ಮಂಗಳೂರು : ಇಂದು ಶ್ರೀ ಶ್ರೀ ಶ್ರೀ ಪೂಜಾ ಸಂಧ್ಯಾನಾಥ ಜಿ. ಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ದೇವರ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಆಶ್ರಯದಲ್ಲಿ ನಡೆಯಿತು .
ದೇವರ ವಿಧಿವಿಧಾನಗಳ ಬಳಿಕ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆಯನ್ನು ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಸಿದರು. ನಂತರ ಸಮುದ್ರಕ್ಕೆ ತೆಂಗಿನಕಾಯಿ, ಹೂವು ಸಮರ್ಪಸಿದರು. ಊರಿನ ಬಾಂಧವರೆಲ್ಲರೂ ಹಾಲೆರೆದು ಸಮುದ್ರ ದೇವತೆಯನ್ನು ನೆನೆದು ಪೂಜಿಸಿದರು.
ಅಧ್ಯಕ್ಷರಾಗಿ ಶಾಸಕ ಜೆ.ಆರ್.ಲೋಬೋ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಮಾತನಾಡಿ, ಅಳಿವೆ ಬಾಗಿಲಿನಿಂದ ಗುರುಪುರ ಹೊಳೆಯವರೆಗೆ ಹೊಗೆ ತೆಗೆಯುವುದನ್ನು ನಿಲ್ಲಿಸಿದ್ದರಿಂದ ಯಾಂತ್ರಿಕ ದೋಣಿಗಳು ಸಂಕಷ್ಟದಲ್ಲಿ ಸಿಲುಕಿವೆ. ಹಾಗಾಗಿ ಹೊಗೆ ನಿರಂತರವಾಗಿ ತೆಗೆಯುವ ಕಾರ್ಯವಾಗಬೇಕಿದೆ.ಮೀನುಗಾರಿಕೆಗೆ ಸಹ ಹೊಗೆ ತೆಗೆಯುವುದು ಅವಶ್ಯವಾಗಿದೆ. ಹೂಳೆತ್ತುವ ಕಾಮಗಾರಿಗೆ ಹೂಳೆತ್ತುವ ಯಂತ್ರ ಅವಶ್ಯವಾಗಿ ಬೇಕಾಗಿದೆ. ಮೀನುಗಾರಿಕೆಗೆ, ಬಂದರಿಗೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳಿವೆ ಮಂಗಳೂರು ಬಂದರ್ ವಿಸ್ತರಣೆಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜವಳಿ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನ್‌ಸೂರ್ ಭಾಗವಹಿಸಿದ್ದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ, ಮೊಗವೀರ ಸಮುದಾಯದಲ್ಲಿ ಇದೀಗ ಹೊಸ ಇತಿಹಾಸ ಸೃಷ್ಟಿಸಬೇಕಾಗಿದೆ. ನಾನು ಮೊಗವೀರ ಸಮಾಜದಿಂದ ಬಂದವನು.ಅದಕ್ಕಾಗಿ ಅನೇಕ ಅಭಿವೃದ್ದಿ ಕಾರ್ಯಮಾಡಬೇಕಾಗಿದೆ. ಹೂಳೆತ್ತುವಿಕೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ಏನೆಲ್ಲಾ ಸಮಸ್ಯೆಗಳಿವೆಯೋ ಅದರ ಕುರಿತು ಇಂದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಧ್ಯಾಹ್ನ ಚರ್ಚೆ ಮಾಡಲಾಗುದು
500 ಕೋಟಿ ವೆಚ್ಚದಲ್ಲಿ ಕಾರವಾರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಮಾಡುವ ಯೋಜನೆ ಇದ್ದು. ಇದು ಅಂತರಾಷ್ಟ್ರೀಯ ಮಟ್ಟದ ಬಂದರು ಎನಿಸಿಕೊಳ್ಳಲಿದೆ. ಮ್ಯಾರಿಟ್ಯಾನ್ ಬೊರ್ಡ್ ಈ ಬಗ್ಗೆ ಪ್ರಸ್ತಾವನೆ ಕೇಂದ್ರ ಗೃಹ ಸಚಿವರಲ್ಲಿದೆ. ಅಲ್ಲಿಂದ ಮುಂದೆ ರಾಷ್ಟ್ರಪತಿಯವರು ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆಯ ಬಳಿಕ ತಿಳಿಸಲಾಗುವುದು ಎಂದರು.
ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಸುವರ್ಣ, ಅಧ್ಯಕ್ಷರು ಮಾಧವ ಸಾಲಿಯಾನ್, ಕೋಶಾಧಿಕಾರಿ ದಯಾನಂದ್ ಪುತ್ರನ್, ಉಪಾಧ್ಯಕ್ಷ ದಿವಾಕರ ಅಂಚನ್, ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English