ಎಸ್.ಡಿ.ಪಿ.ಐ ನಿಂದ ರಾಜಕೀಯ ಅಸ್ಥಿರತೆ ಸರಿದೂಗಿಸಲು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

8:35 PM, Friday, October 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಜನತೆ ಹಿಂದೆಂದೂ ಕಂಡಿರದ ನಾಟಕೀಯ ರಾಜಕೀಯ ನಡೆಯುತ್ತಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಮ್ಮದು ಭ್ರಷ್ಟಾಚಾರ ರಹಿತ, ರೈತರ ಬಡವರ ಪರ ಆಡಳಿತ ನೀಡುತ್ತೇವೆಂದು ಜನತೆಗೆ ಆಶ್ವಾಸನೆ ನೀಡಿ ಈ ಸರಕಾರದಿಂದ ನಿರೀಕ್ಷಿಸಿದ್ದ ಎಲ್ಲಾ ಭರವಸೆಗಳನ್ನು ಹುಸಿಯಾಗಿಸಿದೆ. ಬಿಜೆಪಿ ಸರಕಾರಕ್ಕೆ ಆಡಳಿತ ನಡೆಸಲು ಈ ರಾಜ್ಯದ ಜನತೆ ಸ್ಪಷ್ಟ ಜನಾದೇಶ ನೀಡಿದ್ದರೂ, ಇತರ ಪಕ್ಷಗಳಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ಹಣ ಹಾಗೂ ಮಂತ್ರಿಗಿರಿಯ ಅಮಿಷ ತೋರಿಸಿ ಕುದುರೆ ವ್ಯಾಪಾರ  ನಡೆಸುವ ಮೂಲಕ “ಆಪರೇಶನ್ ಕಮಲ”ದ ರಾಜಕೀಯ ಪ್ರಾರಂಭಿಸಿದ್ದೇ ಈಗ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳಿಗೆ ಕಾರಣವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನಾತ್ಮಕವಾಗಿ ಆಡಳಿತ ನಡೆಸಲು ತಿಳಿಯದ ಈ ರಾಜ್ಯ ಸರಕಾರ ಕಳೆದ 3 ವರ್ಷಗಳಲ್ಲಿ ಸರಕಾರವನ್ನು ಉಳಿಸುವುದಕ್ಕಾಗಿಯೇ ಸಮಯ ಕಳೆಯಬೇಕಾಯಿತು.

ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ತನ್ನ ಸರಕಾರದ ಮಂತ್ರಿಗಳ ಭ್ರಷ್ಟಾಚಾರ, ಲೈಂಗಿಕ ಪ್ರಕರಣಗಳಿಂದ ನಿರಂತರ ರಾಜಿನಾಮೆ ಹಾಗೂ ರೈತ ವಿರೋಧಿ, ಜಾತ್ಯಾತೀತ ವಿರೋಧಿ ನೀತಿಗಳಿಂದ ಈ ರಾಜ್ಯದ ಜನತೆ ಬಿಜೆಪಿ ಸರಕಾರದಲ್ಲಿದ್ದ ವಿಶ್ವಾಸವನ್ನು ಕಳೆದು ಕೊಂಡಿದ್ದಾರೆ. ಬಳ್ಳಾರಿಯಲ್ಲಿ ನೆರೆ ಸಂಭವಿಸಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಈ ಸಂದರ್ಭದಲ್ಲಿ ಅವರಿಗೆ ಆಶ್ರಯ ನೀಡಲು ವಿಫಲವಾಗಿರುವ ಸರಕಾರದ ಮಂತ್ರಿಗಳು, ಶಾಸಕರು ರೆಸಾರ್ಟ್ ರಾಜಕೀಯವನ್ನೇ ಮುಂದುವರಿಸುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಇಂದು ಸಂಜೆ ಜಿಲ್ಲಾಧಿಕಾರಿ ಕಛೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ರಾಜ್ಯ ಸರಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಜ್ಯೋತಿಷಿಗಳ ಮಾತನ್ನು ನಂಬಿ ವಿಧಾನ ಸೌಧದ ಗೇಟಿಗೆ ಬೀಗ ಹಾಕಿರುವುದು ಸಂವಿಧಾನಕ್ಕೆ ಎಸಗಿರುವ ಘೋರ ಅಪಚಾರವಾಗಿರುತ್ತದೆ.

ಎಸ್.ಡಿ.ಪಿ.ಐ ನಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ಆದುದರಿಂದ ಮಾನ್ಯ ರಾಜ್ಯಪಾಲರು ಈ ಎಲ್ಲಾ ವಿದ್ಯಾಮಾನಗಳನ್ನು ಅವಲೋಕಿಸಿ, ಪ್ರಜಾಪ್ರಭುತ್ವವಾಗಿ ಹಾಗೂ ಸಂವಿದಾನಾತ್ಮಕ ನೆಲೆಯಲ್ಲಿ ಈ ರಾಜ್ಯದ ಜನತೆಗೆ ಆಡಳಿತ ಸಿಗಲು ರಾಜ್ಯ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಲು ಶಿಫಾರಸ್ಸು ಮಾಡಬೇಕೆಂದು ಎಸ್.ಡಿ.ಪಿ.ಐ, ಜಿಲ್ಲಾ ಸಮಿತಿಯ ಸದಸ್ಯರು ವಿನಂತಿಸಿದರು.
ಪ್ರತಿಭಟನಾ ಸಭೆಯಲ್ಲಿ ಅನ್ವರ್ ಸಾದಾತ್, ರಾಜ್ಯ ಸಮಿತಿ ಸದಸ್ಯರು, ಅಬ್ದುಲ್ ಲತೀಫ್ ಪುತ್ತೂರು, ರಾಜ್ಯ ಸಮಿತಿ ಸದಸ್ಯರು, ಅಝೀಝ್ ಸುರತ್ಕಲ್ ರಾಜ್ಯ ಸಮಿತಿ ಸದಸ್ಯರು, ಜಲೀಲ್ ಕೃಷ್ಣಾಪುರ, ಕಾರ್ಯಧ್ಯಕ್ಷರು ಎಸ್.ಡಿ.ಪಿ.ಐ, ದ.ಕ, ಕೃಷ್ಣಪ್ಪ ಸುನ್ನಾಜೆ, ಜಿಲ್ಲಾ ಸಮಿತಿ ಸದಸ್ಯರು ಎಸ್.ಡಿ.ಪಿ.ಐ, ದ.ಕ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English