ಒಮಾನ್ ಮುಸ್ಲಿಂ ರಾಜನ ಕ್ಷೇಮಕ್ಕಾಗಿ ಕೊಡ್ಯಡ್ಕದ ಹಿಂದೂ ದೇವಳದಲ್ಲಿ ಚಂಡಿಕಾಯಾಗ

11:36 PM, Tuesday, July 15th, 2014
Share
1 Star2 Stars3 Stars4 Stars5 Stars
(No Ratings Yet)
Loading...
Sulthan Qboos

ಮಂಗಳೂರು : ಏಳು ಸಮುದ್ರದಾಚೆಯ ಅರಬ್ ದೇಶ ಒಮಾನ್ ಗೂ ಇಲ್ಲಿಯ ಮೂಡಬಿದಿರೆಗೂ ಅದೆಂತಹ ಸಂಬಂಧ ಎನ್ನಬಹುದು ಮೂಡಬಿದಿರೆಯ ಪ್ರಸಿದ್ಧ ದೇವಾಲಯವಾದ ಅನಿವಾಸಿ ಭಾರತೀಯರೊಬ್ಬರು ನಿರ್ಮಿಸಿ ಹೆಸರುವಾಸಿಯಾಗಿರುವ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಮಾನಿನ ರಾಜನ ಆರೋಗ್ಯಕ್ಕೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಯಾಗವೊಂದು ನಡೆದಿದೆ.

ಪ್ರಸ್ತುತ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ ಅವರ ಕ್ಷೇಮಕ್ಕಾಗಿ ಮೂಡಬಿದ್ರೆಯ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ನಿನ್ನೆ ಮಧ್ಯಾಹ್ನ ಚಂಡಿಕಾ ಮಹಾಯಾಗ ಮತ್ತು ಸಾಮೂಹಿಕ ಪ್ರಾಥನೆಯೊಂದಿಗೆ ವಿವಿಧ ಧಾಮರ್ಿಕ ಕಾರ್ಯಕ್ರಮ ನಡೆದಿದೆ.

ಅನಿವಾಸಿ ಭಾರತೀಯರಾಗಿರುವ ಕೊಡ್ಯಡ್ಕ ಜಯರಾಂ ಹೆಗ್ಡೆಯವರು ಈ ಕ್ಷೇತ್ರದ ಸ್ಥಾಪಕ ಮೊಕ್ತೇಸರರಾಗಿದ್ದು ಇವರ ಉದ್ಯಮಗಳು ಏಳು ಕಡಲಾಚೆಯ ಅರಬ್ ದೇಶದಲ್ಲಿರುವುದರಿಂದ ಇದೇ ಸಂಪರ್ಕದಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಆಸ್ತಿಕತೆಯಿಂದ ಧ್ಯಾನ ಮಾಡಿದಲ್ಲಿ ಆರೋಗ್ಯ ಸುಧಾರಣೆ ಆಗುವುದು ಎಂಬ ನಂಬಿಕೆಯಿಂದಲೇ ಈ ಯಾಗ ನೆರವೇರಿದೆ ಜೊತೆಗೆ ವಿಶೇಷ ಅನ್ನ ಪ್ರಸಾದವನ್ನು ಸಹ ವಿತರಿಸಲಾಗಿದೆ ಎಂದು ತಿಳಿದು ಬಂದಿದೆ.

ಚಂಡಿಕಾ ಯಾಗದ ಪ್ರಸಾದ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನದಲ್ಲಿ ಕೈಗೊಂಡು ಪ್ರಾರ್ಥನೆಯ ಮೂಲಕ ಪಡೆದುಕೊಂಡ ಪ್ರಸಾದವು ಸದ್ಯದಲ್ಲಿಯೇ ವಿಮಾನದ ಮೂಲಕ ಒಮನ್ ದೇಶಕ್ಕೆ ರವಾನಿಸಿ ಅಲ್ಲಿ ಅನಾರೋಗ್ಯದಿಂದ ಇರುವ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ರವರಿಗೆ ತಲುಪಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಅನ್ನದಾನಕ್ಕೆ ಶ್ರೇಷ್ಠ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕ್ಷೇತ್ರದಲ್ಲಿ ಅನ್ನದಾನ ಸ್ವೀಕರಿಸುವ ಭಕ್ತಾಧಿಗಳಿಗೆ ಶಿಸ್ತು ಹಾಗೂ ನಿಯಮಗಳನ್ನು ಧ್ವನಿ ವರ್ಧಕದ ಮೂಲಕ ಹೇಳುವಂತಹ ಪರಿಪಾಠದ ವ್ಯವಸ್ಥೆ ಇಲ್ಲಿದೆ. ಇದು ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ ಜೊತೆಗೆ ಇಲ್ಲಿನ ದೇವಸ್ಥಾನದ ಸಿಬ್ಬಂದಿಗಳಲ್ಲಿ ಮಹಿಳೆಯರು ಗರಿಷ್ಠವಾಗಿರುವುದು ಸಹ ವಿಶೇಷವಾಗಿದೆ.

ಮುಂಡ್ಕೂರಿನ ದುರ್ಗಾಪರಮೇಶ್ವರೀ ದೇವಸ್ಥಾನದ ಮಾಜಿ ಮೊಕ್ತೇಸರ ಜಗದೀಶ್ಚಂದ್ರ ಹೆಗ್ಡೆ, ಮಿತ್ತಬೈಲ್ ವಾಸುದೇವ ನಾಯಕ್, ಅನಡ್ಕ ದಿನೇಶ್ ಕುಮಾರ್, ಹಾಗೂ ನೂರಾರು ಭಕ್ತರು ನೆರೆದಿದ್ದರು.

Sulthan Qboos

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English