊತ್ತುಕೊಂಡು ರಸ್ತೆಗೆ ಇಳಿಯಿತು. ಮಂಗಳೂರಿಗೆ ಮಂಗಳೂರೇ ಒಂದು ಸಾರಿ ಖುಶಿಯಿಂದ ಆಟೋ ರಿಕ್ಷಾವನ್ನು ನೋಡಿ ದಂಗಾಯಿತು. ಆದರೆ ಯಾರಿಗೂ ಈ ರಿಕ್ಷಾದ ಡಿಟೇಲ್ ಗೊತ್ತಾಗಿಲ್ಲ. ನೋಡಿದವರು ಅದರ ಮುಂದೆ ನಿಂತು ಫೋಟೋ ಕ್ಲಿಕ್ ಮಾಡಿದರು. ಮಕ್ಕಳು ನೋಡಿ ಖುಶಿ ಪಟ್ಟರು.. ಟಾಟಾದ ನ್ಯಾನೋ ಕಾರು ಮುಂದೆ ನಿಂತಿದ್ದರೂ ಕೂಡಾ ತನ್ನ ರಿಕ್ಷಾವನ್ನು ನೋಡಿಕೊಂಡು ಭೇಷ್ ಅಂದು ಬಿಟ್ಟರು ಎಂದು ಜಾನ್ ತಾವ್ರೋ ತಮ್ಮ ಕನಸ್ಸಿನ ಕೂಸು ರಿಕ್ಷಾದ ಕುರಿತು ಮಾತನಾಡಿದರು.
ಜಾನ್ರಿಗೆ ಪ್ರವಾಸ ಮಾಡೋದು ಎಂದರೆ ಬಹಳ ಪ್ರೀತಿ. ನಿವೃತ್ತರಾದ ನಂತರ ಅವರು ವಿದೇಶಗಳಲ್ಲಿ ಬಹಳ ತಿಂಗಳು ಕಳೆಯುತ್ತಾರೆ. ಚೀನಾಕ್ಕೆ ಒಂದು ಸಾರಿ ಭೇಟಿ ನೀಡಿದಾಗ ಅಲ್ಲಿ ಕಡಿಮೆ ಖರ್ಚಿನ ವಾಹನಗಳಲ್ಲಿ ಓಡಾಡುವ ಮಂದಿಯನ್ನು ನೋಡಿದೆ. ರಿಕ್ಷಾದಂತಹ ವಾಹನ ಅಲ್ಲಿ ಬಹಳ ಫೇಮಸ್. ಎಲ್ಲರಿಗೂ ಕಾರು, ಬೈಕ್ ಅಂತಾ ಅದರ ಹಿಂದೆ ಬಿದ್ದರೆ ಚೀನಾದಲ್ಲಿ ಸೈಕಲ್ ಗಾಡಿಗೆ ಹಿಂದೆ ಬೀಳುತ್ತಿದ್ದಾರೆ. ಇಂತಹ ಒಂದು ಐಡಿಯಾ ಅಂದು ತಲೆಯಲ್ಲಿ ಹೊಳೆಯಿತು. ನಂತರ ನನ್ನ ಊರಿನಲ್ಲಿಯೇ ಇಂತಹ ಒಂದು ಸಣ್ಣ ಬಜೆಟ್ ನ ಒಂದು ವಾಹನವನ್ನು ರೆಡಿ ಮಾಡಿಕೊಂಡು ಎಲ್ಲರಿಗೂ ತೋರಿಸಬೇಕು ಎಂಬ ಉತ್ಸಾಹ ಬೆಳೆಯಿತು ಎಂದು ಅವರು ತಮ್ಮ ರಿಕ್ಷಾದ ಇನ್ನರ್ ಸ್ಟೋರಿಯನ್ನು ಬಿಚ್ಚಿಟ್ಟರು. `ಭಾರತದ ಈಗ ಹಿಂದೆಯಂತೆ ಹಿಂದುಳಿದ ದೇಶವಲ್ಲ… ಗಲ್ಪ್ ದೇಶದಲ್ಲಿರುವ ಎಲ್ಲಾ ಸವಲತ್ತುಗಳು ಇಲ್ಲಿವೆ.. ಆದರೆ ರೋಡ್, ವಿದ್ಯುತ್, ಕೆಲವೊಂದು ಮೂಲಭೂತ ಸವಲತ್ತುಗಳಲ್ಲಿ ಹಿಂದುಳಿದಿದೆ ‘ಎಂಬ ಬೇಸರವಿದೆ ಎಂದು ಜಾನ್ ಭಾರತ ಹಾಗೂ ಗಲ್ಪ್ ದೇಶಗಳಲ್ಲೂ ಹೋಲಿಕೆ ಮಾಡಿ ನೋಡಿದರು.
ಮಂಗಳೂರಿನಲ್ಲಿ ಜಾನ್ರದ್ದು ವಿಶಿಷ್ಟ ಮನೆ ಇದೆ. ಅದರ ಹೆಸರೇ `ಬಜೆಟ್ ಹೌಸ್’ ಇದು ಯಾಕೆ ಬಂತು ಅಂತಾ ಕೇಳಿ…? 10 ವರ್ಷಗಳ ಹಿಂದೆ ಜಾನ್ ಮನೆ ಕಟ್ಟುವ ಯೋಚನೆ ಮಾಡಿದಾಗ ಅವರು ಹತ್ತಾರು ಎಂಜಿನಿಯರ್ಗಳನ್ನು ಭೇಟಿಯಾದರೂ ಅವರು ಇವರಲ್ಲಿ ಕೇಳಿದ್ದು ಒಂದೇ.. ಅದು` ನಿಮ್ಮ ಮನೆಯ ಬಜೆಟ್ ಎಷ್ಟು..?’ ಇದೇ ಮಾತು ಹೊಸ ಮನೆಗೆ ನಾಮಕರಣವಾಯಿತು. ಈಗ ಈ ಮನೆ `ಬಜೆಟ್ ಹೌಸ್’ ಎಂದೇ ಕದ್ರಿಯ ಸುತ್ತಮುತ್ತ ಫೇಮಸ್ ಆಗಿದೆ. ಜತೆಯಲ್ಲಿ ಅವರ ಹವ್ಯಾಸ ಕೂಡ. ಇದೇ ಹವ್ಯಾಸದಿಂದ ಅವರು ಈಗ ಜೀಪ್ ಗಳನ್ನು ತಂದು ಹಳೆಯ ಕಾರಿನ ಥರ ಮೋಡಿಫೈಡ್ ಮಾಡುವ ಯೋಚನೆ ಮಾಡಿದ್ದಾರೆ. ಆದರೆ ಗಲ್ಪ್ ನ ವ್ಯಕ್ತಿ ಎಂಬ ಕಾರಣಕ್ಕೆ ಹಳೆಯ ಜೀಪ್ ಗಳಿಗೆ ಹೆಚ್ಚು ಹಣದ ಬೇಡಿಕೆ ಇಡುವ ಕಾರಣದಿಂದ ಇವರ ಹವ್ಯಾಸಕ್ಕೆ ಕೊಂಚ ಬ್ರೇಕ್ ಬೀಳುತ್ತಿದೆ. ಎಲ್ಲಕ್ಕಿಂತ ಅವರ ರಿಕ್ಷಾದ ಹಿಂದಿರುವ ಸ್ಲೋಗನ್ ` ಸ್ಟಾರ್ಟ್ ಎರ್ಲಿ .. ಡ್ರೈವ್ ಸ್ಲೋವ್ ಲೀ..ರೀಚ್ ಸೇಪ್ಟಿಲೀ ಎಂಬ ಮಾತು ಮಂಗಳೂರಿನ ರಸ್ತೆಯ ಮೇಲೆ ಓಡುವ ವಾಹನಗಳನ್ನು ನೋಡಿದಾಗ ಜಸ್ಟ್ ಫ್ಲಾಶ್ ಆಯಿತು. ಇಂದಿನ ಕಾಲಕ್ಕೆ ಇದು ಬಹಳ ಸೂಕ್ತ ಅಂತಾ ಅನ್ನಿಸಿಬಿಟ್ಟಿತ್ತು..
Click this button or press Ctrl+G to toggle between Kannada and English