ಸುಳ್ಯ : ಪೈಚಾರ್ ಎಂಬಲ್ಲಿ ಭೀಕರ ದುರಂತವೊಂದು ಅತ್ಯಂತ ಪವಾಡಸದೃಶ ರೀತಿಯಲ್ಲಿ ತಪ್ಪಿದೆ. ಮನೆಯ ಮುಂಭಾಗದಲ್ಲೇ ಇದ್ದ ಬೃಹತ್ ತೆಂಗಿನ ಮರವೊಂದು ದಿಢೀರನೆ ಬುಡಸಮೇತ ಮುರಿದು ನೇರವಾಗಿ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ. ಮರ ಬೀಳುವಾಗ ತಂಗುದಾಣದಂತಿದ್ದ ಅಂಗಳದಲ್ಲೇ ವ್ಯಕ್ತಿಯೊಬ್ಬರು ನಿಂತಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಮನೆಯ ಮೇಲ್ಛಾವಣಿಯ ಸ್ಲ್ಯಾಬ್ನಿಂದ ಧುಮ್ಮಿಕ್ಕುತ್ತಿದ್ದ ಮಳೆ ನೀರನ್ನು ಬಕೆಟ್ಗೆ ಹಿಡಿಯಲು ಆ ವ್ಯಕ್ತಿ ಅಂಗಳಕ್ಕೆ ಬಂದಿದ್ದರು. ನೀರು ತುಂಬಿಸುವ ಭರದಲ್ಲಿದ್ದಾಗಲೇ ಮರ ಮುರಿದು ಬೀಳುವ ಸದ್ದು ಕೇಳಿಸಿದೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಕ್ಷಣಾರ್ಧದಲ್ಲಿ ಅಲ್ಲಿಂದ ಪಕ್ಕಕ್ಕೆ ಓಡಿದ್ದರಿಂದ ದೊಡ್ಡ ವಿಪತ್ತಿನಿಂದ ಪಾರಾಗಿದ್ದಾರೆ. ಇದಕ್ಕಿಂತಲೂ ಆಶ್ಚರ್ಯದ ಸಂಗತಿಯೆಂದರೆ, ಮರ ಬೀಳುವ ಕೆಲವೇ ನಿಮಿಷಗಳ ಮುನ್ನವಷ್ಟೇ ಅವರ ತಾಯಿ ಕೂಡ ಅದೇ ಜಾಗದಲ್ಲಿ ನಿಂತಿದ್ದರೆನ್ನಲಾಗಿದೆ. ಸದ್ಯ ಈ ಇಡೀ ರೋಮಾಂಚನಕಾರಿ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









