ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದ ಎರಡನೇ ಚಿತ್ರ ‘ಪವಿತ್ರ’ (ತುಳು ಸಿನಿಮಾ)ದ ಮುಹೂರ್ತ ಇಂದು ಬೆಳಿಗ್ಗೆ ನಾಗುರಿ (ಕೋಟಿ-ಚೆನ್ನಯ) ಗರೋಡಿಯಲ್ಲಿ ನಡೆಯಿತು.
ಜಯಕಿರಣ ಮೂವೀಸ್‌ನ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕ್ಯಾಮರಾ ಆನ್ ಮಾಡುವ ಮೂಲಕ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಶ್ರೀ ಮುತ್ತು ಫಿಲಂಸ್ ನ ಪ್ರವೀಣ್ ಕೊಂಚಾಡಿ, ಸಾಹಿತಿ ಮಧು ಸುರತ್ಕಲ್, ತುಳು ರಂಗಭೂಮಿಯ ಕಲಾವಿದರಾದ ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ರಘ ಪಾಂಡೇಶ್ವರ್, ಟೆನ್ನೀಸ್ ಕೃಷ್ಣ, ಮೋಹನ್ ರೈ, ಮೊದಲಾದವರು ಉಪಸ್ಥಿತರಿದ್ದರು.
ತಮಿಳು ಮತ್ತು ತೆಲುಗಿನ ಖ್ಯಾತ ನಿರ್ದೇಶಕ ನಾಗ ವೆಂಕಟೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರ ಕಥೆ ಹಾಗೂನಿರ್ಮಾಣ ಅನಂತ್ ರಾಮ್ ರಾವ್ ಎರ್ಮಾಳ್, ಸಂಭಾಷಣೆ/ ಸಹ ನಿರ್ದೇಶನ ರಂಜಿತ್ ಸುವರ್ಣ ಕೂಳೂರು,ಕಾರ್ಯಕಾರಿ ನಿರ್ಮಾಪಕರು ಚಿದಂಬರಂ, ಕ್ಯಾಮರಾಮ್ಯಾನ್ ಜೆ.ಜೆ.ಕೃಷ್ಣ, ಸಾಹಿತ್ಯ ರಂಜಿತ್ ಸುವರ್ಣ ಕೂಳೂರು/ಪ್ರವೀಣ್ ತೊಕ್ಕೋಟ್, ಕಲಾವಿದರು ಶ್ರವಂತ್ (ನಾಯಕ), ಚಿರಶ್ರೀ(ನಾಯಕಿ) ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ ಪಡೀಲ್, ಟೆನ್ನೀಸ್ ಕೃಷ್ಣ, ರಘು ಪಾಂಡೇಶ್ವರ್, ಉಮೇಶ್ ಮಿಜಾರ್, ಶೋಭಾ ರೈ ಹಾಗೂತುಳು-ಕನ್ನಡ ಚಿತ್ರದ ಇನ್ನಿತರ ಖ್ಯಾತ ಕಲಾವಿದರಿದ್ದಾರೆ.
ಚಿತ್ರದಲ್ಲಿ 5 ಹಾಡುಗಳಿದ್ದು, ರಿಷಾಲ್ ಶಾಹೀ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಮಂಗಳೂರು ಮತ್ತು ಮಲ್ಪೆಪರಿಸರದಲ್ಲಿ ನಿರಂತರ 25 ದಿನಗಳ ಚಿತ್ರೀಕರಣ ನಡೆಯಲಿದೆ. ಸಿದ್ದರಾಜು ಅವರ ಸಾಹಸ, ಆಶೋಕ್‌ರಾಜ್ ಅವರ ಕೋರಿಯೋಗಾಫಿ ಚಿತ್ರದಲ್ಲಿದೆ.
Click this button or press Ctrl+G to toggle between Kannada and English