ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ತಾಯಿ ಮಗು ಸಾವು

Saturday, January 22nd, 2022
Savitha

ಮಂಗಳೂರು : ಹೆರಿಗೆಗೆಂದು ಖಾಸಗಿ ಆಸ್ಪತ್ರೆಯೊಂದರಲ್ಲಿ  ದಾಖಲುಗೊಂಡಿದ್ದ  ತಾಯಿ ಮತ್ತು ಮಗು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಟ್ಲ ಮೂಲದ ಸವಿತಾ (33) ಹೆರಿಗೆಗಾಗಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ಮಗು ಬೆಳಗ್ಗೆ ಮೃತಪಟ್ಟಿದೆ. ಸಂಜೆ ವೇಳೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. […]

ಕೋವಿಡ್-19 ರೋಗದಿಂದ ಮೃತಪಟ್ಟ ಮುಸ್ಲಿಂ ಸಮಾಜದವರನ್ನು ಗೌರವದಿಂದ ಅಂತ್ಯ ಸಂಸ್ಕಾರ ಮಾಡಿ

Sunday, July 19th, 2020
coronadeath

ಬೆಂಗಳೂರು: ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ನಗರ ಉತ್ತರ ಜಿಲ್ಲೆ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಸದರಿ ಕಾರ್ಯಕ್ಕಾಗಿ […]

ಕುಸಿದು ಬಿದ್ದು ಮೃತಪಟ್ಟ ಹೋಟೆಲು ಕಾರ್ಮಿಕ, ಕೊರೊನಾ ಎಂದು ವದಂತಿ

Friday, May 29th, 2020
dead body

ಉಪ್ಪಿನಂಗಡಿ : ಮನೆಯವರಿಂದ ದೂರವಾಗಿದ್ದ ಉಡುಪಿ ಮೂಲದ 56 ವರ್ಷ ವ್ಯಕ್ತಿಯೋರ್ವ ಪರಿಚಯಸ್ಥರ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ  ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ದರ್ಬೆಯಲ್ಲಿ ಬುಧವಾರ ನಡೆದಿದೆ. ಮೃತ ವ್ಯಕ್ತಿ ಉಪ್ಪಿನಂಗಡಿಯ ಹೊಟೇಲ್‌‌ವೊಂದರಲ್ಲಿ ಕಾರ್ಮಿಕರಾಗಿದ್ದರು. ಲಾಕ್ ಡೌನ್ ಕಾರಣದಿಂದ ಹೊಟೇಲ್‌‌ ಮುಚ್ಚಿದ ಕಾರಣ ಕಾರಣ ಅವರು ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿದ್ದರು. ಈ ನಡುವೆ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಯಾರೋ ವದಂತಿ ಹಬ್ಬಿಸಿದ್ದು, ಕೊರೊನಾ ಭಯದಿಂದಾಗಿ ಯಾರೂ ಕೂಡಾ ಶವದ ಬಳಿ ಬರಲು ಒಪ್ಪದೆ  ಹೆಣ ಬೀದಿಯಲ್ಲಿಯೇ ಉಳಿಯುವಂತಾಯಿತು. ತಂದೆ ಮೃತಪಟ್ಟ ವಿಷಯ […]

ಭಾರೀ ಮಳೆಗೆ ಬಜ್ಪೆ ಸಮೀಪದ ತೊಟ್ಟಿಲಗುರಿಯಲ್ಲಿ ನಾಲ್ಕು ಮಂದಿ ಮೃತ

Tuesday, June 18th, 2013
ಭಾರೀ ಮಳೆಗೆ ಬಜ್ಪೆ ಸಮೀಪದ ತೊಟ್ಟಿಲಗುರಿಯಲ್ಲಿ  ನಾಲ್ಕು ಮಂದಿ ಮೃತ

ಮಂಗಳೂರು :  ನಿರಂತರವಾಗಿ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ತೊಟ್ಟಿಲಗುರಿ ಬಳಿ ಆವರಣ ಗೋಡೆಯೊಂದು ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತಪಟ್ಟ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಸುಂದರಿ(60), ಸುಂದರ(62), ಬೇಬಿ(50) ಮತ್ತು ಚೈತ್ರಾ(13) ಈ ದುರ್ಘಟನೆ ಮೃತಪಟ್ಟವರಾಗಿದ್ದಾರೆ. ಅಶ್ವಿತಾ(14), ಅಶ್ವಿನಿ(18), ಆಶಾ(38), ವೀನಾ(50), ಅಶ್ವಥ್(11), ಶಾಂಭವಿ(12) ಮತ್ತು ಶೇಖರ್(48) ಗಾಯಗೊಂಡಿದ್ದಾರೆ. ಮೃತಪಟ್ಟ ಚೈತ್ರಾ ಈ ಮನೆಗೆ ನಿನ್ನೆ ಭೇಟಿ ನೀಡಿ ಅಲ್ಲೇ ಮಲಗಿದ್ದರು. ಗೃಹ […]

ನದಿಗೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು ನೀರು ಪಾಲು

Monday, January 9th, 2012
Childrens Died

ಬೆಳ್ತಂಗಡಿ :  ರವಿವಾರದ ರಜಾ ಪ್ರಯುಕ್ತ ಮನೆ ಸಮೀಪದ ನದಿಗೆ ಸಂಜೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು  ಸುದೇಮುಗೇರು ಎಂಬಲ್ಲಿ  ನೀರು ಪಾಲಾದ ಘಟನೆ ವರದಿಯಾಗಿದೆ. ಕೇವಲ ಆರಡಿಯಷ್ಟು ನೀರು ನಾಲ್ವರು ಮಕ್ಕಳ ಪ್ರಾಣವನ್ನು ಬಲಿತೆಗೆದು ಕೊಂಡಿದೆ. ಲಾರಿ ನಿಲ್ಲಿಸಿ ಮರಳು ತೆಗೆಯುವ ಸ್ಥಳದಲ್ಲಿ ನೀರಿದ್ದರೂ ನಡೆದಾಡುವಷ್ಟು ಆಳದ ದಾರಿ ಇದೆ.  ರಜಾದ ಮಜಾ ಅನುಭವಿಸಲು ಈ ಮಕ್ಕಳು ಅಪರಾಹ್ನ ಸುಮಾರು 3.30ರ ವೇಳೆಗೆ ನದಿಗೆ ತೆರಳಿದ್ದರು. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಆಟವಾಡುತ್ತಿದ್ದರು.  3.45ರ ವೇಳೆಗೆ ಮಕ್ಕಳು ಕಾಣೆಯಾಗಿರುವುದು ಬೆಳಕಿಗೆ […]