ಬೆಂಗಳೂರು: ಮಧುಮೇಹ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ‘ಮನದ ಮರೆಯಲ್ಲಿ’ ಚಿತ್ರದ ನಟಿ ವಿಂದ್ಯಾ ಬೌರಿಂಗ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ವಿಂದ್ಯಾಗೆ ಅಳವಡಿಸಲಾಗಿದ್ದ ವೆಂಟಿಲೇಟರ್‌ನ್ನು ಶನಿವಾರ ತೆಗೆಯಲಾಗಿತ್ತು. ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಂದ್ಯಾ ಅವರ ಆರೋಗ್ಯ ಇನ್ನಷ್ಟು ಸುಧಾರಿಸಬೇಕಿದೆ. ಹೀಗಾಗಿ ಮೂರು ದಿನ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ಮನದ ಮರೆಯಲ್ಲಿ ಚಿತ್ರದ ನಿರ್ದೇಶಕ ರಾಜೀವ್ ನೇತ್ರಾ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಿಂದ್ಯಾ, ಜೀವನದಲ್ಲಿ ಬೇಸರವಾಗಿದ್ದು ತನಗೆ ಬದುಕಲು ಇಷ್ಟವಿಲ್ಲ ಎಂದು ಪೋಷಕರಿಗೆ ಹೇಳುತ್ತಿದ್ದರು. ಹಳೆ ಪ್ರಿಯಕರನಿಂದ ಅವಮಾನಗೊಂಡು ಮಾಧ್ಯಮಗಳಲ್ಲಿ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಿದ್ದು, ಬೇಸರವಾಗಿದೆ ಎಂದು ವಿಂದ್ಯಾ ಪೋಷಕರಿಗೆ ಹೇಳಿದ್ದಾರೆ. ಕಳೆದ ಮಂಗಳವಾರ ಮಾಗಡಿ ರಸ್ತೆ ದಾಸರಹಳ್ಳಿಯಲ್ಲಿನ ಮನೆಯಲ್ಲಿ ತಾಯಿಯ ಮಧುಮೇಹ ಮಾತ್ರೆಗಳನ್ನು ಸೇವಿಸಿ ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂರು ತಿಂಗಳಿಂದ ಪ್ರೀತಿಸುತ್ತಿದ್ದ ಮಂಜುನಾಥ ತನ್ನ ಬಗ್ಗೆ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡಿ, ನನ್ನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಬಿಡುಗಡೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ನೊಂದು ವಿಂದ್ಯಾ ಆತ್ಮಹತ್ಯೆಗೆ ಯತ್ನಿಸಿದ್ದರು.
Click this button or press Ctrl+G to toggle between Kannada and English