ಅಧಿಕಾರಿಗಳು ಹಣ ಕೇಳಿದರೆ ನಮಗೆ ಹೇಳಿ: ಸಚಿವ ಜಾರ್ಜ್

4:42 PM, Saturday, February 8th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Mr-Georgeಬೆಂಗಳೂರುಃ ‘ಮೇಲಿನವರಿಗೆ ಕೊಡಬೇಕು’ ಎಂದು ಯಾವುದೇ ಇಲಾಖೆ ಅಧಿಕಾರಿಗಳು ಹಣ ಸುಲಿಗೆ ಮಾಡಲು ಯತ್ನಿಸಿದರೆ ಕೊಡಬೇಡಿ, ನಮಗೆ ತಿಳಿಸಿ… ಉದ್ಯಮಿಗಳು ಹಾಗೂ ನಾಗರಿಕರಿಗೆ ಗೃಹ ಸಚಿವ ಕೆ.ಜೆ. ಜಾರ್ಜ್ ಮಾಡಿರುವ ಮನವಿ ಹಾಗೂ ಹೇಳಿರುವ ಕಿವಿಮಾತಿದು. ಕ್ಲಬ್, ಮನರಂಜನಾ ತಾಣಗಳಲ್ಲಿ ಮೇಲಿನವವರಿಗೆ ಹಣ ನೀಡಬೇಕು ಎಂದು ಸುಲಿಗೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಮಗೆ ಯಾರ ದುಡ್ಡು ಬೇಕಿಲ್ಲ, ಯಾರೂ ನಮಗೆ ದುಡ್ಡು ಕೊಡಬೇಕಿಲ್ಲ.

ಅಂತಹ ಪದ್ಧತಿಯೂ ನಮ್ಮಲ್ಲಿಲ್ಲ. ಕೆಲವರು ನಮ್ಮ ಪಕ್ಕದಲ್ಲೇ ಇದ್ದು ಪೊಲೀಸರು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವ, ಒತ್ತಡ ಹೇರುವ ಯತ್ನ ನಡೆಸುತ್ತಾರೆ. ಅಂಥವರನ್ನು ಹತ್ತಿರಕ್ಕೆ ಸೇರಿಸಬೇಡಿ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಆರಂಭಿಸಲಾಗಿರುವ ‘ಸ್ಪಂದನ’ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರು ದಾಖಲಿಸಲು ನಿರಾಕರಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ದೂರುಗಳಿಗೆ ಕೂಡಲೇ ಸ್ಪಂದಿಸುವ ಬದಲು ಘಟನೆ ನಡೆದ ವ್ಯಾಪ್ತಿ ತಮ್ಮದಲ್ಲ ಎಂದು ನೊಂದವರನ್ನು ನಿರ್ಲಕ್ಷ್ಯಿಸುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಸುತ್ತೋಲೆ ಹೊರಡಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದರೂ ಅದೇ ಚಾಳಿ ಮುಂದುವರಿಸಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ಇಲಾಖೆಯಲ್ಲಿ ಒಳ್ಳೆಯವರ ನಡುವೆ ಭ್ರಷ್ಟರು ಸೇರಿಕೊಂಡಿದ್ದು ಅವರಿಗೆ ತಕ್ಕ ಪಾಠ ಕಲಿಸಬೇಕು. ಬೇಲಿ ಎದ್ದು ಹೊಲೆ ಮೇಯುವುದನ್ನು ಸಹಿಸುವುದಿಲ್ಲ. ಈಗಾಗಲೇ ಭ್ರಷ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದರು.

ಶಾಸಕ ಅಶ್ವತ್ಥ ನಾರಾಯಣ ಮಾತನಾಡಿ, ಕುಟುಂಬ ವ್ಯವಸ್ಥೆ ಕುಸಿತ, ಮಾನವೀಯ ಮೌಲ್ಯಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ದೂರು, ನ್ಯಾಯಾಲಯವೊಂದೆ ಪರಿಹಾರವಲ್ಲ. ಕೌಟುಂಬಿಕ ಕಲಹಗಳು, ವೃದ್ಧರ ನಿರ್ಲಕ್ಷ್ಯ ಮುಂತಾದ ಸಮಸ್ಯೆಗಳಿಗೆ ‘ಸ್ಪಂದನ’ ಪರಿಹಾರ ಒದಗಿಸಲಿದೆ ಎಂದು ಹೇಳಿದರು.

ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮ್ ಪಚಾವೋ, ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ನಿವೃತ್ತ ಡಿ.ಜಿ, ಐಜಿಪಿ ಎಸ್.ಟಿ,ರಮೇಶ್, ಪಾಲಿಕೆ ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಮಹಿಳೆ, ಮಕ್ಕಳು, ವೃದ್ಧರ ಸಹಾಯವಾಣಿ ಹಾಗೂ ಸಮುದಾಯ ಪೊಲೀಸಿಂಗ್ ವ್ಯವಸ್ಥೆಯನ್ನು ಒಂದೇ ಕಡೆ ಮಾಡುವ ಉದ್ದೇಶದಿಂದ ಸ್ಪಂದನ ಆರಂಭಿಸಲಾಗಿದೆ.

ಬೆಂಗಳೂರು ಉತ್ತರ ಭಾಗದ ನಾಗರೀಕರುಇದರ ಪ್ರಯೋಜನ ಪಡೆಯಬಹುದು. ಮುಂದಿನ ದಿನಗಳಲ್ಲಿ ಎಲ್ಲಾ 7 ಡಿಸಿಪಿ ವಿಭಾಗಗಳು, ಎಸಿಪಿ ಹಾಗೂ ಪ್ರತಿ ಪೊಲೀಸ್ ಠಾಣೆಗಳಿಗೂ ವಿಸ್ತರಿಸುವ ಉದ್ದೇಶವಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ತಿಳಿಸಿದರು.

ಅಪರಾಧಿಗಳೇ ಅಲ್ಪಸಂಖ್ಯಾತರು..!: ಸಮಾಜದ ಶಾಂತಿ ಕದಡುವ, ಅಪರಾಧ ಕೃತ್ಯಗಳಲ್ಲಿ ತೊಡಗುವ, ಗೂಂಡಾ ಪ್ರವೃತ್ತಿಯ ದುಷ್ಟರೇ ಅಲ್ಪಸಂಖ್ಯಾತರು. ಅಂತವರಿಂದ ಸಮಾಜವನ್ನು ಕಾಪಾಡುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಭಾಷೆ, ಮತೀಯ ಅಲ್ಪಸಂಖ್ಯಾತರಿಂದ ಯಾವುದೇ ತೊಂದರೆ ಇಲ್ಲ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಉಲ್ಲೇಖಿಸಿದರು.

ಸಿಐಡಿ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಗುಲ್ಬರ್ಗ ಎಸ್.ಐ ಮಲ್ಲಿಕಾರ್ಜನ ಬಂಡೆ ಶೂಟೌಟ್ ಪ್ರಕರಣ ತನಿಖೆ ನಡೆಸುತ್ತಿರುವ ಸಿಐಡಿ ಮೇಲೆ ಯಾವುದೇ ಒತ್ತಡ ಹೇರಿಲ್ಲ. ವರದಿ ನೀಡಲು ಯಾವುದೇ ಗಡುವು ಕೂಡಾ ವಿಧಿಸಿಲ್ಲ. ಸೂಕ್ಷ್ಮ ಪ್ರಕರಣವಾಗಿದ್ದು ಸಂಪೂರ್ಣ ತನಿಖೆ ನಡೆಯುವ ಅಗತ್ಯವಿದೆ. ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ನೈಟ್ ಲೈಫ್: ಬೆಂಗಳೂರಿನಲ್ಲಿ ನೈಟ್ ಲೈಫ್ ವಿಸ್ತರಣೆಗೆ ಪರ-ವಿರೋಧ ಅಭಿಪ್ರಾಯಗಳಿವೆ. ಸಾರ್ವಜನಿಕರು, ಉದ್ಯಮಿಗಳು ಪೊಲೀಸರೊಂದಿಗೆ ಚರ್ಚಿಸಿ ಒಮ್ಮತಾಭಿಪ್ರಾಯದ ಮೇಲೆ ನೈಟ್ ಲೈಫ್ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English