Brand ಮೋದಿ ಹಿಂದೆ 5 ಮಹಿಳೆಯರು

1:10 PM, Monday, February 24th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Narendra-Modiಬೆಂಗಳೂರುಃ ರಾಜಕೀಯ ನನಗೆ ಒಂಚೂರೂ ಗೊತ್ತಿಲ್ಲ ಎಂದು ಹೇಳುವವರಿಗೂ ಇಂದು ನರೇಂದ್ರ ಮೋದಿ ಹೆಸರು ಗೊತ್ತು. ದೇಶದ ಯಾವುದೇ ರಾಜಕಾರಣಿಗಿಂತ ಮೋದಿ ಇಂದು ಪ್ರಸಿದ್ಧ. ಅವರನ್ನು ದ್ವೇಷಿಸುವವರು ಕೋಟ್ಯಂತರ ಮಂದಿ ಇರಬಹುದು, ಆದರೆ ಅವರ ಬಗ್ಗೆ ಸದಾ ಒಂದಲ್ಲಾ ಒಂದು ವೇದಿಕೆಯಲ್ಲಿ ಚರ್ಚೆಯಂತೂ ನಡೆಯುತ್ತಿರುತ್ತದೆ. ಮೋದಿಗೆ ಬೇಕಿರುವುದೂ ಇದೇ. ರಾಹುಲ್ ಗಾಂಧಿಯೂ ಸೇರಿದಂತೆ ದೇಶದ ಯಾವುದೇ ರಾಜಕಾರಣಿಗೆ ಈ ಭಾಗ್ಯವಿಲ್ಲ.

ಹಾಗಾದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಳಿ ಪ್ರಚಾರದಮಂತ್ರದಂಡವಿದೆಯೇ? ಇಲ್ಲ. ಅವರಿಗೆ ಪ್ರಚಾರ ನೀಡುತ್ತಿದ್ದೇವೆ ಎಂಬುದು ಯಾರಿಗೂ ತಿಳಿಯದಂತೆಯೇ ಪ್ರಚಾರ ನೀಡಲು ಅವರ ಬಳಿ ಸಾರ್ವಜನಿಕ ಸಂಪರ್ಕಾಧಿಕಾರಿಗಳ (ಪಿ.ಆರ್.ಓ) ಟೀಮ್ ಇದೆ. ಈ ತಂಡ ಬಹಳ ರಹಸ್ಯವಾಗಿ ಕಾರ್ಯಾಚರಣೆ ಮಾಡುತ್ತದೆ.

ಇದಕ್ಕಿಂತಲೂ ಹೆಚ್ಚಾಗಿ, ಮೋದಿ ಬಗ್ಗೆ ಎಲ್ಲೇ ಅವಕಾಶ ಸಿಕ್ಕರೂ ಹಾಡಿ ಹೊಗಳುವ ಕೆಲ ಮಹಿಳಾ ಮಣಿಗಳಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎನ್ನುತ್ತೇವಲ್ಲ, ಹಾಗೆ ಮೋದಿ ಹಿಂದೆ ಐವರಿದ್ದಾರೆ! ಭವಿಷ್ಯದ ಪ್ರಧಾನಿ ಎಂದೇ ಬಿಂಬಿತವಾಗಿರುವ ಬಿಜೆಪಿಯ ಈ ನಾಯಕನಿಗೆ ಗರಿಷ್ಠ ಪ್ರಚಾರ ನೀಡುವುದೇ ಇವರ ಗುರಿ. ಅವರು ಯಾರು ಬಲ್ಲಿರೇನು?

ಈಕೆಯನ್ನು ಇಷ್ಟು ವರ್ಷ ಸಿನೆಮಾದಲ್ಲಿ ನೋಡಿದವರು ಈಗ ಪ್ರತಿದಿನ ರಾಷ್ಟ್ರೀಯ ನ್ಯೂಸ್ ಚಾನಲ್ಲುಗಳಲ್ಲಿ ನೋಡುತ್ತಿದ್ದಾರೆ. ಮೋದಿಗೆ ಇವರು ಪರಮನಿಷ್ಠರು. ಪ್ರತಿದಿನ ರಾತ್ರಿ ಯಾವುದಾದರೂ ಒಂದು ಇಂಗ್ಲಿಷ್ ಅಥವಾ ಹಿಂದಿ ಚಾನಲ್ಲಿನಲ್ಲಿ ಈಕೆ ಮೋದಿಯ ಬಗ್ಗೆ ಮಾತನಾಡಿಯೇ ಆಡುತ್ತಾರೆ. ಬಾಲಿವುಡ್‌ನಲ್ಲಿ ಅಮ್ಮ, ಆಂಟಿ ಪಾತ್ರಕ್ಕೆ ಸಾಕಷ್ಟು ಆಫರ್‌ಗಳಿದ್ದರೂ ಸದ್ಯಕ್ಕೆ ಮೋದಿ ಬ್ರ್ಯಾಂಡ್ ಕ್ರಿಯೇಟ್ ಮಾಡುವ ಕಾಯಕದಲ್ಲಿ ಫುಲ್‌ಟೈಮ್ ತೊಡಗಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಪತ್ರಕರ್ತೆ. ಈಗ ಮೋದಿಯ ಪ್ರಚಾರಕರ್ತೆ. ಈಕೆಯದು ಬಹಳ ಕುತೂಹಲಕಾರಿ ವ್ಯಕ್ತಿತ್ವ. ಗುಜರಾತ್‌ನಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಭರೂಚ್ ಪ್ರದೇಶದಿಂದ ಬಂದವರು. ಹಿಂದೊಮ್ಮೆ ಗುಜರಾತ್‌ನ ಕಾಂಗ್ರೆಸ್ ವಕ್ತಾರೆಯನ್ನಾಗಿ ಮಾಡಬೇಕೆಂದು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಈಕೆಯನ್ನು ಕರೆದುಕೊಂಡು ದಿಲ್ಲಿಗೆ ಹೋಗಿದ್ದರು. ನಂತರ ಮೋದಿ ಹೈಜಾಕ್ ಮಾಡಿದರು. ಹೇಗೆ ಮಾಡಿದರು ಎಂಬುದು ಎಲ್ಲರಿಗೂ ಆಶ್ಚರ್ಯ. ಮುಸ್ಲಿಮರಲ್ಲಿ ಹೆಚ್ಚಿನವರು ಮೋದಿಯನ್ನು ದ್ವೇಷಿಸಿದರೂ ಈಕೆ ಮಾತ್ರ ನರೇಂದ್ರ ಮೋದಿಯಿಂದಾಗಿಯೇ ಗುಜರಾತ್‌ನಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ವಾದಿಸುತ್ತಾರೆ.

ಸುಪ್ರೀಂಕೋರ್ಟ್‌ನಲ್ಲಿ ವಕೀಲೆ. ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತೆ. ಬಿಜೆಪಿಯ ರಾಷ್ಟ್ರೀಯ ವಕ್ತಾರೆ. ಮೋದಿಯನ್ನು ಸಮರ್ಥಿಸಿಕೊಂಡು ಮಾತನಾಡುವ ಸಂದರ್ಭ ಹಾಗೂ ಅವಕಾಶ ಬಂದಾಗಲೆಲ್ಲ ಟೀವಿ ಚಾನಲ್ಲು ಮತ್ತು ಪತ್ರಿಕೆಗಳ ಮುಂದೆ ಹಾಜರ್. ಬಿಜೆಪಿಯ ಹಳೆಯ ಅನುಭವಿ ವಕ್ತಾರರು ಮೋದಿಯನ್ನು ಸಮರ್ಥಿಸಿಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಈಕೆ ಮೋದಿ ಪರ ಮಾತನಾಡುತ್ತಾರೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ತಪ್ಪಿತಸ್ಥರು ಎಂದು ಸಾಬೀತಾಗುವವರೆಗೂ ಅವರು ತಪ್ಪಿತಸ್ಥರಲ್ಲ ಎಂಬುದು ಈಕೆಯ ವಾದ.

‘ಕ್ಯೂಂ ಕಿ ಸಾಸ್ ಭಿ ಕಭಿ ಬಹು ಥಿ’ ಧಾರಾವಾಹಿಯಿಂದಾಗಿ ಮನೆಮನೆಯಲ್ಲೂ ಈಕೆಯನ್ನು ಗುರುತು ಹಿಡಿಯುತ್ತಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ ಬಿಜೆಪಿಯ ರಾಜ್ಯಸಭೆ ಸದಸ್ಯೆಯಾಗಿ, ರಾಜಕಾರಣದಲ್ಲಿ ಮಿಂಚಿ, ಈಗ ಬಿಜೆಪಿಯ ಸ್ಟಾರ್ ಪ್ರಚಾರಕಿಯಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಮೋದಿಗೆ ಆಪ್ತೆ. ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮನ ಗೆಲ್ಲುವ ಗುಟ್ಟು ಈಕೆಗೆ ಗೊತ್ತು. ಹಾಗಾಗಿ ಮೋದಿ ಈ ದೇಶದ ಪ್ರಧಾನಿಯಾಗಬೇಕು ಎಂದು ಸ್ಮೃತಿ ಇರಾನಿ ಹೇಳಿದರೆ ಕಡಿಮೆಯೆಂದರೂ ಎರಡು ಕೋಟಿ ಮಹಿಳೆಯರು ‘ಹೌದು, ಆಗಲೇಬೇಕು’ ಎನ್ನುತ್ತಾರೆ!

ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ನೋಡಲು ರೂಪವತಿ. ಮುಂಬೈನಲ್ಲಿ ಫ್ಯಾಷನ್ ಶೋಗಳನ್ನೂ ನಡೆಸುತ್ತಾರೆ, ಬಿಜೆಪಿಯ ರ್ಯಾಲಿಗಳಲ್ಲೂ ಮಾತನಾಡುತ್ತಾರೆ. ಮಹಾರಾಷ್ಟ್ರ ಬಿಜೆಪಿಗೆ ಈಕೆ ವಕ್ತಾರೆ. ಮೋದಿ ಪ್ರಧಾನಿಯಾಗಬೇಕು ಎಂದು ಬಲವಾಗಿ ಪ್ರತಿಪಾದಿಸುವವರಲ್ಲಿ ಬಹುಶಃ ಇವರು ಮೊದಲಿಗರು. ಭ್ರಷ್ಟಾಚಾರ ಈ ದೇಶದಿಂದ ತೊಲಗಬೇಕೆಂದರೆ ಮೋದಿಯೇ ಅದಕ್ಕೆ ಮದ್ದು ಎಂಬುದು ಇವರ ವಾದ. ನೋಡಲು ಸುಂದರಿಯಾಗಿರುವುದರಿಂದ ಟೀವಿ ಚಾನಲ್ಲುಗಳು ಪ್ರತಿದಿನ ರಾತ್ರಿಯ ಚರ್ಚಾಗೋಷ್ಠಿಗಳಿಗೆ ಇವರನ್ನು ಕರೆಯುತ್ತವೆ. ಇವರೂ ತಪ್ಪದೆ ಹೋಗಿ ಮೋದಿ ಪರ ಮಾತನಾಡುತ್ತಾರೆ.

ಮೋದಿಯನ್ನು ಸಮರ್ಥಿಸಿಕೊಳ್ಳಲು ಐವರು ಮಹಿಳೆಯರಿದ್ದರೆ, ಮೋದಿಯನ್ನೂ ಅವರ ಕೀರ್ತನಕಾರರನ್ನೂ ನೀವಾಳಿಸಿ ಎಸೆಯಲು ಒಬ್ಬ ಫೈರ್‌ಬ್ರ್ಯಾಂಡ್ ಇದ್ದಾರೆ. ಆಕೆ ತೀಸ್ತಾ ಸೆಟಲ್ವಾಡ್. ಗುಜರಾತ್‌ನವರೇ ಆದ ಈಕೆ ಮೋದಿಯನ್ನು ಯಾವ ಪರಿ ವಿರೋಧಿಸುತ್ತಾರೆಂದರೆ, ಮೋದಿ ಪ್ರಧಾನಿಯಾಗುವುದಕ್ಕಿರುವ ಅತಿದೊಡ್ಡ ಅಡ್ಡಿಗಳಲ್ಲಿ ಇವರೂ ಒಂದು. ಎನ್‌ಜಿಒ ಮೂಲಕ ಹೋರಾಡುತ್ತಿದ್ದಾರೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ಹತ್ತಾರು ಕೇಸು ಹಾಕಿಸಿದ್ದಾರೆ. ಮೋದಿಯಿಂದ ತಮಗೆ ಅನ್ಯಾಯವಾಗಿದೆ ಎಂದು ಯಾರೇ ಮುಂದೆ ಬಂದರೂ ಅವರ ಹಿಂದೆ ತೀಸ್ತಾ ಹೋಗುತ್ತಾರೆ. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ಮೋದಿ ಇಂದು ಇಷ್ಟೆಲ್ಲಾ ಕಷ್ಟ ಅನುಭವಿಸುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ಇವರೇ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English