ಕಾವೂರು ಮೂಲಭೂತ ಸೌಕರ್ಯ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ

6:52 PM, Saturday, March 14th, 2015
Share
1 Star2 Stars3 Stars4 Stars5 Stars
(5 rating, 4 votes)
Loading...

yogish shetty

ಮಂಗಳೂರು : ಕುಂಜತ್ತಬೈಲು ಗ್ರಾಮದ ಕಾವೂರು ಶ್ರೀ ವೈದ್ಯನಾಥ ದೇವಸ್ಥಾನದಿಂದ ತೋಡಲ ಗುಡ್ಡೆ ಮಲ್ಲಿ ಲೇಔಟ್ ವರೆಗೆ ಸುಮಾರು 600 ಮನೆಗಳಿದ್ದು , ಅಲ್ಲದೆ ಆದಿಚುಂಚನಗಿರಿ ಶಾಲೆ ಹಾಗೂ ಮಠ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳೆಂದು ಇಲ್ಲಿ ಸುಮಾರು 750 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿ ಉಪಯೋಗಿಸುವ ನೀರನ್ನು ರಸ್ತೆಗೆ ಬಿಡುತ್ತಿದ್ದು ಹಾಗೂ ತೆರೆದ ಚರಂಡಿಯಲ್ಲಿ ಶೌಚಾಲಯ ಹಾಗೂ ಇತರ ಕೊಳಚೆ ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಪ್ರಯಾಣಿಸಬೇಕಾದರೆ ವಾಸನೆಯಿಂದಾಗಿ ಮೂಗು ಹಿಡಿದು ಹೋಗಬೇಕಾಗುತ್ತದೆ. ಈ ಪರಿಸ್ಥಿತಿಯು ಮಲೇರಿಯಾ ಪೈಲೇರಿಯಾ ಎಂಬ ಭೀಕರ ರೋಗಗ ಉತ್ಪಾದನಾ ಕೇಂದ್ರವಾಗಿರುತ್ತದೆ. ಈ ಪ್ರದೇಶದಲ್ಲಿ ಡ್ರೈನೇಜ್ ವ್ಯವಸ್ಥೆ ಇರುವುದಿಲ್ಲ. ಇದರಿಂದ ತುಂಬಾ ಅನಾನುಕೂಲವಾಗಿರುತ್ತದೆ.

ರಸ್ತೆಯ ಸ್ವಲ್ಪ ಭಾಗವು ಕಾಂಕ್ರೀಟೀಕರಣವಾಗಿದ್ದು, ಉಳಿದ ರಸ್ತೆಯು ಮಣ್ಣು ಹಾಗೂ ದೂಳಿನಿಂದ ಕೂಡಿದ್ದು, ರಸ್ತೆ ಯಲ್ಲಿ ನಡೆದಾಡುವುದು, ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಲವಾರು ಬಾರಿ ಸ್ಥಳೀಯರು ಅಪಘಾತಗೊಂಡಿರುತ್ತಾರೆ. ಮನೆಗಳು ಹೆಚ್ಚಾಗಿ ಹೋಗುತ್ತಿರುವುದರಿಂದ ಡ್ರೈನೇಜ್ ಹಾಗೂ ರಸ್ತೆ ಡಾಮರೀಕರಣ ಮಾಡಬೇಕಾಗಿ ಒತ್ತಾಯಿಸಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಇವರ ನೇತ್ರತ್ವದಲ್ಲಿ ಶನಿವಾರ, ಮಾರ್ಚ್ 14 ರಂದು ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟಣಾ ಜಾಥಾ ನಡೆಯಿತು.

ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಹಿಳಾ ಘಟಕದ ಅದ್ಯಕ್ಷೆ ಜ್ಯೋತಿಕಾ ಜೈನ್, ವಿಜಯ ನಾಯರ್, ಸ್ಥಳೀಯ ಮಹಿಳಾ ಘಟಕದ ಅಧ್ಯಕ್ಷರಾದ ಪೆಲ್ಸಿ ಲೋಬೊ, ಹೆಲನ್ ಟೀಚರ್, ದಿನೇಶ್ ಶೇಟ್, ಅರ್ಚನ, ನಾಗರತ್ನ, ಕಾಮತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಕಾರ್ಪೊರೇಟರ್ ಮಧು ಕಿರಣ್ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾನು ಸಂರ್ಪೂಣ ತನ್ನನ್ನು ತೊಡಗಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಯೋಗೀಶ್ ಶೆಟ್ಟಿ ಜಪ್ಪುರವರು ಒಂದು ತಿಂಗಳಿನೊಳಗೆ ಡ್ರೈನೇಜ್, ರಸ್ತೆ, ಮತ್ತು ಮೂಲಬೂತ ಸೌಕರ್ಯ ಒದಗಿಸುವಲ್ಲಿ ಮಹಾನಗರಪಾಲಿಕೆ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುವಲ್ಲಿ ಆಸಕ್ತಿ ವಹಿಸದಿದ್ದಲ್ಲಿ, ನಾಗರಿಕರ ಹಿತಾಸಕ್ತಿ ಕಾಪಾಡುವಲ್ಲಿ ವಿಪಲವಾದಲ್ಲಿ ನಗರಪಾಲಿಕೆಯ ಮುಂದೆ ಧರಣಿ ಸತ್ಯ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English