ಮಂಗಳೂರು : ಕದ್ರಿ ಪಾರ್ಕ್ ಬಳಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಮಿಳಾಳ ಸಾವು ಆತ್ಮಹತೆಯಲ್ಲ ಬದಲಿಗೆ ಕೊಲೆ ಎಂಬುದಾಗಿ ಆಕೆಯ ಮನೆಯವರು ಆರೋಪಿಸಿದ್ದಾರೆ.
ಬುಧವಾರ ಮಾರ್ಚ್ ೨೦ ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೀಳಲ ತಂದೆ ಅಮ್ಮು ಪೂಜಾರಿ, ವರ್ಷದ ಹಿಂದೆ ಮಂಗಳೂರಿಗೆ ಬಂದಿದ್ದ ಆಕೆ ಕಂಪ್ಯೂಟರ್ ಕೋರ್ಸನ್ನು ಕಲಿಯುತ್ತಿದ್ದು, ಕಲಿಕೆಯ ಜೊತೆ ಪಾರ್ಟ್ ಟೈಮ್ ಉದ್ಯೋಗವನ್ನು ಮಾಡುತ್ತಾ, ಕದ್ರಿ ಸಮೀಪದ ಹಾಸ್ಟೆಲ್ ಒಂದರಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 17 ಆದಿತ್ಯವಾರ ಎಂದಿನಂತೆ ಮನೆಗೆ ಕರೆ ಮಾಡಿ ಮಾತನಾಡಿದ್ದಳು ಅಲ್ಲದೆ ಗುರುವಾರ ಸಂಬಂಧಿಕರ ಮದುವೆ ಕಾರ್ಯಕ್ರಮವೊಂದಕ್ಕೆ ಬರುವುದಾಗಿ ತಿಳಿಸಿದ್ದಳು ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಮೀಳಳ ದೇಹದ ಮೇಲೆ ಉಗುರಿನಿಂದಾದ ಪರಚಿದ ಗಾಯಗಳಿದ್ದು ಪೊಲೀಸರು ಇದನ್ನು ಜೇನು ಕಡಿತದಿಂದಾದ ಗಾಯ ಎನ್ನುತ್ತಿದ್ದಾರೆ. ಆದರೆ ಜೇನು ಕಡಿತದಿಂದ ಪರಚಿದ ಗಾಯವಾಗುವುದಿಲ್ಲ. ಹಾಗಾಗಿ ಇದು ಆತ್ಮಹತ್ಯೆಯಲ್ಲ ಖಂಡಿತವಾಗಿಯೂ ಕೊಲೆ ಎಂದು ಅವರು ಆರೋಪಿಸಿದರು.
ಪ್ರಮಿಳ ಸೌಮ್ಯ ಸ್ವಭಾವದವಳಾಗಿದ್ದು ತರಗತಿಯ ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ಎಲ್ಲರೊಂದಿಗೆ ಸ್ನೇಹ ಜೀವಿಯಾಗಿದ್ದಳು. ಎಂದಿನಂತೆ ಮಾರ್ಚ್ ೧೮ ಸೋಮವಾರ ೭.೧೫ ಕ್ಕೆ ತರಗತಿಗೆ ಹಾಜರಾಗಿ ತೆರಳಿದ್ದಳು ಎಂದು ಆಕೆಯ ಕಂಪ್ಯೂಟರ್ ಕೇಂದ್ರದ ಶಿಕ್ಷಕರು ತಿಳಿಸಿದರು.
Click this button or press Ctrl+G to toggle between Kannada and English