ಬಂಟ್ವಾಳ : ಮದುವೆ ಸಮಾರಂಭಗಳಿಗೆ ತೆರಳಿ ಮಕ್ಕಳ ಚಿನ್ನಾಭರಣ ಕಳ್ಳತನಮಾಡುತ್ತಿದ್ದ ಮಹಿಳೆಯೋರ್ವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ನಿವಾಸಿ ಶಶಿಕಲ (47)ಬಂಧಿತ ಆರೋಪಿಯಾಗಿದ್ದಾರೆ.
ಸಭೆ ಸಮಾರಂಗಳಿಗೆ ತೆರಳುತ್ತಿದ್ದ ಈಕೆ ಕಳೆದ ಎರಡು ವರ್ಷಗಳಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಈಕೆಯ ಮೇಲೆ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರು ಈವರೆಗೆ ಪೊಲೀಸರ ಕಣ್ತಪ್ಪಿಸಿದ್ದಳು. ಬುಧವಾರ ಬಿಸಿ ರೋಡಿನ ಮದುವೆ ಹಾಲ್ ವೊಂದರಲ್ಲಿ ಶಶಿಕಲಾರ ಸರಗಳ್ಳತನವನ್ನು ವೀಡಿಯೋವೊಂದರಲ್ಲಿ ಗುರುತಿಸಿದ ಬಂಟ್ವಾಳ ಪೊಲೀಸರು ಬಿಸಿ ರೋಡಿನ ಖಾಸಗಿ ಹೊಟೇಲ್ ವೊಂದರಲ್ಲಿ ಈಕೆ ಇರುವ ಮಾಹಿತಿ ಪಡೆದು ಬಂಟ್ವಾಳ ನಗರ ಎಸೈ ಶೇಖರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈಕೆಯನ್ನು ಬಂಧಿಸಿದ್ದಾರೆ. ಸುಮಾರು ಐವತ್ತು ಪವನ್ ಚಿನ್ನದ ಸರವನ್ನು ಮಹಿಳೆಯಿಂದ ವಶಪಡಿಸಿಕೊಂಡಿದ್ದು ಅದರ ಮೌಲ್ಯ ಸುಮಾರು 1. 22ಲಕ್ಷ ರೂ. ಎಂದು ಅಂದಾಜಿಸಿದ್ದಾರೆ. ಈಕೆಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Click this button or press Ctrl+G to toggle between Kannada and English