ಮಂಗಳೂರು: ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಗೆಲವು ಸಾಧಿಸಿದ್ದು, ಮಂಗಳೂರು ಲೋಕಸಭೆ ಕ್ಷೇತ್ರದಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ 598 ಮತಗಳ ಪೈಕಿ 547 ಮತಗಳು ಚಲಾವಣೆಯಾಗಿದ್ದು, 7 ಮತಗಳು ಅಸಿಂಧುಗೊಂಡಿವೆ. ಈ ಪೈಕಿ ಜನಾರ್ದನ ಪೂಜಾರಿ 478 ಮತ ಪಡೆದರೆ, ಕಣಚೂರು ಮೋನು 62 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 10 ನಿಮಿಷ ತಡವಾಗಿ ಬಂದ ಶಾಸಕ ಮೊಯಿನುದ್ದೀನ್ ಬಾವಾಗೆ ಮತ ಹಾಕುವ ಅವಕಾಶ ನೀಡಲಿಲ್ಲ.
ಆಂತರಿಕ ಚುನಾವಣೆ ಫಲಿತಾಂಶವನ್ನು ಎಐಸಿಸಿ ಕೇಂದ್ರ ಸಮಿತಿಗೆ ಕಳುಹಿಸಲಾಗಿದ್ದು, ಅಲ್ಲಿ ಅಧಿಕೃತವಾಗಿ ಅಭ್ಯರ್ಥಿ ಆಯ್ಕೆ ಘೋಷಣೆಯಾಗಲಿದೆ. ಅಲ್ಲದೇ ಮುಂದಿನ ಎಲ್ಲ ಚುನಾವಣೆಗಳಲ್ಲೂ ಇದೇ ಮಾದರಿ ಅನುಸರಿಸಲಾಗುವುದು ಎಂದು ರಾಜ್ಯ ಉಸ್ತುವಾರಿ ವಹಿಸಿರುವ ಶಾಂತಾರಾಮ ನಾಯ್ಕ ತಿಳಿಸಿದ್ದಾರೆ.
Click this button or press Ctrl+G to toggle between Kannada and English