ಮಂಗಳೂರು : ನಿರಂತರವಾಗಿ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ತೊಟ್ಟಿಲಗುರಿ ಬಳಿ ಆವರಣ ಗೋಡೆಯೊಂದು ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸುಂದರಿ(60), ಸುಂದರ(62), ಬೇಬಿ(50) ಮತ್ತು ಚೈತ್ರಾ(13) ಈ ದುರ್ಘಟನೆ ಮೃತಪಟ್ಟವರಾಗಿದ್ದಾರೆ.
ಅಶ್ವಿತಾ(14), ಅಶ್ವಿನಿ(18), ಆಶಾ(38), ವೀನಾ(50), ಅಶ್ವಥ್(11), ಶಾಂಭವಿ(12) ಮತ್ತು ಶೇಖರ್(48) ಗಾಯಗೊಂಡಿದ್ದಾರೆ. ಮೃತಪಟ್ಟ ಚೈತ್ರಾ ಈ ಮನೆಗೆ ನಿನ್ನೆ ಭೇಟಿ ನೀಡಿ ಅಲ್ಲೇ ಮಲಗಿದ್ದರು.
ಗೃಹ ಸಚಿವ ಕೆ.ಜೆ. ಜಾರ್ಜ್, ಸಚಿವರಾದ ಅಭಯಚಂದ್ರ ಜೈನ್ ಮತ್ತು ರಮಾನಾಥ ರೈ ಮತ್ತು ಜಿಲ್ಲಾಧಿಕಾರಿ ಎನ್. ಪ್ರಕಾಶ್, ಸಂಸದ ನಳಿನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಮೃತ ಕುಟುಂಬಗಳಿಗೆ ತಲಾ 1.5 ಲಕ್ಷ ರೂ. ನೀಡಲಾಗುವುದು ಮತ್ತು ತೊಂದರೆಗೊಳಗಾದ ಕುಟುಂಬಗಳಿಗೂ ನೆರವು ನೀಡಲಾಗುವುದು ಎಂದು ಕೆ.ಜೆ. ಜಾರ್ಜ್ ಹೇಳಿದರು.
ಸಂತ್ರಸ್ತರನ್ನು ತಾತ್ಕಾಲಿಕವಾಗಿ ಬಜಪೆ ಪಂಚಾಯತ್ ಕಚೇರಿಯ ಎರಡನೇ ಮಹಡಿಗೆ ಸ್ಥಳಾಂತರಿಸಲಾಗಿದೆ.
Click this button or press Ctrl+G to toggle between Kannada and English