ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಮೇಯರ್ ಆಗಿ ಕಾಂಗ್ರೆಸ್ ಸದಸ್ಯ ಮಹಾಬಲ ಮಾರ್ಲ ಅವರು ಮಾ. 13ರಂದು ಆಯ್ಕೆಯಾಗಿದ್ದಾರೆ. ಕವಿತಾ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ತಿಲಕ್‌ರಾಜ್ ಅವರು 20 ಮತಗಳನ್ನು ಪಡೆದರೆ ಮಾರ್ಲ ಅವರು 37 ಮತಗಳನ್ನು ಪಡೆದು ಜಯಶಾಲಿಯಾದರು. ಮಹಾಬಲ ಮಾರ್ಲ ಅವರು ಕದ್ರಿ ಪದವು ವಾರ್ಡ್‌ನಿಂದ ಮೂರು ಬಾರಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬೆಳಗ್ಗೆ 11 ಗಂಟೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.. ಈ ಬಾರಿಯ ಮೇಯರ್ ಗಾದಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಉಪಮೇಯರ್ ಆದ ಕವಿತಾ ಅವರು ಹೊಯಿಗೆ ಬಜಾರ್ ವಾರ್ಡ್‌ನ ಸದಸ್ಯರಾಗಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಪೂರ್ಣಿಮಾ ಅವರು ಬಿಜೆಪಿಯಿಂದ ಸ್ಪರ್ಧಿಸಿ 20ಮತಗಳನ್ನು ಪಡೆದರು.
Click this button or press Ctrl+G to toggle between Kannada and English