ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ ಸಮಾರಂಭ

8:33 PM, Thursday, November 4th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯಮಂಗಳೂರು: ಆಕಾಶವಾಣಿ ಮತ್ತು ದೂದರ್ಶನ ನೌಕರರ ರಾಷ್ಟ್ರೀಯ ಮಹಾಕೂಟದ ಆಶ್ರಯದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್. ಅನಿಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ, ಮಂಗಳೂರು ನಗರದ ಎಸ್.ಡಿ.ಎಂ ಉದ್ಯಮಾಡಳಿತ ಉನ್ನತವಿದ್ಯಾಲಯದ ಸಭಾಂಗಣದಲ್ಲಿ ಇಂದು ಗುರುವಾರ (ನ.4) ಬೆಳಗ್ಗೆ ಹತ್ತು ಘಂಟೆಗೆ, “ಆಕಾಶವಾಣಿ-ಅಂದು, ಇಂದು” ಎಂಬ ವಿಷಯವಾಗಿ ರಾಷ್ಟ್ರೀಯ ವಿಚಾರಗೋಷ್ಟಿ, ಹಾಗೂ “ಬಾನುಲಿಯ ಬೆಳಕು” ಎಂಬ ಸ್ಮರಣಿಕೆಯನ್ನು ಬಿಡುಗಡೆಮಾಡುವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧರ್ಮಾಧಿಕಾರಿ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿಕೊಟ್ಟರು. ಪ್ರಸಾರಭಾರತೀಯ ಮಾಜಿ ಮುಖ್ಯಾಧಿಕಾರಿ / ಅಧ್ಯಕ್ಷರಾದ ಪತ್ರಕರ್ತ ಡಾ.ಎಂ.ವಿ ಕಾಮತ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಎಸ್. ಅನಿಲ್ ಕುಮಾರ್ ಅವರ ಅತಿಥಿಗಳಾಗಿ ಹಾಜರಿದ್ದರು.

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯತಮ್ಮ ಉದ್ಘಾಟನಾ ಭಾಷಣದಲ್ಲಿ ಡಾ. ಹೆಗ್ಗಡೆಯವರು ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ಕಾಲಕ್ಕೂ ಭಾರತದ ಮುಕ್ತಿಯ ಅನಂತರದ ಆರು ದಶಕಗಳಲ್ಲೂ ದುಡಿದ ಆಕಾಶವಾಣಿ ಹಾಗೂ ದೂರದರ್ಶನ ಸಂಸ್ಥೆಗಳ ನೌಕರ-ಅಧಿಕಾರಿವರ್ಗದವರು ಭಾರತೀಯ ಪ್ರಾಚೀನ ಕಲೆಗಳ-ಸಂಸ್ಕೃತಿ ವಿವಿಧ ಭಾಷೆಗಳು ನಡೆನುಡಿ-ಕಲಾ ಜೀವನ ಕಾರ್ಯಕಲಾಪಗಳನ್ನು ಜೀವಂತವಿಟ್ಟ ಪರಿ, ರೀತಿ ನೀತಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೆ, ಆಕಾಶವಾಣಿ ಕೇವಲ ಕಿವಿಗಳಿಗೆ ಇಂಪಾದರೆ, ದೂರದರ್ಶನ ಸೇವೆಗಳೂ ಕಣ್ಣಿಗೂ ತಂಪು ನೀಡಿ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದು ಪ್ರಜ್ವಲಿಸಿದ ದಾರಿಯ ಪಯಣವನ್ನು ಬೆರಳುಮಾಡಿ ಕೊಂಡಾಡಿದರು. ಇಂದಿಗೂ ಈ ವಿಚಾರಗೋಷ್ಠಿಯಲ್ಲಿ ಇನ್ನಷ್ಟು ಹೊಸವಿಚಾರಗಳು ಕಾರ್ಯಕ್ರಮಗಳ ವೈಖರಿಗಳು ಪ್ರತ್ಯಕ್ಷವಾಗಲಿರುವ ಬಗ್ಗೆ ಹಾರೈಕೆ ಮಾಡಿ ಶುಭೇಚ್ಛೆ ಪ್ರಕಟಿಸಿದರು.

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯಅಧ್ಯಕ್ಷ ಡಾ. ಕಾಂತರು ತಮ್ಮ ದೂರದರ್ಶನ ಆಕಾಶವಾಣಿ ಮತ್ತು ಪತ್ರಿಕೋದ್ಯಮ ಸಂಬಂಧಗಳನ್ನು ನೆನೆದು, ಇಂದಿಗೂ ಆಕಾಶವಾಣಿ-ದೂರದರ್ಶ ಸೇವೆಗಳು ನಾನಾ ಬಗೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಸರ್ವತ್ರ ಪಸರಿಸುತ್ತಿರುವ ಬಗ್ಗೆ ಹಾಡಿಹೊಗಳಿದರು. ಇಂದಿನ ಸಂವಾದದಲ್ಲಿ ಹಲವು ವಿಭಾಗಗಳಲ್ಲಿ ಪಾಲ್ಗೊಳ್ಳುವ ಗಣ್ಯವ್ಯಕ್ತಿಗಳ, ದಿಗ್ಗಜರ ಪಟ್ಟಿನೋಡಿಯೇ ಬೆರಗಾದರು. ಮುದ್ದು ಮೂಡುಬೆಳ್ಳೆ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English