ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

12:44 AM, Friday, January 8th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

ಕಾಸರಗೋಡು: ರೈಲುಗಾಡಿಯಲ್ಲಿ ಟಿಕೇಟು ತಪಾಸಣೆ ನಡೆಸುವ ಟಿಟಿಇಯ ಸೋಗಿನಲ್ಲಿ ರೈಲು ಪ್ರಯಾಣಿಕರನ್ನು ವಂಚಿಸುತ್ತಿದ್ದ ಯುವಕನ್ನು ರೈಲ್ವೇ ಪೋಲೀಸರು ಬಂಧಿಸಿದ್ದಾರೆ.

ಮಂಗಳೂರು&ಕಣ್ಣೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಟಿಟಿಇ ಎಂದು ಹೇಳಿ ಪ್ರಯಾಣಿಕರನ್ನು ನಂಬಿಸಿ ಟಿಕೇಟ್ ಪರಿಶೀಲಿಸುವ ನೆಪದಲ್ಲಿ ಹಣ ಕಬಳಿಸುವ ಯತ್ನದಲ್ಲಿದ್ದ ಕಣ್ಣೂರು ಪಾಪನಶ್ಚೇರಿ ನಿವಾಸಿ ಪಿ.ಪಿ.ನಿಯಾಸ್(21)ಬಂಧಿತನಾದ ಆರೋಪಿ.

ಈತನನ್ನು ಕಾಸರಗೋಡು ರೈಲ್ವೇ ಪೋಲೀಸರು ಬಂಧಿಸಿರುವರು.ನಿಯಾಸ್ ಅನುಮಾನಾಸ್ಪದನಾಗಿ ಟಿಕೇಟ್ ಪರಿಶೀಲಿಸುತ್ತಿರುವುದನ್ನು ಗಮನಿಸಿ ರೈಲು ಪ್ರಯಾಣಿಕರಾದ ಕಲ್ಲಿಕೋಟೆ ನಿವಾಸಿ ಶಾಫಿ ಎಂಬವರು ಪಾಲ್ಘಾಟ್ ರೈಲ್ವೇ ಕಮರ್ಶಿಯಲ್ ಕಂಟ್ರೋಲ್ ರೂಂ ಗೆ ಪೋನಾಯಿಸಿ ಈ ಬಗ್ಗೆ ಮಾಹಿತಿ ನೀಡಿದ್ದರು.ಇದರಿಂದ ಕಾರ್ಯಪ್ರವೃತ್ತರಾದ ಪೋಲೀಸರು ಹೊಸದುರ್ಗ ರೈಲ್ವೇ ನಿಲ್ದಾಣದಿಂದ ನಿಯಾಸ್ ನನ್ನು ಸೆರೆ ಹಿಡಿದು ಬಳಿಕ ಕಾಸರಗೋಡು ರೈಲ್ವೇ ಪೋಲೀಸರಿಗೆ ಹಸ್ತಾಂತರಿಸಲಾಯಿತು.ರೈಲ್ವೇ ಎಸ್‌ಪಿ ಸಿ.ರಾಮಚಂದ್ರನ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English