ಯುವ ಜನತೆಯು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸಿಕೊಳ್ಳಬೇಕು

Friday, February 28th, 2020
sahitya

ಮಂಗಳೂರು : ಯುವ ಜನತೆಯು ಸಾಹಿತ್ಯದಲ್ಲಿ ಅಭಿರುಚಿ ಮೂಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಾರ್ಗದರ್ಶನದೊಂದಿಗೆ ಹಮ್ಮಿಕೊಳ್ಳಲಿದೆ ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿಜಯಲಕ್ಷ್ಮಿ.ಬಿ. ಶೆಟ್ಟಿ ನುಡಿದರು. ಅವರು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ವಿವಿಧ ದತ್ತಿ ಕಾರ್ಯಕ್ರಮಗಳನ್ನು ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. […]

ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

Friday, January 8th, 2016
ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

ಕಾಸರಗೋಡು: ರೈಲುಗಾಡಿಯಲ್ಲಿ ಟಿಕೇಟು ತಪಾಸಣೆ ನಡೆಸುವ ಟಿಟಿಇಯ ಸೋಗಿನಲ್ಲಿ ರೈಲು ಪ್ರಯಾಣಿಕರನ್ನು ವಂಚಿಸುತ್ತಿದ್ದ ಯುವಕನ್ನು ರೈಲ್ವೇ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು&ಕಣ್ಣೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಟಿಟಿಇ ಎಂದು ಹೇಳಿ ಪ್ರಯಾಣಿಕರನ್ನು ನಂಬಿಸಿ ಟಿಕೇಟ್ ಪರಿಶೀಲಿಸುವ ನೆಪದಲ್ಲಿ ಹಣ ಕಬಳಿಸುವ ಯತ್ನದಲ್ಲಿದ್ದ ಕಣ್ಣೂರು ಪಾಪನಶ್ಚೇರಿ ನಿವಾಸಿ ಪಿ.ಪಿ.ನಿಯಾಸ್(21)ಬಂಧಿತನಾದ ಆರೋಪಿ. ಈತನನ್ನು ಕಾಸರಗೋಡು ರೈಲ್ವೇ ಪೋಲೀಸರು ಬಂಧಿಸಿರುವರು.ನಿಯಾಸ್ ಅನುಮಾನಾಸ್ಪದನಾಗಿ ಟಿಕೇಟ್ ಪರಿಶೀಲಿಸುತ್ತಿರುವುದನ್ನು ಗಮನಿಸಿ ರೈಲು ಪ್ರಯಾಣಿಕರಾದ ಕಲ್ಲಿಕೋಟೆ ನಿವಾಸಿ ಶಾಫಿ ಎಂಬವರು ಪಾಲ್ಘಾಟ್ ರೈಲ್ವೇ ಕಮರ್ಶಿಯಲ್ ಕಂಟ್ರೋಲ್ ರೂಂ […]