ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ : ಜನಾರ್ಧನ ಪೂಜಾರಿ

Monday, March 17th, 2014
B Janardhana Poojary

ಮಂಗಳೂರು : ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತಾಧಿಕಾರಿಗಳು ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರಿ ಅಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಲಿಕೆ ಆಡಳಿತಾಧಿಕಾರಿಗಳು ಈಗಾಗಲೇ ಆಸ್ತಿ ತೆರಿಗೆಯನ್ನು ಶೇ. 15ರಷ್ಟು ಏರಿಕೆ […]

ಪೂಜಾರಿಗೆ ಒಲಿದ ಮತದೇವರು!

Monday, March 10th, 2014
Janardhan-Poojary

ಮಂಗಳೂರು: ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಗೆಲವು ಸಾಧಿಸಿದ್ದು, ಮಂಗಳೂರು ಲೋಕಸಭೆ ಕ್ಷೇತ್ರದಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ 598 ಮತಗಳ ಪೈಕಿ 547 ಮತಗಳು ಚಲಾವಣೆಯಾಗಿದ್ದು, 7 ಮತಗಳು ಅಸಿಂಧುಗೊಂಡಿವೆ. ಈ ಪೈಕಿ ಜನಾರ್ದನ ಪೂಜಾರಿ 478 ಮತ ಪಡೆದರೆ, ಕಣಚೂರು ಮೋನು 62 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 10 ನಿಮಿಷ ತಡವಾಗಿ ಬಂದ ಶಾಸಕ ಮೊಯಿನುದ್ದೀನ್ ಬಾವಾಗೆ ಮತ ಹಾಕುವ ಅವಕಾಶ ನೀಡಲಿಲ್ಲ. […]