ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಎಸ್.ಐ.ಓ ಪ್ರತಿಭಟನೆ

7:06 PM, Saturday, September 28th, 2013
Share
1 Star2 Stars3 Stars4 Stars5 Stars
(5 rating, 5 votes)
Loading...

sio

ಮಂಗಳೂರು : ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳ ಬಸ್ಸು ಸಂಚಾರದ ಅವ್ಯವಸ್ಥೆ ವಿರುದ್ದ ಜಿಲ್ಲಾಧಿಕಾರಿ ಕಛೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.

ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಇಂದಿನ ದಿನಗಳಲ್ಲಿ ಬಸ್ಸು ಸಂಚಾರವು ತುಂಬಾ ಕಷ್ಟಕರವಾಗಿ ಪರಿಣಮಿಸುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆಯ ಹಾದಿಯು ದುಸ್ತರವಾಗಿದೆ ಎಂದು ಅಬ್ದುಲ್ ಲತೀಫ್ ಹೇಳಿದರು.

ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳ ಬಸ್ಸು ಶುಲ್ಕವು ಕೆಲವೊಮ್ಮೆ 4 ರೂಪಾಯಿ, ಇನ್ನು ಕೆಲವೊಮ್ಮೆ 5 ರೂಪಾಯಿಯಂತೆ ವಸೂಲಿ ಮಾಡಲಾಗುತ್ತಿದೆ. ಈ ದರವನ್ನು ನೀಡಲು ಮಕ್ಕಳಿಗೆ ಕಷ್ಟವಾಗುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಯ ಸಮೀಪವಿರುವ ರಾಜ್ಯವಾದ ಕೇರಳದಲ್ಲಿ ವಿದ್ಯಾರ್ಥಿ ಬಸ್ಸು ಶುಲ್ಕವು ಕೇವಲ 1 ರೂಪಾಯಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸುಗಮವಾಗಿ ಶಾಲೆಗೆ ಆಗಮಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಯಲ್ಲಿಯೂ ವಿದ್ಯಾರ್ಥಿಗಳಿಗೆ ಕೇವಲ 1 ರೂಪಾಯಿಯನ್ನು ನಿಗದಿಪಡಿಸಬೇಕು ಎಂದು ಅವರು ಹೇಳಿದರು.

ಬಸ್ಸು ಪಾಸು ಇರುವ ವಿದ್ಯಾರ್ಥಿಗಳೊಂದಿಗೆ ಖಾಸಗಿ ಬಸ್ಸು ಕಂಡೆಕ್ಟರ್ ಗಳು ಸರಿಯಾದ ರೀತಿಯಲ್ಲಿ ವರ್ತಿಸುವುದಿಲ್ಲ. ಇದರಿಂದಾಗಿ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಬಸ್ಸು ತಪ್ಪಿ ಹೋಗಿ ಶಾಲೆಗೆ ಬರಲು ತಡವಾಗುತ್ತದೆ. ಆದ್ದರಿಂದ ಇಂತಹ ಕಂಡೆಕ್ಟರ್ ಗಳ ಮೇಲೆ ಕ್ರಮಗೊಳ್ಳಬೇಕು.

ಮಂಗಳೂರು ನಗರವು , ಜಿಲ್ಲೆಯ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳ ತಾಣವಾದುದರಿಂದ ಜಿಲ್ಲೆಯ ನಾನಾ ಕಡೆಗಳಿಂದವಿದ್ಯಾರ್ಥಿಗಳು ಮಂಗಳೂರಿಗೆ ಆಗಮಿಸುತ್ತಾರೆ. ಆದ್ದರಿಂದ, ವಿದ್ಯಾರ್ಥಿಗಳಿಗಾಗಿ ಸ್ಪೆಶಲ್ ಸರಕಾರಿ ಪಿಕಪ್ ಬಸ್ಸುಗಳು(ಸ್ಟೂಡೆಂಟ್ಸ್ ಬಸ್ಸು) ಬೆಳಿಗ್ಗೆ 7 ಗಂಟೆಯಿಂದ 9.30ರ ತನಕ ಹಾಗೂ ಸಂಜೆ 3ರಿಂದ 7ಗಂಟೆಯ ತನಕ ಜಿಲ್ಲೆಯ ನಾನಾ ಕಡೆಗಳಿಂದ ಚಾಲನೆ ನೀಡಬೇಕು ಎಂದು ಇಫ್ರಾನ್ ಕುದ್ರೋಳಿ ಹೇಳಿದರು.

ಈ ಪ್ರತಿಭಟನೆಯಲ್ಲಿ ತಲ್ಹಾ ಇಸ್ಮಾಯಿಲ್ ಮಿಸ್ ಅಬ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English