ಮಂಗಳೂರು : ನಗರದ – ಮಣ್ಣಗುಡ್ಡ ರಸ್ತೆಯಲ್ಲಿ ಆಗಸ್ಟ್ 2 ರಂದು ಉದ್ಯಮಿಯ ಮೇಲೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆನ್ನು ಬರ್ಕೆ ಪೊಲೀಸರು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳಾದ ಸೂರಿಂಜೆಯ ನಿತೀಷ್‌ಕುಮಾರ್ ಯಾನೆ ಲಿಂತು(20), ಸತೀಷ್ ಯಾನೆ ಸಚ್ಚು (28) ಮರೋಳಿಯ ದೀಕ್ಷಿತ್ ಯಾನೆ ದಿಕ್ಷ್(26), ಬಜ್ಪೆಯ ಪದ್ಮ ರಾಜ್ ಯಾನೆ ಪದ್ದು(24), ಸೋಮೇಶ್ವರದ ಚೋನಿಯ ಯಾನೆ ಕೇಶವ (23)ಮತ್ತು ಕಂಕನಾಡಿಯ ಅನಿಲ್ (30) ಬಂಧಿತ ಆರೋಪಿಗಳಾ ಗಿದ್ದಾರೆ. ಇವರು ಈ ಹಿಂದೆ ಹಲವಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು , ನಿತೀಶ್ ಹೊಸ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಒಂದು ಪಿಸ್ತೂಲ್, ಬುಲೆಟ್ ಗಳು, ಬೈಕ್, ಮೂರು ಮೊಬೈಲ್ ವಶಪಡಿಸಿ ಕೊಳ್ಳಲಾಗಿದೆ. ನಿತೀಷ್ ಕುಮಾರ್, ಸತೀಷ್, ದೀಕ್ಷಿತ್ ಈ ಪ್ರಕರಣದಲ್ಲಿ ನೇರ ಆರೋಪಿಗಲಾಗಿದ್ದರೆ, ಕೇಶವ, ಪದ್ಮರಾಜ್ ಮತ್ತು ಅನಿಲ್ ಆರೋಪಿಗಳಿಗೆ ಸಹಕಾರ ನೀಡಿದ್ದರು. ಶೂಟೌಟ್ ಪ್ರಕರಣದ ಬಳಿಕ ಆರೋ ಪಿಗಳು ಬೆಂಗಳೂರಿಗೆ ಪರಾರಿಯಾಗಿ ದ್ದರು ಎಂದು ಹೇಳಲಾಗಿದೆ.
ಸಿಸಿ ಕ್ಯಾಮರಾಗಳಲ್ಲಿ ಮುದ್ರಿತವಾದ ಚಿತ್ರಗಳನ್ನು ಪೊಲೀಸರು ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗೆ ಸಹಾಯವಾಗಿತ್ತು ಎಂದು ಹೇಳಲಾಗಿದೆ.
ಉದ್ಯಮಿ ವಿಜಯೇಂದ್ರ ಭಟ್ ಅವರಿಗೆ ವಿಕ್ಕಿ ಶೆಟ್ಟಿಯಿಂದ ಬಂದ ಹಫ್ತಾ ವಸೂಲಿಯ ಬೆದರಿಕೆ ಕರೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಿಜೈ ರಾಜಾ ಕೊಲೆ ಪ್ರಕರಣದ ಆರೋಪಿಗಳಿಗೆ ಧನ ಸಹಾಯ ಮಾಡುತ್ತಿದ್ದರೆಂದು ಅವರ ಮೇಲೆ ದಾಳಿ ನಡೆಸಲಾಗಿದೆಂದು ಅರೋಪಿಗಳು ವಿಚಾರಣೆಯ ವೇಳೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
Click this button or press Ctrl+G to toggle between Kannada and English